
ಸಂಜೆವಾಣಿ ವಾರ್ತೆ
ಸಂಡೂರು: ಏ: 7: 2018ರ ಚುನಾವಣೆಯಲ್ಲಿ ಜಿಂದಾಲ್ ಮತ್ತು ಎನ್.ಎಂ.ಡಿ.ಸಿ. ಪ್ರದೇಶಗಳಲ್ಲಿ ಕಡಿಮೆ ಮತದಾನವಾಗಿದ್ದು ಈ ಬಾರಿ ಮತದಾರರು ಮತದಾನ ದಿನವಾದ ಎರಡೂ ಕಂಪನಿಯ ಸಿಬ್ಬಂದಿಗೆ ರಜಾದಿನವೆಂದು ಘೋಷಿಸಲು ಕಂಪನಿಯವರಿಗೆ ಸೂಚಿಸಲಾಗಿದೆ ಎಂದು ಚುನಾವಣಾಧಿಕಾರಿ ಶರಣಬಸವರಾಜರವರು ತಿಳಿಸಿದರು. ಈ ಎರಡು ಪ್ರದೇಶಗಳ ನಿವಾಸಿಗಳಲ್ಲಿ ಬೇರೆ ರಾಜ್ಯಗಳ ಮೂಲದವರಾಗಿದ್ದು ಚುನಾವಣೆಯ ವೇಳೆ ಮಕ್ಕಳ ರಜಾ ಇರುವುದರಿಂದ ಈ ಭಾಗದಲ್ಲಿ ಮತದಾನ ಕಡಿಮೆ ಯಾಗಲು ಕಾರಣ ದೋಣಿಮಲೈನಲ್ಲಿ ಶೇ: 34.65 ಆದ ಉದಾಹರಣೆ ಇದೆ ಮತದಾನಕ್ಕಾಗಿ ಕುಡುತಿನಿ, ತೋರಣಗಲ್ಲು ಸಂಡೂರಿನಲ್ಲಿ ತಲಾ ಒಂದೊಂದು ಮಾದರಿ, ಸುಶೀಲಾನಗರದಲ್ಲಿ ಗಣಿ ಬೂತ್, ದೋಣಿಮಲೈ ನಲ್ಲಿ ಪರಿಸರ ಸ್ನೇಹಿ, ತಾಲೂಕು ಪಂಚಾಯಿತಿಯಲ್ಲಿ ದಿವ್ಯಾಂಗ ಚೇತನ ಅಧಿಕಾರಿಗಳ ಮತಗಟ್ಟೆ, ಪಟ್ಟಣದ ಕೆ.ಇ.ಬಿ. ಬಳಿಯ ಉರ್ದು ಶಾಲೆಯಲ್ಲಿ ಪಿಂಕ್ ಭೂತ್ ಮತಗಟ್ಟೆ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ಯುವ ಅಧಿಕಾರಿಗಳ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ಚುನಾವಣಾ ಪೂರ್ವ ಸಿದ್ದತೆ ಮತ್ತು ಸಾಮಾನ್ಯ ಮಾಹಿತಿ ಸಭೆಯಲ್ಲಿ ಮಾತನಾಡಿದರು. ಅವರು ಮುಂದುವರೆದು ಕ್ಷೇತ್ರದ 146 ಸ್ಥಳಗಳಲ್ಲಿ 249 ಭೂತಗಳಿವೆ, ಇದರಲ್ಲಿ 59 ಕ್ರಿಟಿಕಲ್ ಮತಗಟ್ಟೆಗಳಿವೆ, ಅಲಲ್ಲಿ ಸಿ.ಸಿ.ಟಿ.ವಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಮುರಾರಿಪುರ ಮತಗಟ್ಟೆ ಸಂಪರ್ಕವಿಲ್ಲದ ಕಾರಣ ವೈರಲೆಸ್ ವ್ಯವಸ್ಥೆ ಮಾಡಲಾಗಿದೆ. ಜಿಂದಾಲ್ ವಿದ್ಯಾನಗರದಲ್ಲಿ ಖಾಸಗಿ ಸಥಳದಲ್ಲಿ ಭೂತಗಳನ್ನು ನಿರ್ಮಿಸಿದ್ದು ಉಳಿದಲ್ಲಿ ಸರ್ಕಾರಿ ಜಾಗಗಳೇ ಆಗಿದೆ. ಈ ಬಾರಿ ಶೇ: 85 ರಷ್ಟು ಮತದಾನದ ಗುರಿ ಹೊಂದಲಾಗಿದೆ. ದಿವ್ಯಾಂಗ ಚೇತನರನ್ನು ಒಳಗೊಂಡು 80 ವರ್ಷ ದಾಟಿದವರು 5749 ಮತದಾರರಿದ್ದು ಇದರಲ್ಲಿ ಅಂಚೆ ಮತದಾನಕ್ಕೆ 54 ಜನರಿಗೆ ಮಾತ್ರ ಒಪ್ಪಿಗೆ ಸೂಚಿಸಲಾಗಿದೆ. ಯಾವುದೇ ದೂರುಗಳಿದ್ದಲ್ಲಿ 08395 260241 ಸಹಾಯವಾಣಿಗೆ ಕರೆಮಾಡಲು ಸೂಚಿಸಿದರು.
ಹಾಜರಾದವರು: ಬಿಜೆಪಿ ಕಛೇರಿಯ ಕಾರ್ಯದರ್ಶಿ ಪ್ರಶಾಂತ ಹಿರೇಮಠ, ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಕಮತೂರು ಮಲ್ಲೇಶಪ್ಪ, ಕಾಂಗ್ರೇಸ್ ಪ್ರತಿನಿಧಿಯಾಗಿ ವಲೀಸಾಬು, ಶಿರಸ್ತೇದಾರ ಶಿವಕುಮಾರ ಕಿರಣ್‍ಕುಮಾರ ಲಾಲ ಭಾಷಾ ಪುನೀತ್ ಉಪಸ್ಥಿತರಿದ್ದರು.
ಗೈರು ಹಾಜರಾದವರು: ಅಮ್ ಆದ್ಮಿ ಪಕ್ಷ, ಸಿ.ಪಿ.ಐ., ಸಿ.ಪಿ.ಎಂ., ಬಹುಜನ ಸಮಾಜವಾದಿ. ಕೆ.ಅರ್.ಎಸ್. ಪಕ್ಷಗಳಿಗೆ ಮಾಹಿತಿ ನೀಡಿದರೂ ಹಾಜರಾಗಿಲ್ಲ ಎಲ್ಲಾ ಪಕ್ಷಗಳು ಬೂತ್ ಮಟ್ಟದ ಏಜೆಂಟರುಗಳನ್ನು ಒದಗಿಸಲು ಪಕ್ಷದವರಿಗೆ ಸೂಚಿಸಲಾಗಿದೆ.