ಜಾಲಹಳ್ಳಿ: ಉದ್ಯೋಗ ಖಾತರಿ ಪ್ರಾರಂಭಕ್ಕೆ ಅದೇಶಕ್ಕೆ ಕೂಲಿ ಕಾರ್ಮಿಕರಿಂದ ಸ್ವಾಗತ

ದೇವದುರ್ಗ.ನ.೧೩-ತಾಲ್ಲೂಕಿನಲ್ಲಿಯೇ ನಿತ್ಯ ಒಂದಲ್ಲೊಂದು ಸುದ್ದಿಯಿಂದ ಜಾಲಹಳ್ಳಿ ಗ್ರಾಮದ ಹೆಸರು ತಾಲ್ಲೂಕಿನ ಹಾಗೂ ಜಿಲ್ಲೆಯ ಜನತೆಗೆ ಗೊತ್ತಿರುವ ಗ್ರಾಮವಾಗಿದೆ. ಅಲ್ಲಿನ ಗ್ರಾಮ ಪಂಚಾಯಿತಿಯನ್ನು ಈಚೆಗೆ ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯಿತಿಯಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಅದನ್ನೆ ತಕ್ಷಣವೇ ಜಾರಿ ಮಾಡಲು ಜಿಲ್ಲಾಧಿಕಾರಿಯ ಮೂಲಕ ಅದೇಶ ಮಾಡಿ ಮುಖ್ಯಾಧಿಕಾರಿಯನ್ನು ಎರವಲು ಸೇವೆಗೆ ನಿಯೋಜನೆ ಮಾಡಿ ಕಳೆದ ೬ ತಿಂಗಳಿಂದ ಬೇಕಾಬಿಟ್ಟಿಯಾಗಿ ನಿರ್ವಹಣೆ ಮಾಡಲಾಗುತ್ತಿತ್ತು.
ಗ್ರಾ.ಪಂ ಮೇಲ್ದರ್ಜೆಗೆ ಏರಿಸಿದ ಕ್ರಮ ಹಾಗೂ ಪಾಲಿಸಬೇಕಾದ ನಿಯಮಾವಳಿ ಪಾಲಿಸಿಲ್ಲ ಎಂದು ಸ್ಥಳೀಯ ಪ್ರಾಂತ ರೈತ ಸಂಘದ ಮುಖಂಡರ ತಂಡ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ದಾವೆ ಹೊಡಿದ ಹಿನ್ನೆಲೆಯಲ್ಲಿ ಸಚಿವ ಸಂಪುಟ ದಲ್ಲಿ ಕೈಗೊಂಡ ಅದೇಶಕ್ಕೆ ನ್ಯಾಯಾಲಯ ದಿನಾಂಕ ೨೯-೯-೨೦೨೧ ರಂದು ತಡೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಲದ ತಡೆ ಅದೇಶ ಸಮೇತವಾಗಿ ಈಚೆಗೆ ಬೆಂಗಳೂರಿನ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರನ್ನು ಬೇಟಿ ಮಾಡಿ ವಿಷಯ ತಿಳಿಸಿದ್ದರು.
ಆಯುಕ್ತರು ತಕ್ಷಣವೇ ದಿನಾಂಕ ೧೦-೧೧-೨೦೨೧ ರಂದು ಆದೇಶ ಮಾಡಿ ತಕ್ಷಣವೇ ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾಯತಿ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಪ್ರಾರಂಭಿಸಬೇಕೆಂದು ತಿಳಿಸಿದ್ದಾರೆ. ಈ ಅದೇಶವನ್ನು ಕೂಲಿ ಕಾರ್ಮಿಕರು ಸ್ವಾಗತಿಸಿದ್ದಾರೆ.
ಅದರೆ, ಈ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸುಮಾರು ೪೦೦೦ ಜನ ಕೂಲಿ ಕಾರ್ಮಿಕರು ವರ್ಷದಲ್ಲಿ ಪ್ರತಿ ಕುಟುಂಬದಲ್ಲಿ ೧೦೦ ದಿನ ಮಾನವ ದಿನಗಳನ್ನು ದುಡಿಯುತ್ತಿದ್ದರು. ಅಲ್ಲದೇ ೧೦೦ ಜನ ಪದವಿದಾರರು ನಿರುದ್ಯೋಗಿ ವಿದ್ಯಾವಂತ ಯುವಕರು, ಗುಂಪಿನ ಮೇಸ್ತ್ರಿ ಗಳಾಗಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಅಸರೆಯಾಗಿದ್ದರು.
ಅಲ್ಲದೇ ರೈತರ ಜಮೀನುಗಳಲ್ಲಿ ಕೃಷಿಹೊಂಡ, ಬದು ನಿರ್ಮಾಣ, ದನ ಕರಗಳಿಗೆ ಶೆಟ್, ಕೆರೆ ನಿರ್ಮಾಣ, ನಾಲಾಬಂಡ್, ಅಂಗನವಾಡಿ ಕೇಂದ್ರ ಕಟ್ಟಡ, ಬಿಸಿಯೂಟದ ಕೋಣೆ, ಶಾಲಾ ಕಾಂಪೌಂಡ್ ನಿರ್ಮಾಣ, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಯಧನ ಸೇರಿದಂತೆ ಅನೇಕ ಕಾಮಗಾರಿಗಳು ಗ್ರಾಮದಲ್ಲಿ ಕೈಗೆತ್ತಿಕೊಂಡು ಒಂದು ರೀತಿಯಲ್ಲಿ ಕನಿಷ್ಟ ಸೌಲಭ್ಯಗಳನ್ನು ಒದಗಿಸಲಾಗಿತ್ತು.
ಅದೇಶಕ್ಕೆ ಕಲಬುರಗಿ ಹೈಕೋರ್ಟ್ ಪೀಠ ಈಚಗೆ ತಡೆ ನೀಡಿದ ಹಿನ್ನೆಲೆಯಲ್ಲಿ ನ.೧೦ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಅದೇಶ ಮಾಡಿ ತಕ್ಷಣವೇ ಜಾಲಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ತಕ್ಷಣವೇ ಕೂಲಿ ಕೆಲಸ ನೀಡಬೇಕೆಂದು ಅದೇಶ ಮಾಡಿದ್ದಇನ್ನು ಇದರಿಂದ ಸ್ಥಳೀಯ ಕೂಲಿಕಾರ್ಮಿಕರು ಸ್ವಾಗತಿಸಿದ್ದಾರೆ.
ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಕೆಲವುವರು ದೊಡ್ಡ ನಗರಗಳಿಗೆ ಗುಳೆ ಹೋಗಿದ್ದಾರೆ.
ಕಳೆದ ಒಂದು ವರ್ಷದಿಂದ ಕೆಲಸ ಸ್ಥಗಿತಗೊಳಿಸಲಾಗಿತ್ತು. ಅದೂ ಕೋವಿಡ್ ಸಂದರ್ಭದಲ್ಲಿ ಕೆಲಸ ಇಲ್ಲದೆ ಬಡ ಕೂಲಿ ಕಾರ್ಮಿಕರು ಮನೆಯಲ್ಲಿಯೇ ಕುಳಿತು ಕಾಲ ಕಳೆದು ಜೀವನ ಸಾಗಿರುವುದು ತುಂಬಾ ಕಷ್ಟವಾಗಿದೆ ಎಂದು ಕೂಲಿ ಕಾರ್ಮಿಕ ಬಸವರಾಜ ನಾಯಕ ತಮ್ಮ ಅಳಲನ್ನು ಹೇಳಿಕೊಂಡರು.
ಅದರೆ, ಪಟ್ಟಣ ಪಂಚಾಯಿತಿ ಯಾಗಿರುವುದರಿಂದ ಜಿಲ್ಲಾಧಿಕಾರಿಗಳ ಅದೇಶದ ಮೂಲಕ ಕೆಲಸ ನಿರ್ವಹಿಸುತ್ತಿರುವ ಇಲ್ಲಿನ ಪ.ಪಂ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಸೇವೆ ನೀಯೋಜಕ್ಕೆ ಮುಂಚೆಯೇ ನ್ಯಾಯಾಲಯದ ಆದೇಶಕ್ಕೆ ಬದ್ದರಾಗಬೇಕೆಂದು ತಿಳಿಸಿದ್ದರು. ಅದರೂ ಸಹ ಅವರು
ಇನ್ನು ಮುಂದೆ ಇಲ್ಲಿಯೇ ಮುಂದೂವರಿಯ ಬಹುದ ಕಾದು ನೋಡಬೇಕಾಗಿದೆ.
ಆಯುಕ್ತರ ಅದೇಶವನ್ನು ಪಾಲಿಸಿ ತಕ್ಷಣವೇ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ನ್ಯಾಯಲದಲ್ಲಿ ದಾವೆ ಹೂಡಿದ ಮಕ್ತೂಮ್ ಪಾರಶಿ ಒತ್ತಾಯಿಸಿದ್ದಾರೆ.