
ಭಾಲ್ಕಿ:ಎ.26: ತಾಲೂಕಿನ ಜಾಯಗಾಂವ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ರವರ 132ನೇ ಜಯಂತಿ ಮಹೋತ್ಸವ ಆಚರಿಸಲಾಯಿತು. ಜಯಂತಿ ಮಹೋತ್ಸವ ನೇತೃತ್ವ ಪ್ಯಾರಾ ಮಿಲಿಟರಿ ಪ್ರಧಾನ ಕಾರ್ಯದರ್ಶಿ ಪದ್ಮಾನಂದ ಗಾಯಕವಾಡ ಮತ್ತು ಸಾಯಿಜನ ಗಾಯಕವಾಡ ವಹಿಸಿದ್ದರು.
ಜಯಂತಿ ಮಹೋತ್ಸವ ನಿಮಿತ್ಯ ಗ್ರಾಮದ ಹೊರವಲಯದಲ್ಲಿರುವ ಡಾ| ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ, ಮಕ್ಕಳು ಮತ್ತು ಮಹಿಳೆಯರು ಮೆರವಣಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಿದರು. ಗ್ರಾಮದ ಪ್ರಮುಖರಾದ ರಮೇಶ ಗಾಯಕವಾಡ, ಕೀರ್ತಿರತನ ಸೊನಾಳೆ, ಮೋಹಿಬ್ ಪಟೇಲ್, ಗ್ರಾ.ಪಂ.ಸದಸ್ಯರಾದ ಬನಸಿದ ಧಡ್ಡೆ, ಮಾಸಿನ ಮಚಕುರಿ, ಶಾಮರಾವ ಸುವರ್ಗೆ, ವಿವೇಕನಾಂದ, ಪಂಟು ಕಾಡೇಕರ, ವಿಶಾಲ ದೊಡ್ಡೆ, ಆಕಾಸ ಗಾಯಕವಾಡ, ಸಚಿನ ಸುವರ್ಣೆ, ನಿಖಿಲ ಗೋಡಬೊಲೆ, ನಾಗೇಶ ಗೊಡಬೊಲೆ, ಸತೀಷ ಸುವರ್ಣೇ, ಸಂದೇಸ ಗಾಯಕವಾಡ, ಗೌತಮ ರೊಡ್ಡೆ, ಸಂಗಮೇಶ ದೊಡ್ಡೆ, ಸಂತೋಷ ಬೊರಾಳೆ, ಪ್ರಸಾಂತ ಕಾಂಬಳೆ, ಶಿವಾಜಿ ಲಾಮತೂರೆ ಉಪಸ್ಥಿತರಿದ್ದರು.