ಜಾಹೀರಾತು ಫಲಕಗಳು ಶೇಕಡ 70ರಷ್ಟು ಕನ್ನಡದಲ್ಲಿರಬೇಕು


ದಾವಣಗೆರೆ.ಡಿ.೭;   ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡಿಗರು ಕನ್ನಡ ಭಾಷೆಯನ್ನು ಬೆಳೆಸಬೇಕು ಹೊರತು ಇನ್ಯಾವುದೆ ಭಾಷೆಯನ್ನು ಬೆಳೆಸಬಾರದು ಭಾಷೆ ಕಲಿಯುವುದಕ್ಕೆ ಯಾರ ವಿರೋಧವೂ ಇಲ್ಲ ಆದರೆ ನಮ್ಮ ಭಾಷೆ ನಮಗೆ ಬಹಳ ಮುಖ್ಯ ಎಂದು ಮೇಯರ್ ಎಸ್ ಟಿ ವೀರೇಶ್ ಹೇಳಿದರು.ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ದಶಕಗಳಿಂದ  ಹೋರಾಟ ಮಾಡುತ್ತ ಬಂದಿರುವುದು ಶ್ಲಾಘನೀಯ ಅದರಂತೆ ಇತ್ತೀಚಿಗೆ ನಗರದಲ್ಲಿ ಆಂಗ್ಲ ನಾಮಪಲಕಗಳು  ತೆರವಿಗೆ ಒತ್ತಾಯಿಸಿ   ನಮಗೆ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ ಅದರಂತೆ ದಾವಣಗೆರೆ ನಗರದಲ್ಲಿರುವ ಎಲ್ಲಾ ಅಂಗಡಿ-ಮುಗ್ಗಟ್ಟುಗಳ ಮತ್ತು ಜಾಹೀರಾತು ಫಲಕಗಳು ಶೇಕಡ 70ರಷ್ಟು ಕನ್ನಡದಲ್ಲಿ ನಾಮಫಲಕ ಬರಿಸಬೇಕು ಇಲ್ಲವಾದರೆ ಆಂಗ್ಲ ನಾಮಫಲಕಗಳನ್ನು   ದಂಡ ಹಾಕುವ ಮೂಲಕ ಮತ್ತು ಅವುಗಳನ್ನು ತೆರವುಗೊಳಿಸುವ ಕೆಲಸ ಮಹಾನಗರ ಪಾಲಿಕೆಯಿಂದ ಮಾಡಲಾಗುವುದು ಎಂದು  ಎಚ್ಚರಿಕೆ ನೀಡಿದರು    ಮತ್ತೊಂದು ವಿಚಾರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಆದಕಾರಣ ಬೀದಿ ನಾಯಿಗಳನ್ನು ಹಿಡಿಯಲು  ಟೆಂಡರ್ ಕರೆಯಲಾಗಿದೆ ಮೂರ್ನಾಲ್ಕು ದಿನಗಳ ಒಳಗಾಗಿ ನಾಯಿ ಹಿಡಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ದೇವರುಮನೆ ಶಿವಕುಮಾರ್ ಅವರು  ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷರಾದ ಎಂಎಸ್ ರಾಮೇಗೌಡ ಮಾತನಾಡಿ ಕರ್ನಾಟಕ ಏಕೀಕರಣ ಇತಿಹಾಸ ಕರ್ನಾಟಕ ಉದಯವಾಗಲು ಹಲವಾರು ತ್ಯಾಗ-ಬಲಿದಾನ ಆಗಿದೆ ಅದರ ಪರಿಶ್ರಮದಿಂದ ಕರ್ನಾಟಕದಲ್ಲಿ ಕನ್ನಡಿಗರು ಸಮೃದ್ಧವಾಗಿ ಸುಸಂಸ್ಕೃತವಾಗಿ ಬದುಕಲು ಕಾರಣವಾಗಿದೆ .ಆದರೆ ನಮ್ಮ ಕೆಲವು ಕಾಟಾಚಾರದ ಕನ್ನಡಿಗರು ಕನ್ನಡವನ್ನು ಬೆಳೆಸಲು ಪರಭಾಷೆಯಲ್ಲಿ ಪ್ರೋತ್ಸಾಹಿಸುವು ದುರದೃಷ್ಟಕರ ಸಂಗತಿ ಹೊರರಾಜ್ಯದವರು ಕರ್ನಾಟಕದ ಮೇಲೆ ಪದೇ ಪದೇ ಕ್ಯಾತೆ ತೆಗೆದು ಇರುವುದು ನಮ್ಮಲ್ಲಿ ಒಗ್ಗಟ್ಟಿಲ್ಲ ಕಾರಣ ನಾವುಗಳು ಎಲ್ಲರೂ ಒಗ್ಗಟ್ಟು ಇರಬೇಕಾದರೆ ಜಾತಿಧರ್ಮ ಎಲ್ಲವನ್ನೂ ಮೀರಿ ಕನ್ನಡಿಗರಾಗಿ ಬದುಕು ಬದುಕಬೇಕು ಮತ್ತು ಒಗ್ಗಟ್ಟಿನಿಂದ ಕರ್ನಾಟಕವನ್ನು ಉಳಿಸುವ ಬೆಳೆಸುವ ತಾಕತ್ತು ಕನ್ನಡಿಗರೆಂದರೆ ಬರಬೇಕಾಗಿದೆ ಎಂದರು.  ವಿರಕ್ತಮಠದ ಪರಮಪೂಜ್ಯರಾದ ಶ್ರೀ ಬಸವ ಮಹಾಪ್ರಭು ಸ್ವಾಮಿಗಳು ಮಾತನಾಡಿ ಕರ್ನಾಟಕ ಎಂದರೆ ಅದು ಹೆಸರಲ್ಲ ಅದು ಕರ್ನಾಟಕ ನಮ್ಮ ಉಸಿರು ಸಮೃದ್ಧಿಯ ನೆಲೆಬೀಡು  ಜೋಗದ ಜಲಪಾತದಿಂದ ಕೃಷ್ಣ ಗೋದಾವರಿಯವರೆಗೂ ಬೆಳಗಾವಿ ಯಿಂದ ಚಾಮರಾಜನಗರ ವರೆಗೂ ಬೀದರ ನಿಂದ ಮಂಗಳೂರಿನವರೆಗೂ ಕರ್ನಾಟಕ ರಕ್ಷಣಾ ವೇದಿಕೆ ಕಟ್ಟುವುದ ಮುಖಾಂತರ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ಮಾಡಿದರೆ ದಾವಣಗೆರೆಯಲ್ಲಿ ಕನ್ನಡವನ್ನು ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ರಾಮೇಗೌಡ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು . ಹಲವಾರು ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನಿಸಲಾಯಿತು ಸಿಪಿಐ ಕೆಎಂ ಗಜೇಂದ್ರಪ್ಪ,  ಪತ್ರಕರ್ತ ಬಿ ಸಿಕಂದರ್  ವಕೀಲರಾದ  ರುಜ್ಯೀಖಾನ್ . ಸಮೀವುಲ್ಲಾ. ಸೈಫುಲ್ಲಾ .ಲೋಹಿತ್. ಓಮೇಶ್. ಮೂರ್ತಿ. ಹಾಲೇಶ್. ಶಿವರಾಜ್. ಹುಸೇನ್  ಹಾಗೂ ಕೊರೋನಾ ವಾರಿಯರ್ಸ್ ರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ ಅಮಾನುಲ್ಲಾ ಖಾನ್ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್  ರಾಜ್ಯ ಕಾರ್ಯದರ್ಶಿ ಟಿ ಅಜ್ಗರ್  .ಯು ಎಂ ಮನ್ಸೂರ್ ಅಲಿ  .ಮಹಾನಗರ ಪಾಲಿಕೆಯ ಸದಸ್ಯರಾದ ಸೈಯದ್ ಚಾರ್ಲಿ ಇತರರಿದ್ದರು.