ಜಾರ್ಜಿಯಾದಲ್ಲಿ ಟ್ರಂಪ್‌ ಹಿಂದಿಕ್ಕಿದ ಬೀಡೆನ್ : ಗೆಲುವಿಗೆ ಇನ್ನೂ ಹತ್ತಿರ

ವಾಷಿಂಗ್ಟನ್, ನ. 6- ಅಮೆರಿಕಾ ಅಧ್ಯಕ್ಷೀಯ ಮತ ಎಣಿಕೆ ತೀವ್ರ ಕುತೂಹಲ ಕೆರಳಿಸಿದ್ದು ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಜಾರ್ಜಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಮುನ್ನಡೆ ಸಾಧಿಸಿದ್ದಾರೆ.

1992 ರ ಇಲ್ಲಿಯ ವರೆಗೆ ರಿಪಬ್ಲಿಕನ್ ಹಿಡಿತದಲ್ಲಿದ್ದ ಜಾರ್ಜಿಯಾ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷ ಮುನ್ನಡೆ ಸಾಧಿಸಿದೆ. ಹೀಗಾಗಿ 270 ಜನಪ್ರತಿನಿಧಿಗಳ ಮತ ಪಡೆಯಲು ಬೀಡೆನ್ ಗೆ ಮತ್ತಷ್ಟು ಸಹಕಾರಿಯಾಗಿದೆ.

ಸದ್ಯ ಜೋ ಬೀಡೆನ್ 264 ಮತ್ತು ಡೊನಾಲ್ಡ್ ಟ್ರಂಪ್ ಅವರು 214 ಜನ‌ಪ್ರತಿನಿಧಿಗಳ ಮತ ಪಡೆದಿದ್ದಾರೆ.

ಇದುವೆಗೂ ಚಲಾವಣೆಯಾದ ಮತಗಳ‌ ಪೈಕಿ ಬೀಡೆನ್ ಪರವಾಗಿ ಶೇಕಡ 50.51 ಸರಾಸರಿಯಲ್ಲಿ 7 ,34,87,367 ಮತ ಪಡೆದಿದ್ದಾರೆ ಡೊನಾಲ್ಡ್ ಟ್ರಂಪ್ ಅವರು ಶೇ.47.85 ರ ಸರಾಸರಿಯಲ್ಲಿ 6,96,20,543 ಮತ ಪಡೆದಿದ್ದಾರೆ. ಇನ್ನೂ ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟವಾಗಬೇಕಾಗಿದೆ.

ಜಾರ್ಜಿಯಾದಲ್ಲಿ ಮುನ್ನೆಡೆ ಜೋ ಬೀಡೆನ್‌ ಅವರ ಗೆಲುವಿಗೆ ಇನ್ನಷ್ಟು ಸಹಕಾರಿಯಾಗಿದೆ. ಬೀಡೆನ್ ಇನ್ನೂ ಒಂದು ರಾಜ್ಯದಲ್ಲಿ ಗೆಲುವು ಸಾಧಿಸಿದರೆ ಅಮೇರಿಕಾದ 46 ನೇ ಅಧ್ಯಕ್ಷ ರಾಗುವ ಸನಿಹಕ್ಕೆ ಬಂದು ನಿಂತಿದ್ದಾರೆ.

ಅಮೆರಿಕದ ಎಲ್ಲ ರಾಜ್ಯಗಳಲ್ಲಿ ಮತಎಣಿಕೆ ಪೂರ್ಣಗೊಂಡಿದ್ದು ಜಾರ್ಜಿಯಾ, ಪೆನ್ಸಿಲ್ವೇನಿಯಾ, ನೆವಾಡ, ನಾರ್ಥ್ ಕೋರೋಲಿನಾ ರಾಜ್ಯಗಳಲ್ಲಿ ಮತ ಎಣಿಕೆ ಬಾಕಿ ಉಳಿದಿವೆ..

ಜಾರ್ಜಿಯಾದಲ್ಲಿ ಜೋ ಬೀಡೆನ್ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಬೇಕು ಎನ್ನುವ ಕನಸು ಕಂಡಿದ್ದ ಡೊನಾಲ್ಡ್‌ ಟ್ರಂಪ್ ಅವರ ಆಸೆಗೆ ತಣ್ಣಿರು ಎರೆಚೆಚುದು ಬಹುತೇಕ ಖಚಿತವಾಗಿದೆ.

ಮಾಜಿ ಉಪಾಧ್ಯಕ್ಷ ಜೋ ಬೀಡೆನ್ ಪರವಾಗಿ ಜಾರ್ಜಿಯಾದಲ್ಲಿ ಲಕ್ಷಾಂತರ ಮತಗಳು ಚಲಾವಣೆಯಾಗಿವೆ.ಹೀಗಾಗಿ‌‌ ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ರಾಜ್ಯವನ್ನು ಡೆಮಾಕ್ರಟಿಕ್ ಪಕ್ಷ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸೇನೆ ಕಣ್ಗಾವಲಿನಲ್ಲಿ ಮತ ಎಣಿಕೆ:

ಜಾರ್ಜಿಯಾದಲ್ಲಿ ಸೇನಾ ಪಡೆಯ ಕಣ್ಗಾವಲಿನಲ್ಲಿ ಮತ‌ ಎಣಿಕೆ ನಡೆದಿದೆ. ಹೀಗಾಗಿ ಯಾವುದೇ ಅಕ್ರಮಕ್ಕೆ ಅವಕಾಶ ಮಾಡಿಕೊಡಂತೆ ಎಚ್ಚರಿಕೆ‌ ವಹಿಸಲಾಗಿದೆ.

ಜಾರ್ಜಿಯಾದಲ್ಲಿ ಮತ ಎಣಿಕೆ ಮುಂದುವರಿದಿದ್ದು ಸದ್ಯದ ವರೆಗೂ ಜೋ ಬೀಡೆನ್ ಮುನ್ನೆಡೆ ಸಾಧಿಸಿ ಗೆಲುವಿನತ್ತ ಮುಖ ಮಾಡಿದ್ದಾರೆ.


ಬೀಡೆನ್ ಅಧ್ಯಕ್ಷ ಬಹುತೇಕ ಖಚಿತ

ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೀಡೆನ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಇಂದು ರಾತ್ರಿ ಇಲ್ಲವೆ ನಾಳೆ ಒಳಗೆ ಚುನಾವಣಾ ಫಲಿತಾಂಶ ಹೊರ ಬೀಳುವ ಎಲ್ಲಾ ಸಾದ್ಯತೆಗಳಿವೆ.
ಒಂದು ವೇಳೆ ಮತ ಎಣಿಕೆ ಬಾಕಿ ಇರುವ ರಾಜ್ಯಗಳ ಏನಾದರೂ ಹೆಚ್ಚು ಕಡಿಮೆ‌‌ ಆದರೆ ಫಲಿತಾಂಶ ಮತ್ತಷ್ಟು ವಿಳಂಬವಾಗುವ ಸಾದ್ಯತೆಗಳಿವೆ.