ಜಿಂದಾಲ್ ಆಸ್ಪತ್ರೆ ವೈದ್ಯ ಆತ್ಮಹತ್ಯೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,12- ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ವೈದ್ಯರೊಬ್ವರು ನಿನ್ನೆ ಸಂಜೆ ವಿದ್ಯಾನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷವಷ್ಟೇ ಈ ಆಸ್ಪತ್ರೆಯ ಸೇವೆಗೆ ಸೇರಿದ್ದ 62 ವರ್ಷದ ಎಸ್.ಪಿ.ಸಿಂಗ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಇವರು ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ವಹಣೆಯನ್ನು ಮಾಡುತ್ತಿದ್ದರಂತೆ. ಮನೆಯಲ್ಲಿ ಪತ್ನಿ‌ ಇರದ ಸಮಯದಲ್ಲಿ ಪ್ಯಾನಿಗೆ ನೇಣು ಹಾಕಿಕೊಂಡಿದ್ದಾರಂತೆ. ಪತ್ನಿ ಸಂಜೆ ಬಂದು ನೋಡಿದ ಮೇಲೆ ಈ ವಿಷಯಗೊತ್ತಾಗಿದೆ.
ಈ ಬಗ್ಗೆ ತೋರಣಗಲ್ಲು ಠಾಣೆಯಲ್ಲಿ ಇಂದು ಬೆಳಿಗ್ಗೆ ವರೆಗೆ ದೂರು ದಾಖಲಾಗಿರಲಿಲ್ಲ.