ಜಾಹಿರಾತಿಗೆ ಎನ್ ಡಿಎ ಸರ್ಕಾರದಿಂದ 713 ಕೋಟಿ ರೂ ವೆಚ್ಚ

ನವದೆಹಲಿ, ಅ 31- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾಹಿರಾತಿಗಾಗಿ 713.20 ಕೋಟಿ ರೂ ಖರ್ಚು ಮಾಡಿದೆ.
ಕಳೆದ ವರ್ಷ ಮುದ್ರಣ ಮತ್ತು ವಿದ್ಯುನ್ಮಾನ, ಹೊರಾಂಗಣ ಜಾಹಿರಾತುಗಳಿಗೆ ಈ ಹಣ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಹಕ್ಜು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಗೆ ಈ ಉತ್ತರ ದೊರೆತಿದೆ.
ಈ ಸಂಬಂಧ ಆರ್ ಟಿಐ ಕಾರ್ಯಕರ್ತ ಜತಿನ್ ದೇಸಾಯಿ ಅವರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ನೀಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 2019-2020 ರ ಅವಧಿಯಲ್ಲಿ ಪ್ರತಿ ದಿನ 1.95 ಕೋಟಿ ರೂ ವೆಚ್ಚ ಮಾಡಿರುವುದಾಗಿ ಅಂಕಿ ಅಂಶ ನೀಡಿದೆ.
ಮುದ್ರಣ ಮಾಧ್ಯಮದ ಜಾಹಿರಾತಿಗಾಗಿ 295.05 ಕೋಟಿ ರೂ ವೆಚ್ಚ ಮಾಡಲಾಗಿದೆ.
ವಿದ್ಯುನ್ಮಾನ ಮಾಧ್ಯಮ ಗಳಲ್ಲಿ ಜಾಹಿರಾತು ಪ್ರಕಟಿಸಲು 317.05 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಉತ್ತರಿಸಿದೆ.
ಅದೇ ರೀತಿ ಹೊರಾಂಗಣ ಜಾಹಿರಾತಿಗಾಗಿ 101.1 ಕೋಟಿ ರೂ ವಿನಿಯೋಗಿಸಲಾಗಿದೆ ಎಂದು ಪ್ರಸಾರ ಸಚಿವಾಲಯ ತಿಳಿಸಿದೆ.