ಜಾಲವಾದ, ಇಬ್ರಾಹಿಂಪುರ ಗ್ರಾಮಸ್ಥರಿಗೆ ಕೊರೋನಾ ನಿಯಂತ್ರಣದ ಅರಿವು ಮೂಡಿಸಿದ ವೈದ್ಯರು

ಸಿಂದಗಿ (ದೇವರ ಹಿಪ್ಪರಗಿ), ಜೂ.2-ಗ್ರಾಮೀಣ ಭಾಗದ ಜನರ ಸೇವೆ ಮಾಡಲು ಸರ್ಕಾರವು ವೈದ್ಯರ ನಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡುತ್ತಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆರ್.ಬಿ.ಎಸ್.ಕೆ ಆಯುಷ್ ವೈದ್ಯಾಧಿಕಾರಿ ಡಾ.ಶ್ವೇತಾ ಪಿ.ವಿ ಅವರು ಜಾಲವಾದ ಮತ್ತು ಇಬ್ರಾಹಿಂಪುರ ಗ್ರಾಮದಲ್ಲಿ ಕೊರೋನಾ ನಿಯಂತ್ರಣದ ಕುರಿತು ಜನರಿಗೆ ಅರಿವು ಮೂಡಿಸಿದರು.
ಈ ಸಂಧರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಎನ್.ವಿ.ವಿಜಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕರಾದ ರಾಜಶ್ರೀ ಕನ್ನೋಳ್ಳಿ, ತಾಲೂಕಾ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಶಿವಶೇಖರ ಪಾಟೀಲ, ರಾಕೇಶ ಶಂಬೇವಾಡ, ಶೂಶ್ರುಷಕಿ ಅಧಿಕಾರಿಗಳಾದ ಜ್ಯೋತಿ ಕಟಾರೆ, ನೇತ್ರ ಸಹಾಯಕ ಅಧಿಕಾರಿಗಳಾದ ಚಂದ್ರಶೇಖರ ಕಾಳೆ ಮತ್ತು ಆಶಾ ಕಾರ್ಯಕರ್ತೆಯರಾದ ಪ್ರೇಮಾ ಬಡಿಗೇದ, ಶ್ರೀದೇವಿ ದೊಡಮನಿ, ರಾಜಶ್ರೀ ಗೌಂಡಿ, ಕೆಂಚಮ್ಮ ದೊಡಮನಿ, ಶಾರದಾ ಮನಗೂಳಿ, ಶಾಂತಾ ಮಣೂರ ಉಪಸ್ಥಿತರಿದ್ದರು.