ಜಾರ್ಖಂಡ್‌ನಲ್ಲಿ ರಾಹುಲ್ ಯಾತ್ರೆ ಸ್ಥಗಿತ

ರಾಂಚಿ,ಫೆ.೧೪- ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ೨ನೇ ಹಂತದ ’ಭಾರತ ಜೋಡೊ ನ್ಯಾಯ ಯಾತ್ರೆ’ಯನ್ನು ಜಾರ್ಖಂಡ್‌ನಲ್ಲಿ ಇಂದು ಸ್ಥಗಿತಗೊಳಿಸಲಾಗಿದೆ

ರೈತರು ರಾಷ್ಟ್ರ ರಾಜಧಾನಿಯಲ್ಲಿ ನಡೆಸುತ್ತಿರುವ ’ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ತೆರಳಿರುವುದರಿಂದ ಯಾತ್ರೆ ಸ್ಥಗಿತಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ

ರಾಹುಲ್ ಗಾಂಧಿ ಅವರು ಚತ್ತೀಸಗಢದಿಂದ ಜಾರ್ಖಂಡ್‌ಗೆ ಗರ್ಹಾವ ಜಿಲ್ಲೆಯ ಮೂಲಕ ಬರಬೇಕಿತ್ತು. ಎರಡನೇ ಹಂತದ ಯಾತ್ರೆಗೆ ಇಂದು ದಿನಾಂಕ ನಿಗದಿಯಾಗಿತ್ತು. ನಿನ್ನೆ ತಡರಾತ್ರಿ ಕೈಗೊಂಡ ನಿರ್ಧಾರದಂತೆ, ಜಾರ್ಖಂಡ್‌ನಲ್ಲಿ ನಡೆಯಬೇಕಿದ್ದ ಭಾರತ್ ಜೋಡೊ ನ್ಯಾಯ ಯಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಕಾಂಗ್ರೆಸ್ ವಕ್ತಾರ ಸೋನಲ್ ಶಾಂತಿ ತಿಳಿಸಿದ್ದಾರೆ.

ಯಾತ್ರೆಯು ಜಾರ್ಖಂಡ್‌ನಿಂದ ಪುನರಾರಂಭಗೊಳ್ಳುವುದು ಅಸಂಭವವಾಗಿದೆ. ಆದರೆ, ಗರ್ಹಾವ ಜಿಲ್ಲೆಯ ರಂಕಾದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರೊಂದಿಗೆ ನಿಗದಿಯಾಗಿದ್ದ ಮಾತುಕತೆಯನ್ನು ಪಕ್ಷದ ನಾಯಕರಾದ ಜೈರಾಮ್ ರಮೇಶ್ ಹಾಗೂ ಇನ್ನಿತರ ನಾಯಕರು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ

ಜಾರ್ಖಂಡ್‌ನಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ ನಡೆದ ೧ನೇ ಹಂತದ ಯಾತ್ರೆಯನ್ನು ರಾಹುಲ್ ಮುನ್ನಡೆಸಿದ್ದರು. ಪಶ್ಚಿಮ ಬಂಗಾಳ ಮೂಲಕ ಫೆಬ್ರುವರಿ ೨ರಂದು ಜಾರ್ಖಂಡ್‌ಗೆ ಕಾಲಿಟ್ಟಿದ್ದ ಯಾತ್ರೆ ಫೆಬ್ರುವರಿ ೬ರಂದು ಒಡಿಶಾ ತಲುಪಿತ್ತು. ಇಂದು ಯಾತ್ರೆ ಸ್ಥಗಿತಗೊಳ್ಳದಿದ್ದರೆ,

ಮಣಿಪುರದಿಂದ ಜನವರಿ ೧೪ರಂದು ಆರಂಭವಾಗಿರುವ ’ಭಾರತ ಜೋಡೊ ನ್ಯಾಯ ಯಾತ್ರೆ’ಯು ೬೭ ದಿನಗಳವರೆಗೆ ೬,೭೧೩ ಕಿ.ಮೀ ದೂರ ಸಾಗಲಿದೆ. ಮಾರ್ಚ್ ೨೦ರಂದು ಮುಂಬೈ ತಲುಪುವ ಮುನ್ನ ೧೫ ರಾಜ್ಯಗಳ ೧೧೦ ಜಿಲ್ಲೆಗಳನ್ನು ಹಾದುಹೋಗಲಿದೆ