ಜಾ.ಪ್ರ ಪತ್ರ ನೀಡಲು ತಹಸೀಲ್ದಾರರಿಗೆ ಆದೇಶ ನೀಡಲು ಒತ್ತಾಯ

ರಾಯಚೂರು, ಮಾ.೧೪-ಬೇಡಜಂಗಮ ಜಾತಿ ಪ್ರಮಾಣಪತ್ರಗಳನ್ನು ಸಂವಿಧಾನ ಬದ್ಧವಾಗಿ ನ್ಯಾಯಾಲಯದ ಆದೇಶಗಳ ಮತ್ತು ಸರ್ಕಾರಿ ಸುತ್ತೋಲೆಗಳ ಹಾಗೂ ರಾಯಚೂರು ಜಿಲ್ಲಾಧಿಕಾರಿಗಳ ಸಹಾಯಕ ಆಯುಕ್ತರ ಆದೇಶದ ಮೇರೆಗೆ ನೀಡಲು ತಹಸೀಲ್ದಾರರಿಗೆ ಆದೇಶ ಮಾಡಬೇಕೆಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆ ಮುಖಂಡರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬೇಡ ಜಂಗಮ ಜಾತಿಯನ್ನು ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿಗೆ ಸೇರಿಸಿ ಆದೇಶ ಮಾಡಿರುತ್ತದೆ ಮತ್ತು ಬೇಡ ಜಂಗಮರ ಕುಲಶಾಸ್ತ್ರ ಅಧ್ಯಯನ ವರದಿ ಸೂರ್ಯನಾಥ ಕಾಮತ್ ವರದಿ ಮತ್ತು ನ್ಯಾಯಾಲಯದ ಆದೇ ಐಎಲ್‌ಆರ್ ೧೯೯೬ ಕೆಎಆರ್ ೨೬೨೭ ರ ತೀರ್ಪಿನಲ್ಲಿ ಲಿಂಗಾಯತ ಪಂಥದ ಜಂಗಮರೇ ಬೇಡ ಜಂಗಮರಾಗಿದ್ದು, ಈ ಆದೇಶವನ್ನು ಕರ್ನಾಟಕ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಸುತ್ತೋಲೆಗಳ ಮೂಲಕ ಜಾತಿ ಪ್ರಮಾಣಪತ್ರ ನೀಡಲು ಆದೇಶ ಮಾಡಿದೆ. ನಮ್ಮ ಸಮಾಜದವರು ಈಗಾಗಲೇ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದು ಸಾವಿರಾರು ಜನ ಸರ್ಕಾರಿ ನೌಕರಿಯಲ್ಲಿ ಸೇವೆಸಲ್ಲಿಸುತಿದ್ದರೆ ಹಾಗೂ ಇದೇ ಜಾತಿ ಪ್ರಮಾಣಪತ್ರದಿಂದ ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ಇಷ್ಟೆಲ್ಲಾ ದಾಖಲೆಗಳು ಇದ್ದರೂ ತಹಸೀಲ್ದಾರರು ನಮ್ಮ ಮೇಲೆ ಇಲ್ಲಸಲ್ಲದ ಕಾನೂನು ವಿರೋಧವಾಗಿ ಹೇಳಿಕೆ ನೀಡಿ ನ್ಯಾಯಾಲಯದ ಆದೇಶಗಳನ್ನು ತಿರಸ್ಕರಿಸಿ ನಮಗೆ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ ಎಂದು ದೂರಿದರು.
ಸಮಾಜದವರನ್ನು ಶಿಕ್ಷಣ, ಉದ್ಯೋಗ ಇನ್ನಿತರ ಸರ್ಕಾರಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರಿ ಸುತ್ತೋಲೆಗಳ ನ್ಯಾಯಾಲಯದ ಆದೇಶದ ಪ್ರಕಾರ ರಾಯಚೂರು ಜಿಲ್ಲಾಧಿಕಾರಿಗಳ, ಸಹಾಯಕ ಆಯುಕ್ತರ ಆದೇಶದ ಪ್ರಕಾರ ಬೇಡ ಜಂಗಮ ಜಾತಿ ಪ್ರಮಾಣಪತ್ರಗಳನ್ನು ನೀಡಲು ಮಾನ್ಯ ತಹಸೀಲ್ದಾರರು , ರಾಯಚೂರು ಇವರಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶರಣಬಸವ ಹಿರೇಮಠ ಪ್ರಭುಶಾಸ್ತ್ರಿ, ವೀರಯ್ಯಸ್ವಾಮಿ ಆಶಾಳೂರು, ಸೇರಿದಂತೆ ಅನೇಕರು ಇದ್ದರು.