ಜಾಲಹಳ್ಳಿ ಟಿಪ್ಪು ಸುಲ್ತಾನ್ ಜಯಂತಿ ಅಚರಣೆ

ದೇವದುರ್ಗ.ನ.೧೦-ಸಮೀಪದ ಜಾಲಹಳ್ಳಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಯುವಕರು ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂದರು ಸೇರಿ ಮೈಸೂರು ಹುಲಿ ಬಿರುದು ಪಡೆದುಕೊಂಡ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಳವಾಗಿ ಅಚರಣೆ ಮಾಡಲಾಯಿತು.
ಪ್ರತಿ ವರ್ಷ ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಅದರೆ, ಈ ವರ್ಷ ಕೋವಿಡ್ ಕಾರಣ ದಿಂದ ಮೆರವಣಿಗೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಕೈಬಿಟ್ಟು ಕೆವಲ ಟಿಪ್ಪು ಸುಲ್ತಾನ್ ವೃತ್ತದಲ್ಲಿರುವ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರ ಸ್ಮರಣೆ ಮಾತ್ರ ಕೈಗೊಳ್ಳಲಾಗಿದೆ ಎಂದು ಹೈದರ್ ಅಲಿ ಮುಲ್ಲಾ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ಮುಖಂಡರಾದ ನಸೀರುದ್ದಿನ್ ಮುಲ್ಲಾ, ಬಸವರಾಜ ಪಾಣಿ, ನರಸಣ್ಣ ನಾಯಕ, ಮೌನೇಶ ದೇಸಾಯಿ, ಹುಸೇನಪ್ಪ ಸೇರಿದಂತೆ ಅನೇಕರು ಇದ್ದರು.