ಜಿಂಕೆ-ಚಿರತೆ ಸಾವಿನ ಬಗ್ಗೆ ಸಮಗ್ರ ತನಿಖೆ: ಸಚಿವ ಈಶ್ವರ ಖಂಡ್ರೆ

ಬೀದರ್: ಸೆ.24:ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜಿಂಕೆ ಮತ್ತು ಚಿರತೆಗಳ ಸಾವಿನ ಬಗ್ಗೆ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಫೇಲಾಯಿನ್ ಅನ್ನೋ ಸೋಂಕಿನ ಬಾಧೆಯಿಂದ ಪ್ರಾಣಿಗಳು ಮೃತವಾಗಿವೆ ಎನ್ನುವ ಪ್ರಾಥಮಿಕ ಮಾಹಿತಿ ಇದೆ.ಈಗಾಗಲೇ ಹಿರಿಯ ಅ ಧಿಕಾರಿಗಳು ಕ್ಯಾಂಪ್ ಮಾಡಿದ್ದಾರೆ. ಗುರುವಾರ ನಾನು ಸಹ ಭೇಟಿ ನೀಡುತ್ತೇನೆ. ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಬಂದಿದ್ದಕ್ಕೆ ಜೆಡಿಎಸ್‍ನವರು ಹತಾಶರಾಗಿದ್ದಾರೆ. ಎಲ್ಲೊ ಒಂದು ಕಡೆ ಮೈತ್ರಿ ಆಗುತ್ತೆ ಅಂತ ಅಂದುಕೊಂಡಿದ್ದರು. ಬಹುಮತ ಬಂದಿದ್ದಕ್ಕೆ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹಾಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಮೂರು ಜನ ಉಪ ಮುಖ್ಯಮಂತ್ರಿ ವಿಷಯಕ್ಕೆ ಪ್ರತಿಕ್ರಯಿಸಿದ ಖಂಡ್ರೆ, ರಾಜ್ಯಕ್ಕೆ ಮತ್ತು ಪಕ್ಷಕ್ಕೆ ಒಳ್ಳೆದಾಗೋ ರೀತಿಯಲ್ಲಿ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಕಾರ್ಯಾಧ್ಯಕ್ಷನಾಗಿ ನಿಷ್ಠೆಯಿಂದ ಪಕ್ಷದ ಸೇವೆ ಮಾಡಿದ್ದೇನೆ ಎಂದರು.