ಜಿಂಕೆ ಬೇಟೆಯಾಡಿ ಮಾಂಸ ಕತ್ತರಿಸುವಾಗ ಆರೋಪಿಗಳ ಬಂಧನ

ಚಿಂಚೋಳಿ,ಮೇ.28- ತಾಲ್ಲೂಕಿನ ಕುಂಚಾವರಂ ಶಾಖೆಯ ಉಪವಲಯ ಅರಣ್ಯಧೀಕಾರಿಗಳು ಹಾಗೂ ಸಿಬ್ಬಂದಿಗಳು ಲಕ್ಷ್ಮಸಾಗರ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುವಾಗ ಅರಣ್ಯ ಪ್ರದೇಶದಲ್ಲಿ ಕೆಲವರು ಜಿಂಕೆ ಭೇಟೆಯಾಡಿ ಮೌಂಸ ಕತ್ತರಿಸುವುದು ನೋಡಿದಾಗ ಆರೋಪಿತರು ಇಲ್ಲಿಂದ ಓಡಿ ಹೋಗಲು ಯತ್ನಿಸಿದ್ದು, ಅವರಲ್ಲಿ ಒಬ್ಬ ಆರೋಪಿತನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವನ್ಯಜೀವಿ ವಲಯ ಅರಣ್ಯಾಧೀಕಾರಿ ಸಂಜೀವಕುಮಾರ ಚವ್ಹಾಣ ತಿಳಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಮ್.ಎಲ್.ಬಾವಿಕಟ್ಟಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ನೇತೃತ್ವದಲ್ಲಿ ಚುಕ್ಕೆ ಜಿಂಕೆಯ ಹಸಿ ಚರ್ಮ ಹಾಗೂ ಮೌಂಸ ಪಾಲು ಹಾಕಿ ಫ್ಲಾಸ್ಟಿಕ್ ಪಾಕೆಟ್ ಗಳಲ್ಲಿ ಹಾಕುತ್ತಿರುವಾಗ ಒಬ್ಬ ಆರೋಪಿ ರಾಜು ಯಲ್ಲಪ್ಪ ಎಂಬುವನಿಗೆ ಬಂಧಿಸಲಾಗಿದ್ದು ಇಬ್ಬರು ಆರೋಪಿತರು ಪರಾರಿಯಾಗಿದ್ದಾರೆ.
ಆರೋಪಿತರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 9,29(1),31,39,48(ಎ)ಮತ್ತು 51ಪ್ರಕಾರ ಪ್ರಕರಣ ದಾಖಲು ಮಾಡಲಾಗಿದೆ ಪರಾರಿ ಆರೋಪಿತರಿಗೆ ಬಂಧಿಸಲು ಜಾಲಾ ಬಿಸಲಾಗಿದೆ.
ಜಿಂಕೆ ಭೇಟೆಯಾಡಲು ಬಳಸಿದ ಚೂರಿ,ಕಟ್ಟಿಗೆ ತುಂಡು,ಬೆಂಡಿಂಗ್ ವಾಯರ್ 100ಪೀಟ್,ಕಪ್ಪು ಟೋಪಿಗೆ,ಒಂದು ಬೋಗೋಣಿ,ಕುದಿಸಿದ ಅರ್ದ ಕೆಜಿಯಷ್ಟು ಮೌಂಸ,ಜಿಂಕೆಯ ಹಸಿ ಚರ್ಮ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ
ಉಪ ವಲಯ ಅರಣ್ಯ ಅಧಿಕಾರಿ ಭಾನುಪ್ರತಾಪಸಿಂಗ್,ಉಪ ವಲಯ ಅರಣ್ಯ ಅಧಿಕಾರಿ ಗಜಾನಂದ,ಉಪ ವಲಯ ಅರಣ್ಯ ಅಧಿಕಾರಿ ಸಿದ್ದಾರೂಡ ಹೊಕ್ಕುಂಡಿ,ಉಪ ವಲಯ ಅರಣ್ಯ ಅಧಿಕಾರಿ ನಟರಾಜ್,ಪ್ರಭು ಜಾಧವ,ಚೇತನ,ಸೈಯದ್ ಪಟೇಲ,ಶೇಖ ಅಮೀರ,ಹಾಲೇಶ,ಮೈಬೂಬಲಿ,ಲಿಂಬಾಜಿ,ಮನ್ನು,ಶಂಕರ,ಕಿಶ್ಹನ,ಕಾರ್ಯಚರಣೆಯಲ್ಲಿದ್ದರು