ಜಾನ್ ಅಬ್ರಾಹಮ್ ರಿಂದ ಸಲ್ಮಾನ್ ಖಾನ್ ಗೆ ಚ್ಯಾಲೆಂಜ್! ಈದ್ ಗೆ ’ರಾಧೇ…’ ಜೊತೆ ರಿಲೀಸ್ ಆಗಲಿದೆ ’ಸತ್ಯಮೇವ ಜಯತೇ ೨’

ಜಾನ್ ಅಬ್ರಾಹಮ್ ರ ಅಪ್ ಕಮಿಂಗ್ ಫಿಲ್ಮ್ ’ಸತ್ಯಮೇವ ಜಯತೆ ೨’ ಇದರ ಹೊಸ ರಿಲೀಸ್ ಡೇಟ್ ಘೋಷಣೆಯಾಗಿದೆ.
ಈಗ ಈ ಫಿಲ್ಮ್ ಕೂಡಾ ಮೇ ೧೩ರಂದು ಈದ್ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ಇದಕ್ಕಿಂತ ಮೊದಲು ಈ ಫಿಲ್ಮ್ ಈದ್ ನ ಮರುದಿನ ಮೇ ೧೪ ರಂದು ಬಿಡುಗಡೆಯಾಗುವುದಾಗಿ ಹೇಳಲಾಗಿತ್ತು. ಈಗಾಗಲೇ ಮೇ ೧೩ ಕ್ಕೆ ಈದ್ ಗೆ ಸಲ್ಮಾನ್ ಖಾನ್ ರ ಫಿಲ್ಮ್ ’ರಾಧೇ..’ಬಿಡುಗಡೆ ಎಂದು ಘೋಷಿಸಲಾಗಿದೆ.ಈಗ ಎರಡು ಫಿಲ್ಮ್ ಗಳೂ ಒಂದೇ ದಿನ ರಿಲೀಸ್ ಆಗುವುದು.


ಸತ್ಯಮೇವ ಜಯತೆ ೨ ಫಿಲ್ಮ್ ನ ನಾಯಕ ಜಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ.ಹಾಗೂ ಫಿಲ್ಮ್ ನ ಹೊಸ ಪೋಸ್ಟರ್ ಶೇರ್ ಮಾಡಿದ್ದಾರೆ. ಜೊತೆಗೆ ಈ ಫಿಲ್ಮ್ ನಲ್ಲಿ ತಾನು ಡಬಲ್ ರೋಲ್ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ಜಾನ್ ಅಬ್ರಾಹಮ್ ಹೊಸ ಪೋಸ್ಟರನ್ನು ಶೇರ್ ಮಾಡುತ್ತಾ ಈಸಲದ ಈದ್ ಹಬ್ಬದಂದು, ಮೇ ೧೩ ಕ್ಕೆ ಸತ್ಯಮೇವ ಜಯತೆ ೨ ಫಿಲ್ಮ್ ಬಿಡುಗಡೆಯಾಗಲಿದ್ದು ಇದರಲ್ಲಿ ದ್ವಿಪಾತ್ರದಲ್ಲಿರುವುದು ಬಹಿರಂಗಪಡಿಸಿದ್ದಾರೆ.


ಇದರ ನಿರ್ದೇಶನ ಮಾಡಿದವರು ಮಿಲಾಪ್ ಜವೇರಿ. ಈ ಫಿಲ್ಮ್ ನಲ್ಲಿ ಜಾನ್ ಹೊರತಾಗಿ ದಿವ್ಯಾ ಕುಮಾರ ಕೋಸಲಾ ಕೂಡ ಇದ್ದಾರೆ.
ಸತ್ಯಮೇವ ಜಯತೆ ೨ ಬಿಡುಗಡೆಯ ಹೊಸ ದಿನಾಂಕದ ಕಾರಣ ಈಗ ಜಾನ್ ಅಬ್ರಾಹಂ ಮತ್ತು ರಾಧೇ….ಯ ಸಲ್ಮಾನ್ ಖಾನ್ ರ ನಡುವೆ ಸಂಘರ್ಷ ಕಾಣಿಸಿದಂತಾಗಿದೆ. ೨ ಫಿಲ್ಮ್ ಗಳಲ್ಲಿ ಯಾವ ಫಿಲ್ಮ್ ಬಾಕ್ಸಾಫೀಸ್ ನಲ್ಲಿ ಯಶಸ್ಸು ಪಡೆಯುವುದೋ ಕಾದು ನೋಡಬೇಕು.

ಜಾನ್ಹವೀ ಕಪೂರ್ ಒಳಗಡೆ ಮುಂದಿನ ಆಲಿಯಾ ಭಟ್ಟ್ ಆಗುವ ಎಲ್ಲ ಲಕ್ಷಣಗಳು ಇವೆಯಂತೆ!

ನಟಿ ಜಾನ್ಹವೀ ಕಪೂರ್ ಅವರ ಹಾರರ್ ಕಾಮಿಡಿ ಫಿಲ್ಮ್ ’ರೂಹೀ’ ಮಾರ್ಚ್ ೧೧ರಂದು ರಿಲೀಸ್ ಆಗಿದ್ದು ಬಾಕ್ಸಾಫೀಸ್ ನಲ್ಲಿ ಉತ್ತಮ ಪ್ರದರ್ಶನವನ್ನು ಕಾಣಿಸುತ್ತಿದೆ. ಅಭಿಮಾನಿಗಳು ಜಾನ್ಹವೀ ಕಪೂರ್ ಅವರ ಈ ಫಿಲ್ಮ್ ನ ಆಕ್ಟಿಂಗ್ ಕಂಡು ಬಹಳಷ್ಟು ಹೊಗಳುತ್ತಿದ್ದಾರೆ. ಒಬ್ಬರಂತೂ “ಮುಂದಿನ ಆಲಿಯಾ ಭಟ್ ಆಗುವ ಎಲ್ಲ ಲಕ್ಷಣಗಳಿವೆ” ಎಂದು ಪ್ರಶಂಸಿಸಿದ್ದಾರೆ.


’ಗುಂಜನ್ ಸಕ್ಸೇನಾ’ ಫಿಲ್ಮ್ ನ ನಂತರ ’ರೂಹೀ’ಯಲ್ಲಿ ಜಾನ್ಹವೀ ಕಪೂರ್ ಅವರ ಅಭಿನಯದಲ್ಲಿ ತುಂಬ ಬದಲಾವಣೆ ಕಂಡುಬಂದಿದೆ . “ರೂಹೀ ಫಿಲ್ಮ್ ನ ಅಭಿನಯವನ್ನು ಕಂಡಾಗ ಮುಂದಿನ ಆಲಿಯಾ ಭಟ್ ಆಗಲಿದ್ದಾರೆ” ಎಂಬ ಪ್ರಶಂಸೆಯನ್ನು ಓರ್ವರು ಶೇರ್ ಮಾಡಿದ್ದಾರೆ.
ಈ ಪ್ರಶಂಸೆಯ ಮಾತುಗಳಿಂದ ಜಾನ್ಹವೀ ಕಪೂರ್ ಗೆ ತುಂಬಾ ಖುಷಿಯಾಗಿದೆ. ಹೀಗೆ ಹೇಳಿದ ಅಭಿಮಾನಿಗೆ “ಇದು ಬಹಳ ಖುಷಿಯ ಸಂಗತಿ .ನಿಮ್ಮ ಬಾಯಿಗೆ ತುಪ್ಪ ಸಕ್ಕರೆ ಲಡ್ಡು ಬಿರಿಯಾನಿ ಯಾವುದು ಇಷ್ಟವೋ ಅದು ತಿನ್ನಿಸುತ್ತೇನೆ. ನಿಮಗೆ ಧನ್ಯವಾದಗಳು” ಎಂದಿದ್ದಾರೆ.


ಒಂದು ಸಂದರ್ಶನದಲ್ಲಿ ಈ ಹಿಂದೆ ಜಾನ್ಹವೀ ಕಪೂರ್ ಗೆ “ಒಂದು ದಿನಕ್ಕಾಗಿ ನೀವು ಯಾರ ಜೊತೆ ಇರಲು ಇಷ್ಟಪಡುತ್ತಿದ್ದೀರಿ?” ಎಂದಾಗ ಜಾನ್ಹವೀ ಹೇಳಿದ್ದು -“ಆಲಿಯಾ ಭಟ್ಟ್ ಜೊತೆಗೆ” ಎಂದು.
ಅಷ್ಟೇ ಅಲ್ಲ ,”ನಾನು ಆಲಿಯಾ ಭಟ್ಟ್ ಅವರ ಬಹಳ ದೊಡ್ಡ ಫ್ಯಾನ್” ಎಂದಿದ್ದಾರೆ. ಜಾನ್ಹವೀ ಈಗ ದೋಸ್ತಾನ ೨, ಗುಡ್ ಲಕ್ ಜೆರ್ರಿ ಫಿಲ್ನ್ ನಲ್ಲಿ ಮತ್ತೆ ಕಾಣಿಸಿಕೊಳ್ಳುವರು.

ಬಾಲಿವುಡ್ ನಲ್ಲಿ ಮತ್ತೊಂದು ಸಂಬಂಧ ಮುರಿದು ಬಿತ್ತು.
ಸುಜೈನ್ ಖಾನ್ ನಂತರ ಆಕೆಯ ಅಕ್ಕ ಫರಾಹ ಕೂಡಾ ಪತಿಯಿಂದ ಬೇರೆಯಾದರು

ಸುಜೈನ್ ಖಾನ್ ರ ನಂತರ ಸಂಜಯ್ ಖಾನ್ ರ ದೊಡ್ಡ ಮಗಳು ಫರಾಹ ಖಾನ್ ಅಲೀ ಕೂಡಾ ಪತಿ ಡೀಜೆ ಅಕೀಲ್ ರಿಂದ ಬೇರೆಯಾಗಿದ್ದಾರೆ.
ಫರಾಹ ಮತ್ತು ಅಕೀಲ್ ಸೋಶಿಯಲ್ ಮೀಡಿಯಾದಲ್ಲಿ ತಾವು ಬೇರೆಯಾಗಿರುವುದನ್ನು ಹಂಚಿಕೊಂಡಿದ್ದಾರೆ.
” ಪತಿ ಅಕೀಲ್ ಜೊತೆಗೆ ನನ್ನ ಸಂಬಂಧದ ಸ್ಟೇಟಸ್ ಗೆ ದಂಪತಿಯಿಂದ ಕೇವಲ ಸ್ನೇಹಿತರಾದುದಕ್ಕೆ ೯ ವರ್ಷ ಕಳೆಯಿತು.ಈ ಬಗ್ಗೆ ನಾನು ಕೇವಲ ಇಷ್ಟೇ ಹೇಳ್ತೇನೆ- ನಾವು ಖುಷಿಯಿಂದ ಬೇರೆಯಾಗಿದ್ದೇವೆ”


ಇದು ಪರಸ್ಪರರ ಒಪ್ಪಿಗೆಯಿಂದ ಕೈಗೊಂಡ ತೀರ್ಮಾನ ಇದು.. ನಾವು ಸದಾ ಉತ್ತಮ ಸ್ನೇಹಿತರು.ಮಕ್ಕಳಾದ ಅಜಾನ್ ಮತ್ತು ಫಿಜಾರಿಗಾಗಿ ಉತ್ತಮ ಪೇರೆಂಟ್ಸ್ ಆಗಿರುವೆವು.
ಆದರೆ ಇನ್ನು ಮುಂದೆ ನಾವು ದಂಪತಿ ಆಗಿ ಇರುವುದಿಲ್ಲ.ಇಬ್ಬರೊಳಗೂ ವೈರತ್ವ ಇರೋದಿಲ್ಲ. ಎಂದಿದ್ದಾರೆ.
೧೯೯೯ ರಲ್ಲಿ ಫರಾಹ- ಅಕೀಲ್ ರ ವಿವಾಹ ನಡೆದಿತ್ತು. ೨೦೦೨ ರಲ್ಲಿ ಮಗ ಅಜಾನ್ ಜನಿಸಿದ್ದ.೨೦೦೫ ರಲ್ಲಿ ಮಗಳು ಫಿಜಾ ಜನಿಸಿದ್ದಳು.
ಪತಿ ಅಕೀಲ್ ಡೀಜೆ,ಸಿಂಗರ್, ಮತ್ತು ಕಂಪೋಸರ್ ಆಗಿದ್ದಾರೆ.