ಜಾ.ಸಾ.ಪ. ಬ್ಯಾನರ್ ಸ್ಥಳಾಂತರ ವ್ಯಾಪಕ ಖಂಡನೆ

ಲಿಂಗಸೂಗೂರು.ಏ.೦೨-ಮಸ್ಕಿ ವಿಧಾನಸಭಾ ಉಪ ಚುನಾವಣೆ ನಿಮಿತ್ತ ರಾಯಚೂರು ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಪುರಸಭೆ ಮುಖ್ಯಾಧಿಕಾರಿ ಇಬ್ಬಗೆ ನೀತಿ ವ್ಯಾಪಕ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
ಜೆಡಿಎಸ್ ಮುಖಂಡ ಸಿದ್ದು ಬಂಡಿ ಹುಟ್ಟು ಹಬ್ಬದ ಬ್ಯಾನರ್ ತೆರವುಗೊಳಿಸಿ ನೀತಿ ಸಂಹಿತೆ ಉಲ್ಲಂಘನೆ ಆದ ಬಗ್ಗೆ ಷೋಕಾಸ್ ನೋಟಿಸ್ ಕೂಡ ನೀಡಲಾಗಿತ್ತು.
ಅಂತಹುದೆ ಘಟನೆ ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪ ಮೇಟಿ ಬ್ಯಾನರ್ ಹಾಕಿದ್ದರು ನೋಡಿ ನೋಡದಂತೆ ಜಾಣ ಕುರುಡುತನ ಮೆರೆಯುವ ಮೂಲಕ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬಣ್ಣ ಎಂಬ ಇಬ್ಬಗ ನೀತಿ ಅನುಸರಿಸಿದ್ದು ಸಾಕ್ಷಿಯಾಗಿದೆ.
ರಾಜಕೀಯೇತರ ರಾಯಚೂರು ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಬ್ಯಾನರ್ ಏಜಾ ಏಕಿ ಕಿತ್ತು ಹಾಕುವ ಮೂಲಕ ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಸಕ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಮೂಲಕ ಏಕಸ್ವಾಮ್ಯ ಆಡಳಿತ ನಡೆಸುತ್ತಿರುವುದಕ್ಕೆ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಾಧಿಕಾರಿಗಳು ಪೂರ್ವಗ್ರಹ ಪೀಡಿತರಾಗಿ ಕತ್ಯವ್ಯ ನಿರ್ವಹಿಸುತ್ತಿದ್ದಾರೆ. ಯಾವ ಬ್ಯಾನರ್ ತೆಗೆಯಬೇಕು, ಯಾವು ತೆಗೆಯಬಾರದು ಎಂಬುದರ ಪರಿಜ್ಞಾನ ಕೂಡ ಇಲ್ಲವಾಗಿದೆ. ಸಾಹಿತಿಗಳಿಗಾದ ಅಪಮಾನಕ್ಕೆ ಬಹಿರಂಗ ಕ್ಷಮೆಯಾಚಿಸಬೇಕು.