ಜಾರಕಿಹೊಳಿ ಅಥವಾ ಮುನಿಯಪ್ಪಗೆ ದಲಿತ ಮುಖ್ಯಮಂತ್ರಿ ಸ್ಥಾನ ನೀಡಿ

ಲಿಂಗಸಗೂರು,ಮೇ.೧೭- ಕಾಂಗ್ರೆಸ್ ಪಕ್ಷದಲ್ಲಿ ವಾಲ್ಮೀಕಿ ಸಮಾಜದ ಹಿರಿಯ ನಾಯಕರು ಸತೀಶ್ ಜಾರಕಿಹೊಳಿ ಅಥವಾ ಮಾದಿಗ ಸಮುದಾಯದ ಹಿರಿಯ ಮುಖಂಡರು ಕೆ.ಎಚ್ ಮುನಿಯಪ್ಪನವರಿಗೆ ದಲಿತ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷ ದ್ಯಾಮಣ್ಣ ಪೂಲಭಾವಿ ಆಗ್ರಹಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಹಲವಾರು ನಿಷ್ಠಾವಂತ ನಾಯಕರು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ ಈ ಚುನಾವಣೆಯಲ್ಲಿ ಅವರ ಶ್ರಮದಿಂದ ಸಾಕಷ್ಟು ಜನ ಶಾಸಕರಾಗಿದ್ದಾರೆ, ಇಂತವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಮುಂದೆ ಪಕ್ಷಕ್ಕೆ ಅನುಕೂಲವಾಗಲಿದೆ, ಇಂದಿನ ಬಿಜೆಪಿ ಸರ್ಕಾರ ವಾಲ್ಮೀಕಿ ಸಮಾಜಕ್ಕೆ ಉಪ ಮುಖ್ಯಮಂತ್ರಿ ಮಾಡುತ್ತೇವೆಂದು ಅನ್ಯಾಯ ಮಾಡಿದೆ, ಅದರಂತೆ ಕಾಂಗ್ರೇಸ್ ಪಕ್ಷ ನಮ್ಮನ್ನು ಕಡೆಗಣಿಸಿದರೆ ಮುಂದೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಪಿಡ್ಡನಗೌಡ ಈಚನಾಳ, ತಾಲೂಕು ಕಾರ್ಯಧ್ಯಕ್ಷ ಹನುಮಂತ ನಾಯಕ ಮಾವಿನಭಾವಿ, ಪ್ರಧಾನಕಾರ್ಯದರ್ಶಿ ಹನುಮಂತ ಲಿಂಗಸೂಗೂರ, ಹನುಮಂತ ನಾಯಕ ಛತ್ತರ, ಕುರಮೇಶ, ಸಂಗಮೇಶ ಆನೆಹೊಸೂರು ಪೋಷಣ್ಣ ನಾಯಕ ಸೇರಿದಂತೆ ಇತರರು ಇದ್ದರು.