ಜಿಂದಾಲ್‍ಗೆ 3677 ಎಕರೆ ಪರಭಾರೆಗೆ ಸರ್ಕಾರ ಸಮ್ಮತಿ

ಬಳ್ಳಾರಿ, ಏ.27: ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಜಿಲ್ಲೆಯ ತೋರಣಗಲ್ಲು ಜಿಂದಾಲ್ ಉಕ್ಕು ಖಾರ್ಕಾನೆಗೆ ಲೀಜ್ ಕಮ್ ಸೇಲ್ ಆಧಾರದಲ್ಲಿ ನೀಡಿದ್ದ 3677 ಎಕರೆ ಜಮೀನನ್ನು ಅದೇ ಕಂಪನಿಗೆ ಪರಭಾರೆ ಮಾಡಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದೆಯಂತೆ.
ಇಂದು ಅಧಿಕಾರದಲ್ಲಿರುವ ಮುಖ್ಯ ಮಂತ್ರಿ ಯಡಿಯೂರಪ್ಪ ಅಂದು ಇದನ್ನು ವಿರೋಧ ಮಾಡಿದ್ದರು. ಆದರೆ ಇಂದು ಅವರೇ ಇದಕ್ಕೆ ಸಮ್ಮಿತಿ ನೀಡಿದ್ದಾರೆ. ಇನ್ನು ಅಂದು ಕಾಂಗ್ರೆಸ್ ಪಕ್ಷದಲ್ಲಿ ವಿಜಯನಗರ ಶಾಸಕರಾಗಿದ್ದ. ಈಗ ಬಿಜೆಪಿಗೆ ಬಂದು ಉಪ ಚುನಾವಣೆ ಆಯ್ಕೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆನಂದ್ ಸಿಂಗ್ ಅವರು ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡುವುದನ್ನು ವಿರೋದಿಸಿಯೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇಂದು ಅವರು ಸರ್ಕಾರದ ಒಂದು ಭಾಗವಾಗಿ ಮೌನವಾಗಿದ್ದಾರೆ. ಇದಕ್ಕೆ ಹೇಳುವುದು ಕಾಲಾಯ ತಸ್ಮಾಯ ನಮಃ ಎಂದು.