ಜಿಂದಾಲ್ ಕಾರಖಾನೆ ಆವರಣದಲ್ಲಿ ಸುರಕ್ಷತೆಯ ಅಣುಕು ಪ್ರದರ್ಶನ

ಬಳ್ಳಾರಿ, ಜ.08: ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜೆ.ಎಸ್.ಡಬ್ಲ್ಯೂ ಸಹಯೋಗದೊಂದಿಗೆ ತೋರಣಗಲ್ಲುವಿನಲ್ಲಿರುವ ಜಿಂದಾಲ್ ಕಾರಖಾನೆ ಆವರಣದಲ್ಲಿ ತುರ್ತು ಸಂದರ್ಭದಲ್ಲಿನ ಹೊರ ವಲಯದ (ಆಫ್-ಸೈಟ್) ಸುರಕ್ಷತಾ ಅಣಕು ಪ್ರದರ್ಶನ ಬುಧವಾರ ಜರುಗಿತು.
ಗ್ಯಾಸ್ ಹೋಲ್ಡರ್ ನಿಂದ ಕೋರೆಕ್ಸ್ ಅನಿಲ ಸೋರಿಕೆಯು ಕೆಲವು ಭಾಗಗಳಾದ ಜಿಂದಾಲ್ ವಿಮಾನ ನಿಲ್ದಾಣ, ವಿದ್ಯಾನಗರ ಟೌನ್ ಶಿಪ್ ಮತ್ತು ವಡ್ಡು ಗ್ರಾಮದ ಮೇಲೆ ಪರಿಣಾಮ ಬಿರುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಮುಂದಾಲೋಚನೆಯಿಂದ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಅಣಕು ಪ್ರದರ್ಶನವು ತುರ್ತು ಪರಿಸ್ಥಿತಿಯಲ್ಲಿ ಅಪಾಯಗಳು, ಸಂಪನ್ಮೂಲಗಳ ಕ್ರೋಢೀಕರಣ, ಸುರಕ್ಷಿತ ಸ್ಥಳಾಂತರಿಸುವಿಕೆ ಮತ್ತು ಪುನರ್ವಸತಿಗಳ ಬಗ್ಗೆ ಸಿಬ್ಬಂದಿಗಳಲ್ಲಿ ಹಾಗೂ ಸಮುದಾಯದಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತುರ್ತು ಪರಿಸ್ಥಿತಿಗಳನ್ನು ಕಡಿಮೆ ಮಾಡುವ /ತಗ್ಗಿಸುವಲ್ಲಿ ಜೆಎಸ್ಡಬ್ಲ್ಯೂ ಸ್ಟೀಲ್ ಅಳವಡಿಸಿಕೊಂಡ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ಶ್ಲಾಘಿಸಿದರು.
ಸಹಾಯಕ ಆಯುಕ್ತ ರಮೇಶ್ ಕೊನರೆಡ್ಡಿ ಅವರು ತುರ್ತು ಸಂದರ್ಭದಲ್ಲಿಯ ಹೊರ ವಲಯದ (ಆಫ್-ಸೈಟ್) ಸುರಕ್ಷತಾ ಅಣಕು ಪ್ರದರ್ಶನ ಪೂರ್ವಾಭ್ಯಾಸವನ್ನು ಮಾಡುವುದು ತುಂಬ ವಿರಳ. ಆದರೆ ಅದು ನಮ್ಮಲ್ಲಿ ಜಿಲ್ಲಾಧಿಕಾರಿ ಅವರ ನಿರ್ದೇಶನದ ಮೆರೆಗೆಹೊರ ವಲಯದ (ಆಫ್-ಸೈಟ್) ಸುರಕ್ಷತಾ ಅಣಕು ಪ್ರದರ್ಶನ ಮಾಡಿರುವುದರಿಂದ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಿಬ್ಬಂದಿಗಳಲ್ಲಿ ಅರಿವು ಮೂಡಿಸುವುದು. ಹಾಗೂ ಹೊರ ವಲಯದ (ಆಫ್-ಸೈಟ್) ಸುರಕ್ಷತಾ ಅಣಕು ಪ್ರದರ್ಶನ ಮಾಡಿರುವುದು ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಜೆ.ಟಿ ಕಾರಖಾನೆಗಳ ನಿರ್ದೇಶಕ ರವೀಂದ್ರನಾಥ್ ರಾಥೋಡ್, ಜಿಲ್ಲಾ ವಿಪತ್ತು ಪರಿಣಿತ ಪರಮೇಶ, ಕಾರಖಾನೆಗಳ ನಿರ್ದೇಶಕ ಕೃಷ್ಣಪ್ಪ, ಜೆ.ಎಸ್.ಡಬ್ಲ್ಯೂನ ರಾಜಶೇಖರ್ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.