ಜಾರಕಿಹೋಳಿ ತೇಜೋವಧೆ ಖಂಡಿಸಿ ಬೃಹತ್ ಪ್ರತಿಭಟನೆ

ಇಂಡಿ:ನ.20: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಅವರ ಹೇಳಿಕೆಯನ್ನು ಬೆಂಬಲಿಸಿ ಪಟ್ಟಣದಲ್ಲಿ ಪ.ಜಾತಿ,ಪ.ಪಂಗಡ ಮತ್ತು ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಮತ್ತು ಮಹಾ ನಾಯಕ ಬಿ.ಆರ್. ಅಂಬೇಡಕರ ಸಂಘ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಪ್ರವಾಸಿಮಂದಿರದಿಂದ ಬಸವೇಶ್ವರ ವೃತ್ತ,ಅಂಬೇಡಕರ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಿರುಗಿ ಮನಿ ವಿಧಾನಸೌಧ ತಲುಪಿತು.

ಅಲ್ಲಿ ಮಾತನಾಡಿದ ಮುಖಂಡ ಸೋಮಶೇಖರ ಮ್ಯಾಕೇರಿ ಸತೀಶ ಜಾರಕಿಹೋಳಿಯವರ ತೇಜೋವಧೆ ಮಾಡಲಾಗುತ್ತಿದೆ. ಕೋಮುವಾದಿಗಳು ಮುಚ್ಚಿಟ್ಟಿದ್ದನ್ನು ಹೊರಹಾಕಿದ ಶಾಸಕ ಸತೀಶ ಜಾರಕಿಹೋಳಿ ಅವರ ಹೇಳಿಕೆಯ ಸತ್ಯ ಅರಗಿಸಿಕೊಳ್ಳಲಾಗದ ಮನುವಾದಿಗಳು ನಾಯಕನ ತೇಜೋವಧೆ ಮಾಡಲು ಹೋರಟಿದ್ದಾರೆ ಎಂದರು.

ಸುರೇಶ ನಡಗಡ್ಡಿ, ಶಿವಾನಂದ, ಅಕ್ಷತಾ ಕೇಶಿ ಮಾತನಾಡಿ ಪಟ್ಟಭದ್ರ ಹಿತಾಶಕ್ತಿಗಳು ಅವರ ಸಾಮಾಜಿಕ ಕಾರ್ಯಗಳನ್ನು ಸಹಿಸದೇ ಶಾಸಕರ ತೇಜೋವಧೆ ಮಾಡುತ್ತಿದ್ದಾರೆ ಇದನ್ನು ನಿಲ್ಲಿಸಬೇಕು.ಇಲ್ಲದಿದ್ದರೆ ದಲಿತ ಸಂಘಟನೆಗಳು ರಾಜ್ಯಾದಂತ ಪ್ರತಿಭಟನೆ ಮಾಡಲಿವೆ ಎಂದರು.

ಪ್ರತಿಭಟನೆಯಲ್ಲಿ ಭೀಮ ನಾಗರಳ್ಳಿ, ಸುನಿಲ ಬನಸೋಡೆ,ಧರ್ಮು ಧರೆನ್ನವರ,,ಮಹಾ ನಾಯಕ ಬಿ.ಆರ್.ಅಂಬೇಡಕರ ಸಂಘ ಸಮಿತಿಯ ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಟ್ಟಿಮನಿ, ತಾಲೂಕಾ ಅಧ್ಯಕ್ಷ ಶಶಿಕುಮಾರ ಹರಿಜನ, ಉಪಾಧ್ಯಕ್ಷ ವಿಕಾಶ ಗುಡುಮನಿ, ಅರವಿಂದ ಕಾಂಬಳೆ, ನಾಗೇಶ ತಳಕೇರಿ, ರಮೇಶ ನಿಂಬಾಳಕರ, ರೇವಣಸಿದ್ದ ಮಸಳಿ, ರೇವಪ್ಪ ಮಂದೇಲಿ, ರಾಮಚಂದ್ರ ದೊಡಮನಿ, ಬಾಬು ಗುಡಮಿ, ಪರಮೇಶ್ವರ ಇಂಗಳೇಶ್ವರ, ಶಶಿಕುಮಾರ ಹರಿಜನ, ಆದಿತ್ಯ ಡೋಳ್ಳೆ, ಸಚಿನ ಬನಸೋಡೆ, ಪರಸುರಾಮ ಮೆಲಿನಕೇರಿ, ಪರಶುರಾಮ ಕಾಂಬಳೆ, ಮಹಾದೇವ ಮೇಲಿನಮನಿ ಮತ್ತಿತರಿದ್ದರು.