ಜಿಂದಾಲ್‌ಗೆ ಭೂಮಿಯ ಪರಭಾರೆ ಸಚಿವ ಆನಂದಸಿಂಗ್ ರಾಜಿನಾಮೆಗೆ ಸಿಪಿಐಎಂ ಆಗ್ರಹ.

ಹೊಸಪೇಟೆ:ಮೇ.4- ಜಿಂದಾಲ್ ಕಾರ್ಖಾನೆಗೆ 3667 ಎಕರೆ ಭೂಮಿ ಪರಭಾರೆ ಮಾಡಿದರೂ ಸುಮ್ಮನಿರುವ ಸಚಿವ ಆನಂದ ಸಿಂಗ್ ರಾಜೀನಾಮೆಗೆ ಹೊಸಪೇಟೆಯಲ್ಲಿ ಸಿಪಿಐಎಂ ಪಕ್ಷದ ಬಳ್ಳಾರಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಭೂಮಿ ಉಳಿವಿವಾಗಿ ರಾಜೀನಾಮೆ ನೀಡಿದವರು, ಈಗ ಭೂಮಿ ಪರಾಭಾರೆಯಾದ್ರೂ ಯಾಕೆ ಸುಮ್ಮನಿದ್ದಿರಿ-? ಸಚಿವ ಸಂಪುಟದ ಸಭೆಯಲ್ಲಿ ಭಾಗವಹಿಸಿರಲ್ಲಿ ನಡವಳಿಕೆಯನ್ನು ನೋಡಿಲ್ಲಿ ಎಂದು ಅನಗತ್ಯವಾಗಿ ಸಬೂಬು ನೀಡಿತ್ತಿದ್ದಾರೆ ಎಂದು ಆರೋಪ ಮಾಡಿದರು.
ಆನಂದ್ ಸಿಂಗ್ ಮತ್ತು ಅನಿಲ್ ಲಾಡ್ ಇಬ್ಬರಿಗೂ ಜೊತೆಗೂಡಿ ಹೋರಾಟ ಮಾಡಿದ್ದರು, ಆದರೆ ಸದ್ಯ ಈಗ ಕ್ಯಾಬಿನೆಟ್ ನಲ್ಲಿದ್ರೂ, ಏನೂ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.
ಆನಂದ್ ಸಿಂಗ್ ಅವರು ಈ ಮೌನಕ್ಕೆ ಕಾರಣವೇನು ಎಂದ ಅವರು ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಅಂದು ಜಿಂದಾಲ್ ನ್ನು ಈಸ್ಟ್ ಇಂಡಿಯಾ ಕಂಪನಿ ಎಂದು ಇಂದು ಸುಮ್ಮನಿರೂದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಕದ ಮುಖಂಡರಾದ ಆರ್. ಎಸ್. ಬಸವರಾಜ, ಎಂ. ಜಂಬಯ್ಯನಾಯಕ, ಆರ್. ಭಾಸ್ಕರ್ ರೆಡ್ಡಿ, ಎಂ. ಗೋಪಾಲ ಮತ್ತು ಎ.ಕರುಣಾನಿಧಿ ಸಚಿವರ ರಾಜೀನಾಮೆ ಆಗ್ರಹಿಸಿದರು.