ಜಾಲಪ್ಪರನ್ನು ಬೇಟಿ ಮಾಡಿದ ಸಿದ್ದರಾಮಯ್ಯ

ಕೋಲಾರ,ಮಾ.೨೯: ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೇಸ್‌ನ ಹಿರಿಯ ಮುಖಂಡ ಆರ್.ಎಲ್. ಜಾಲಪ್ಪಾ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದರು.
ಕೋಲಾರಕ್ಕೆ ಹಿಂದುಳಿದ ವರ್ಗಗಳ ಮೀಸಲಾತಿ ಒಕ್ಕೂಟದ ಪ್ರತಿಭಟನೆಗೆಂದು ಕೋಲಾರಕ್ಕೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೋಲಾರ ನಗರದ ಹೊರವಲಯದಲ್ಲಿರುವ ದೇವರಾಜು ಅರಸು ಮೆಡಿಕಲ್ ಕಾಲೇಜಿನ ಗೆಸ್ಟ್ ಹೌಸ್?ನಲ್ಲಿದ್ದ ಆರ್.ಎಲ್.ಜಾಲಪ್ಪ ಅವರನ್ನು ಬೇಟಿ ಮಾಡಿ ಕೆಲ ಕಾಲ ಮಾತನಾಡಿದರು. ಆರ್.ಎಲ್.ಜಾಲಪ್ಪ ಅವರು ಇತ್ತೀಚೆಗೆ ಸಾಕಷ್ಟು ಅನಾರೋಗ್ಯ ಸಮಸ್ಯೆಯಿಂದ ಬಳಲಿ ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಅರೋಗ್ಯ ವಿಚಾರಿಸಿದರು. ಸಿದ್ದರಾಮಯ್ಯ ಹಾಗೂ ಜಾಲಪ್ಪ ಒಂದು ಕಾಲದಲ್ಲಿ ಆತ್ಮೀಯರಾಗಿದ್ದು ಮೆಡಿಕಲ್? ಕಾಲೇಜು ನಿರ್ಮಾಣ ವೇಳೆಯಲ್ಲಿ ಟ್ರಸ್ಟ್‌ನ ನಿರ್ದೇಶಕರುಗಳ ಪೈಕಿ ಸಿದ್ದರಾಮಯ್ಯ ಕೂಡಾ ಒಬ್ಬರಾಗಿದ್ದರು, ಅದಾದ ನಂತರ ರಾಜಕೀಯ ಬೆಳವಣಿಗೆಗಳು ಹಾಗೂ ಪರಿಸ್ಥಿತಿಗಳಿಂದ ಸಿದ್ದರಾಮಯ್ಯ ಟ್ರಸ್ಟ್ ನಿಂದ ಹೊರ ಬಂದಿದ್ದರು. ಇಷ್ಟಾದರು ಅವರ ಆತ್ಮೀಯತೆ ಹಾಗೂ ಬಾಂಧವ್ಯ ಕಡಿಮೆಯಾಗಿಲ್ಲ ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗಲೆಲ್ಲಾ ಜಾಲಪ್ಪನವರನ್ನು ಮಾತನಾಡಿಸಿಕೊಂಡು ಹೋಗೋದು ವಾಡಿಕೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಾತ್ ನೀಡಿದರು.