ಜಾವಾ: ಪ್ರಭಲ‌ ಭೂಕಂಪನಕ್ಕೆ 56 ಸಾವು, 700 ಮಂದಿಗೆ ಗಾಯ: ಸಾವಿರಾರು ಮನೆಗಳ ದ್ವಂಸ

ಜಕಾರ್ತ,ನ. 21-:ಇಂಡೋನೇಷಿಯಾದ ಜಕಾರ್ತದಲ್ಲಿ ಪ್ರಭಲ ಭೂಕಂಪನ ಸಂಭವಿಸಿದ ಪರಿಣಾಮ ಕನಿಷ್ಟ 56 ಮಂದಿ ಸಾವನ್ನಪ್ಪಿದ್ದು 700 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಜಾವಾ ದಲ್ಲಿ ನಡೆದಿದೆ.

ರಿಕ್ಟರ್ ಮಾಪನದಲ್ಲಿ 6.9 ಮಾಪನದಲ್ಲಿ ಭೂಕಂಪನ‌ ಸಂಭವಿಸಿದೆ.ದ್ವೀಪ ಭಾಗದ ಜಾವಾದಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆಗೆ ಇಂಡೋನೇಷಿಯಾದ ಜನ ಬೆಚ್ಚಿ ಬಿದ್ದಿದ್ದಾರೆ. ಪ್ರಭಲ ಭೂಕಂಪನದ ಪರಿಣಾಮ ಮತ್ತಷ್ಟು ಸಾವು ನೋವು ಹೆಚ್ಚಾಗುವ ಸಾದ್ಯತೆಗಳಿವೆ

ಜಕಾರ್ತದ ಒಳಾಡಳಿತ ಸಚಿವಾಲಯದ ವಕ್ತಾರ ಆಡಮ್ ಮಾಹಿತಿ ನೀಡಿದ್ದು ಭೂಕಂಪನದಿಂದ 44 ಢೇಏ ಹೆಚ್ಚಿನ ಮಂದಿ ಸಾವನ್ನಪ್ಪುವ ಸಾದ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ‌.

ಸಾವಿರಾರು ಮನೆಗಳಿಗೆ ಹಾನಿ:

ಭೂಕಂಪನದಿಂದ ಸಾವಿರಾರು ಮನೆಗಳಿಗೆ ಹಾನಿಯಾಗಿದ್ದು ಜನರ ಸಮಸ್ಯೆಗೆ ಸಿಲುಕುವಂತಾಗಿದೆ. ಕಟ್ಟಡಗಳೆಲ್ಲಾ ಅಲುಗಾಡಿದ ಹಿನ್ನೆಯಲ್ಲಿ ಜನರು ಭಯದಿಂದ ಓಡೋಡಿ ಆಚೆ ಬಂದಿದ್ದಾರೆ.

ಭೂಕಂಪನದ ಪರಿಣಾಮ ದ್ವೀಪ ಭಾಗದ ಹಲವು ಕಡೆ ಭೂಕುಸಿತ ಉಂಟಾಗಿ ಅದರಲ್ಲಿ ಸಿಕ್ಕಿಹಾಕಿಕೊಂಡ ಜನರನ್ನು ರಕ್ಷಣೆ ಮಾಡುವ ಕಾರ್ಯ ಭರದಿಂದ ಸಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

  • ಪ್ರಭಲ ಭೂಕಂಪನ ತತ್ತರಿಸಿದ ಇಂಡೋನೇಶಿಯಾದ ಜನತೆ
  • ಪ್ರಾಥಮಿಕ ಮಾಹಿತಿಯ ಪ್ರಕಾರ 44 ಮಂದಿ ಸಾವು
  • ನೂರಾರು ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು
  • ಸಾವಿರಾರು ಮನೆಗಳು ದ್ವಂಸ,
  • ಸಾವು ನೋವು ಮತ್ತಷ್ಟು ಹೆಚ್ಚಾಗುವ ಸಾದ್ಯತೆ