
ಮುಂಬೈ, ಮಾ. ೨೫- ಬಾಲಿವುಡ್‌ನ ಸೂಪರ್‌ಕಪಲ್‌ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ದೀಪಿಕಾ ಪೋಷಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆದಿದೆ.
ದೀಪಿಕಾ ಪತಿ ರಣ್‌ವೀರ್ ಕೂಡ ಬಾಲಿವುಡ್‌ನ ಖ್ಯಾತ ನಟರಾಗಿದ್ದಾರೆ. ಟ್ರೋಲ್‌ಗಳಿಗೂ ಆಹಾರವಾದವರು. ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ವಿವಾಹದ ನಂತರವೂ ಈ ಹಿಂದಿನಂತೆಯೇ ತಮ್ಮ ಸಿನಿ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವ ದೀಪಿಕಾ ಹಾಗೂ ರಣ್‌ವೀರ್ ತಾವಿರುವುದೇ ಹೀಗೆ ಎಂದು ಯಾವುದೇ ಟ್ರೋಲ್‌ಗಳಿಗೂ ಉತ್ತರಿಸುತ್ತಿಲ್ಲ.
ಇದೀಗ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಹಾಗೂ ತಾಯಿ ಉಜ್ಜಲಾ ಕುರಿತು ಟ್ರೋಲ್‌ಗಳು ಹರಿದಾಡಿವೆ
ಒಂದೊಮ್ಮೆ ಪ್ರಕಾಶ್ ಅವರು ಸಂದರ್ಶನವೊಂದರಲ್ಲಿ ತಮ್ಮ ವಿವಾಹದ ಕುರಿತು ಮಾತನಾಡುತ್ತಾ ನಾನು ಹಾಗೂ ಉಜ್ಜಲಾ ಕಸಿನ್ಸ್ ಎಂಬುದನ್ನು ಬಹಿರಂಗಪಡಿಸಿದ್ದರು.೧೯೮೦ ರಲ್ಲಿ ವಿಶ್ವದ ನಂಬರ್ ೧ ಶ್ರೇಯಾಂಕಿತ ಆಟಗಾರ ಪ್ರಕಾಶ್ ಅವರು ಉಜ್ಜಲಾರನ್ನು ಅತಿಯಾಗಿ ಪ್ರೀತಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ನಾನು ನನ್ನ ಎರಡನೆಯ ಕಸಿನ್ ಉಜ್ಜಲಾರನ್ನು ವಿವಾಹವಾದೆ ಹಾಗೂ ಕೂಡಲೇ ಕೋಪರ್‌ಹೇಗನ್‌ಗೆ ಹೋದೆವು.
ಅಲ್ಲಿ ನಾನು ಉದ್ಯೋಗ ಗಿಟ್ಟಿಸಿಕೊಂಡೆ ಹಾಗೂ ಅಲ್ಲಿಯೇ ದೀಪಿಕಾ ಹುಟ್ಟುವವರೆಗೆ ೧೯೮೬ ರವರೆಗೆ ವಾಸಿಸಿದ್ದೆವು. ನಾನು ೧೯೮೯ ರಲ್ಲಿ ನಿವೃತ್ತನಾದೆ ಎಂದು ಪ್ರಕಾಶ್ ತಿಳಿಸಿದ್ದಾರೆ.ಈ ಸಂದರ್ಶನ ಇಂಟರ್ನೆಟ್‌ನಲ್ಲಿ ಪ್ರಸಾರಗೊಳ್ಳುತ್ತಿದ್ದಂತೆಯೇ ನೆಟ್ಟಿಗರು ಸಾಮಾಜಿಕ ತಾಣಗಳಲ್ಲಿ ದಂಪತಿಗಳನ್ನು ಟ್ರೋಲ್ ಮಾಡಲಾರಂಭಿಸಿದರು.
ಕೆಲವೊಂದು ಬಳಕೆದಾರರು ಗೇಮ್ ಆಫ್ ಥ್ರೋನ್ಸ್‌ನ ಪಾತ್ರಗಳಿಗೆ ಅವರನ್ನು ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ದಂಪತಿಗಳಪರವಾಗಿ ಕೂಡ ಕಾಮೆಂಟ್ ಮಾಡಿದ್ದು, ಭಾರತದಲ್ಲಿ ಇದು ಹೇಗೆ ಸಾಮಾನ್ಯ ಪದ್ಧತಿಯಾಗಿದೆ ಎಂಬುದನ್ನು ವಿವರಿಸಿದ್ದಾರೆ.ದಕ್ಷಿಣದ ಕಡೆಗಳಲ್ಲಿ ಇಂತಹ ಪದ್ಧತಿಗಳನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ ಎಂದು ತಿಳಿಸಿರುವ ನೆಟ್ಟಿಗರೊಬ್ಬರು ಕೆಲವೊಂದು ನಿಯಮಗಳಿವೆ ಎಂದು ತಿಳಿಸಿದ್ದಾರೆ.