ಜಿಂದಾಲ್‍ಗೆ ಭೂಮಿ ಕೊಂಡಯ್ಯ ನಿಲುವಿಗೆ ಎ ಎ ಪಿ ಖಂಡನೆ.

ಬಳ್ಳಾರಿ ಜೂ 05 : ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ವಿಧಾನ ಪರಿಷತ್ ಸದಸ್ಯರಾದ ಕೆ ಸಿ ಕೊಂಡಯ್ಯನವರು ಜಿಂದಾಲ್ ಕಂಪನಿಗೆ ರೈತರ ಭೂಮಿ ಪರಭಾರೆ ನ್ಯಾಯಸಮ್ಮತ ಅಂತ ಸಮರ್ಥಿಸಿಕೊಂಡಿರುವುದುನ್ನು ಎಎಪಿ ಜಿಲ್ಲಾ ಘಟಕ ತಿವ್ರವಾಗಿ ಖಂಡಿಸಿದೆ..
ಮಾಜಿ ಸಂಸದರಾದ ವಿ ಎಸ್ ಉಗ್ರಪ್ಪನವರು ಜಿಂದಾಲ್‍ಗೆ ಭೂಮಿ ಪರಭಾರೆ ಮಾಡುವುದನ್ನು ವಿರೋಧಿಸಿದ್ದರು. ಆದರೆ ತನ್ನದೆ ಜಿಲ್ಲೆಯಲ್ಲಿರುವ ಕಾರ್ಖಾನೆ ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ವಂಚಿಸಿ ಅನ್ಯಾಯ ಎಸಗುತ್ತಿದ್ದರೂ ತುಟಿ ಬಿಚ್ಚದ ಕೊಂಡಯ್ಯನವರು ಈಗ ಏಕಾಏಕಿ ಜಿಂದಾಲ್‍ಗೆ ಭೂಮಿ ಪರಭಾರೆ ಮಾಡಿದರೆ ತಪ್ಪಿಲ್ಲ ಎಂಬ ಬಾಲಿಷ ಹೇಳಿಕೆಯನ್ನು ನೀಡಿದ್ದಾರೆ.
ನಾನು ಕೈಗಾರಿಕೆಗಳ ಪರ ಎಂದು ಸಹ ಹೇಳಿರುವುದು ಅವರ ರಾಜಕೀಯ ಅಪ್ರಬುದ್ಧತೆಯನ್ನು ತೋರುತ್ತದೆ. ಈ ರೀತಿಯ ರಾಜಕಾರಣ ಮತ್ತು ಏಜೆಂಟರ್‍ನಂತೆ ಕಾರ್ಫೋರೇಟರ್ ಕಂಪನಿಗಳ ಪರ ಲಾಬಿ ಮತ್ತು ವಕ್ತಾರಿಕೆ ಮಾಡುವುದನ್ನು ನಿಲ್ಲಿಸಿ ಅವರೇ ಒಂದು ಕಾರ್ಖಾನೆಯನ್ನು ಸ್ಥಾಪಿಸಿ ಕನ್ನಡಿಗರಿಗೆ ಉದ್ಯೋಗ ನೀಡಲು ಮುಂದಾಗಲಿ ಎಂದಿದೆ
ಹೆಚ್ ಕೆ ಪಾಟೀಲ್ ಸೇರಿದಂತೆ ರಾಜ್ಯ ಕಾಂಗ್ರೆಸ್‍ನ ಹಿರಿಯ ನಾಯಕರು ಈ ವಿಷಯದ ಕುರಿತು ವಿರೋಧ ವ್ಯಕ್ತಪಡಿಸಿರುವಾಗಲೇ ಕೊಂಡಯ್ಯನವರು ಕಂಪನಿಯ ಪರವಾಗಿ ವಕಲಾತ್ತು ಮಾಡುತ್ತಿದ್ದಾರೆ. ಇವರು ಕಾಂಗ್ರೆಸ್ ಪಕ್ಷದವರೋ ಅಥವಾ ಕಂಪನಿಯ ವ್ಯವಸ್ಥಾಪಕರೋ ಎನ್ನುವುದು ರಾಜ್ಯ ಕಾಂಗ್ರೆಸ್ ಪಕ್ಷ ಸ್ಪಸ್ಟಪಡಿಸುವ ಅಗತ್ಯತೆಯಿದೆ. ಕೊಂಡಯ್ಯನವರ ಈ ಹೇಳಿಕೆಯಿಂದಾಗಿ ಕಾಂಗ್ರೆಸ್‍ನ ಧ್ವಂದ್ವ ಮತ್ತು ದ್ವಿಮುಖ ನೀತಿಗಳನ್ನು ಎತ್ತಿ ತೋರಿಸುತ್ತಿದೆ.
ಈ ಹಿಂದೆ 1995ರಲ್ಲೇ ಕಾರ್ಖಾನೆಗಾಗಿ ವಶಪಡಿಸಿಕೊಂಡ ರೈತರ ಭೂಮಿಗೆ ಇಲ್ಲಿಯವರೆಗೂ ಯೋಜನಾ ನಿರಾಶ್ರಿತರಿಗೆ ಸರಿಯಾದ ಪರಿಹಾರ ಮತ್ತು ಉದ್ಯೋಗವನ್ನು ನೀಡದಿರುವ ಬಗ್ಗೆ ಎಂದೂ ಮಾತನಾಡದ ಕೊಂಡಯ್ಯನವರು ಈಗ ಕಾರ್ಖಾನೆ ಪರ ಮಾತನಾಡುವುದು ನೋಡಿದರೆ ಅವರ ನಡವಳಿಕೆ ಬಗ್ಗೆ ಹತ್ತಾರು ಅನುಮಾನಗಳು ಕಾಡುತ್ತವೆ. ಸ್ವತಃ ಆಡಳಿತ ಪಕ್ಷದ ಮಂತ್ರಿ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಸೇರಿದಂತೆ ಅನೆಕ ಶಾಸಕರು ಭೂಮಿ ಪರಭಾರೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಭೂ ಪರಭಾರೆಯನ್ನು ರದ್ದುಪಡಿಸಲಾಗಿತ್ತು ಎಂಬುದು ಸ್ಮರಣೀಯ. ಇಂತ ಸಂದರ್ಭದಲ್ಲಿ ಕೊಂಡಯ್ಯನವರ ಈ ಹೇಳಿಕೆ ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುವಂತಿದೆ. ಈ ಮುಖಾಂತರ ಕೊಂಡಯ್ಯನವರು ತಾನೋಬ್ಬ ಪ್ಯಾಕೇಜ್ ಗಿರಾಕಿ ಎಂಬುದನ್ನು ಸ್ಪಸ್ಟಪಡಿಸಿದ್ದಾರೆ. ಕೊಂಡಯ್ಯನವರ ಈ ದ್ವಿಮುಖ ನೀತಿಯನ್ನು ಬಳ್ಳಾರಿ ಜಿಲ್ಲಾ ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಜನ ವಿರೋಧಿ ಮತ್ತು ರೈತ ವಿರೋಧಿ ಲಾಬಿ ಕೋರ ಕೊಂಡಯ್ಯನವರನ್ನು ಸ್ವತಃ ಕಾಂಗ್ರೆಸ್ ಪಕ್ಷ ಹೇಗೆ ಸಹಿಸಿಕೊಂಡಿದಿಯೋ ಅರ್ಥವಾಗುತ್ತಿಲ್ಲ.
ಕೊಂಡಯ್ಯನವರು ಇದೇ ರೀತಿಯಲ್ಲಿ ಜನ ವಿರೋಧಿ ನೀತಿಯನ್ನು ಬೆಂಬಲಿಸುತ್ತಾ ಹೋದರೆ ಅವರ ವಿರುದ್ದ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷದವತಿಯಿಂದ ಪ್ರತಿಭಟಿಸಬೇಕಾಗುತ್ತದೆ ಎಂದು ಜಿಲ್ಲಾ ಸಂಚಾಲಕರಾದ ವಿ ಬಿ ಮಲ್ಲಪ್ಪ ಮತ್ತು ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.