ಜಾಹೀರಾತು ಪ್ರಸಾರಕ್ಕೆ ಪೂರ್ವಾನುಮತಿ ಅಗತ್ಯ:ಯಶವಂತ ವಿ. ಗುರುಕರ್

ಕಲಬುರಗಿ,ಏ.11:ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಸುದ್ದಿ ವಾಹಿನಿ, ಕೇಬಲ್ ಟಿ.ವಿ., ಇ-ಪೇಪರ್, ಎಫ್.ಎಂ.ರೇಡಿಯೋ, ಪಾವತಿ ಆಧಾರದ ಸಾಮಾಜಿಕ ಜಾಲತಾಣಗಳ ವೆಬ್ ಸೈಟ್, ಸಿನೆಮಾ ಹಾಲ್, ಮೋಬೈಲ್ ಅಥವಾ ಸ್ಥಿರ ದೂರವಾಣಿ ಮೂಲಕ ಬಲ್ಕ್ ಎಸ್.ಎಂ.ಎಸ್ ಮತ್ತು ಧ್ವನಿ ಸಂದೇಶ, ಎಲ್.ಇ.ಡಿ ವಾಲ್ ಮೂಲಕ ಆಡಿಯೋ ಮತ್ತು ಧೃಶ್ಯ ಜಾಹೀರಾತು, ಸಾಕ್ಷ್ಯಚಿತ್ರ ಪ್ರಸಾರಕ್ಕೂ ಮುನ್ನ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯಿಂದ ಜಾಹೀರಾತು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಮತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಎಂ.ಸಿ.ಎಂ.ಸಿ. ಸಮಿತಿ ರಚಿಸಿಲಾಗಿದೆ. ಜಾಹೀರಾತು ಪೂರ್ವಾನುಮತಿ ನೀಡಲು ಉಪ ಸಮಿತಿ ರಚಿಸಿದ್ದು, ಈ ಸಮಿತಿ ಅಭ್ಯರ್ಥಿಗಳು ಸಲ್ಲಿಸುವ ಜಾಹಿರಾತು ಪ್ರಸಾರದ ಪ್ರಸ್ತಾವನೆಗಳನ್ನು ಸುಪ್ರೀಂ ಕೋರ್ಟ್ ತೀರ್ಪು, ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತಹ ಅಂಶಗಳನ್ನು ನೋಡಿ ಪ್ರಮಾಣ ಪತ್ರ ನೀಡಲಿದೆ.

ಅಭ್ಯರ್ಥಿ ನಿಗಧಿತ ಅರ್ಜಿ ನಮೂನೆಯಲ್ಲಿ ಜಾಹೀರಾತಿನ ವಿವರ, ಕಂಟೆಂಟ್ ಉತ್ಪಾದನಾ ಮತ್ತು ಪ್ರಸಾರದ ವೆಚ್ಚ ನಮೂದಿಸುವುದರ ಜೊತೆಗೆ ಚುನಾವಣಾ ಜಾಹೀರಾತಿನ ಸ್ಕ್ರಿಪ್ಟ್ ಮತ್ತು ಸಿ.ಡಿ. ಎರಡು ಪ್ರತಿಗಳಲ್ಲಿ ಸಮಿತಿಗೆ ಸಲ್ಲಿಸಿ ಜಾಹೀರಾತು ಪೂರ್ವಾನುಮತಿ ಪಡೆಯಬೇಕು. ಜಾಹೀರಾತಿನಲ್ಲಿ ಅಕ್ಷೇಪಾರ್ಹ ಅಂಶಗಳಿದಲ್ಲಿ ಸಮಿತಿಯ ನಿರ್ದೇಶನದಂತೆ ಅಭ್ಯರ್ಥಿಯು ಅದನ್ನು ತೆಗೆದು ಹಾಕಿ ಪರಿಷ್ಕøತ ಸ್ಕ್ರಿಪ್ಟ್ ಮತ್ತು ಸಿ.ಡಿ.ಗಳನ್ನು ಸಲ್ಲಿಸಬೇಕು. ಎಂ.ಸಿ.ಎಂ.ಸಿ. ಸಮಿತಿಯ ನಿರ್ಣಯವೇ ಅಂತಿಮವಾಗಿದ್ದು, ಎಲ್ಲಾ ಅಭ್ಯರ್ಥಿ ಇದಕ್ಕೆ ಬದ್ಧರಾಗಬೇಕು ಎಂದು ತಿಳಿಸಲಾಗಿದೆ.

ಇನ್ನೂ ಮತದಾನದ ಪೂರ್ವ ದಿನ ಹಾಗೂ ಮತದಾನ ದಿನಂದಂದು ದಿನಪತ್ರಿಕೆಯಲ್ಲಿ ಪ್ರಕಟಿಸುವ ಜಾಹೀರಾತಿಗೂ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಜಾಹೀರಾತು ಪೂರ್ವಾನುಮತಿ ಇಲ್ಲದೆ ಚುನಾವಣಾ ಜಾಹೀರಾತು ಪ್ರಸಾರ ಮಾಡುವಂತಿಲ್ಲ. ಜಾಹೀರಾತು ಪ್ರಸಾರ ಮಾಡಿದ್ದಲ್ಲಿ ಅದು ಎಂ.ಸಿ.ಸಿ. ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.