ಜಾಲ್ಸೂರು ಈಚರ್ ಲಾರಿ ಪಲ್ಟಿ

ಸುಳ್ಯ, ಜೂ.೪- ಮಂಗಳೂರಿನಿಂದ ಸುಳ್ಯಕ್ಕೆ ಟಾಟಾ ಶೀಟ್ ಹೊತ್ತೊಯ್ಯುತ್ತಿದ್ದ ಈಚರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಬೈತಡ್ಕದ ದೊಡ್ಡ ತಿರುವಿನಲ್ಲಿ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಚಾಲಕ ಅಲ್ಪ ಸ್ವಲ್ಪ ಗಾಯದಿಂದ ಪಾರಾಗಿದ್ದು, ಟಾಟಾ ಶೀಟ್ ಗಳು ರಸ್ತೆಯಲ್ಲಿ ಬಿದ್ದಿದ್ದು, ಲಾರಿ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.