ಜಾಲಿಹಾಳ್ ನಲ್ಲಿ
ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.31: ತಾಲೂಕಿನ  ಜಾಲಿಹಾಳ್ ಗ್ರಾಮದಲ್ಲಿ  ಮಹರ್ಷಿ ವಾಲ್ಮೀಕಿ  ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಿನ್ನೆ ನಡೆಯಿತು‌
ಗ್ರಾಮೀಣ ಶಾಸಕ ಬಿ.ನಾಗೇಂದ್ರ  ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿ ಸಂಭ್ರಮದಿಂದ ಬೃಹತ್ ಮೆರವಣಿಗೆ ನಡೆಯಿತು.
ಶಾಸಕ ನಾಗೇಂದ್ರ ಅವರು ಗ್ರಾಮದ ಜನರನ್ನು ಉದ್ದೇಶಿಸಿ ಮಾತನಾಡಿ. ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು ಬಹಳ ಸಂತೋಷವಾಗಿದೆ. ಇಡೀ ವಿಶ್ವಕ್ಕೆ ಸಮಾಜಮುಖಿ ಚಿಂತನೆ ಸಾರಿದವರು ಅವರು.  ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾದವರಲ್ಲ. ಪ್ರಸ್ತುತ ಅವರ ತತ್ವಗಳ ಪರಿಪಾಲನೆ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗವಿಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡರಾದ ಹಸ್ತ ಪಂಪನಗೌಡ, ರಾಜಶೇಖರ್ ರೆಡ್ಡಿ, ಶ್ರೀಧರ್, ಮಲ್ಲಿಕಾರ್ಜುನ ಗೌಡ, ಗೋನಾಳ್ ನಾಗಭೂಷಣ್ ಗೌಡ ಲೋಕರೆಡ್ಡಿ, ಅಣ್ಣ ನಾಗರಾಜ್, ಗೋವರ್ಧನ್ ರೆಡ್ಡಿ, ಮೊದಲಾದವರು ಇದ್ದರು.

Attachments area