ಜಾಲಹಳ್ಳಿ: ಭಾರಿ ಮಳೆ ಜನ ಜೀವ ಅಸ್ತವ್ಯಸ್ತ ಮನೆಗಳು ಜಲವೃತ

ದೇವದುರ್ಗ,ಆ.೦೩-ಸಮೀಪದ ಜಾಲಹಳ್ಳಿ ಪಟ್ಟಣದಲ್ಲಿ ಮಂಗಳವಾರ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ಗುರು ಸಿದ್ದಮ್ಮ ಕಾಲೋನಿಯ ೫೦ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ಜಲವೃತಗೊಂಡು ಜನ ಜೀವನ ಅಸ್ತವ್ಯಸ್ತವಾಗಿದೆ.
ವರ್ಷದ ೧೨ ತಿಂಗಳು ಕಾಲ ನಿರಂತರವಾಗಿ ಈ ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ಇಲ್ಲಿನ ನಿವಾಸಿ ತೋತ್ತಾಗುತ್ತಿದ್ದಾರೆ ಪಕ್ಕದಲ್ಲಿಯೇ ಹಿಂದೂಳಿದ ವರ್ಗದ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿ ನಿಲಯದ ಕಟ್ಟಡಗಳು ನೀರಿನಲ್ಲಿ ಜಲವೃತವಾಗಿದ್ದು. ಇಂತಹ ಪ್ರದೇಶದ ನೀರು ಸರಗವಾಗಿ ಹರಿದು ಹೋಗಬೇಕೆಂದು ೨೦೧೧-೧೨ನೇ ಸಾಲಿನಲ್ಲಿ ?೪ಕೋಟಿ ವೆಚ್ಚದಲ್ಲಿ ನಿರ್ಮಿಸಿ ರಾಜ್ ನಿರ್ಮಿಸಲಾಗಿದೆ. ಆದರೆ ಈ ಕಾಲುವೆಯಲ್ಲಿ ಹೂಳು ತುಂಬಿ ಇಲ್ಲಿವರೆಗೆ ಸ್ವಚ್ಚತೆ ಮಾಡದೇ ಇರುವುದರಿಂದ ಕಾಲುವೆಯಲ್ಲಿ ಗಿಡ ಗಂಟಿ ಬೆಳೆದು ಈ ಕಾಲೋನಿಯಲ್ಲಿನ ನೀರು ಸರಗವಾಗಿ ಹರಿದು ಹೋಗದೇ ಅಲ್ಲಿಯೇ ಸಂಗ್ರಹವಾಗುತ್ತೆ. ಈ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು ಸಹ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಕಾಲೋನಿಯ ನಿವಾಸಿ ಮಲ್ಲಪ್ಪ ಇನಾಂದಾರ್ ಆರೋಪಿಸಿದರು.
ಪಟ್ಟಣದ ಗಂಗಾನಗರದಲ್ಲಿ ತಿಮ್ಮಪ್ಪನ ಗುಡ್ಡದಿಂದ ಹರಿದು ಬರುವ ಮಳೆಯ ನೀರು ಹಾಗೂ ಗಾಜಲದಿನ್ನಿ ಹಳ್ಳದ ನೀರು ಸೇರಿ ಅನೇಕ ಮನೆಗಳಿಗೆ ನುಗ್ಗಿದೆ. ಹಳ್ಳದ ನೀರು ಸರಗವಾಗಿ ಹರಿದು ಹೋಗಲು ಈ ಹಿಂದೆ ವ್ಯವಸ್ಥೆ ಮಾಡಲಾಗಿತ್ತು. ಅದರೆ, ಈಚೆಗೆ ಹಳ್ಳದ ಎರಡು ದಂಡೆಗೆ ಗೋಡೆ ನಿರ್ಮಿಸಿ ಚರಂಡಿಯಂತೆ ಮಾಡಿದ್ದಾರೆ. ಅದರಲ್ಲಿ ಹೊಳು ತುಂಬಿ ನೀರು ಮನೆಗಳಿಗೆ ಹಾಗೂ ಪ್ರವಾಸಿ ಮಂದಿರದ ಅವರಣದಲ್ಲಿ ಸುಮಾರು ಎರಡು ಅಡಿ ಎತ್ತರ ನೀರು ಸಂಗ್ರಹವಾಗಿದೆ. ಇಂತಹ ಅನೇಕ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಸಂಘಟನೆಗಳು, ಹೋರಾಟ ಮಾಡಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡರು. ಇಲ್ಲಿಯವರೆಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗನಿಧಿಗಳು ಕಿಚ್ಚತು ಗಮನ ಹರಿಸಿಲ್ಲ. ಅಲ್ಲದೆ ಈ ತರಹ ಸಮಸ್ಯೆ ಇರುವುದರಿಂದ ಬಹುತೇಕ ಗ್ರಾಮಗಳಲ್ಲಿ
ರಸ್ತೆ, ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿ, ಚರಂಡಿ, ಸಾರಿಗೆ, ಶಾಲಾ ಕಟ್ಟಡಗಳ ಶಿಥಿಲಗೊಂಡಿರುವುದು, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಇವೆ. ತಕ್ಷಣವೇ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಜಾಲಹಳ್ಳಿ ಪಟ್ಟಣದ ಬಗ್ಗೆ ವಿಶೇಷ ಕಾಳಜಿ ವಹಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ ಸದಸ್ಯ ಮಕ್ತೂಮ್ ಪಾರಶಿ ಒತ್ತಾಯಿಸಿದ್ದಾರೆ.
ಫೋಟೋ೩ಡಿವಿಡಿ.೫