ಜಾನ್ವಿ- ಶಿಖರ್ ಡೇಟಿಂಗ್ ವೈರಲ್

ಮುಂಬೈ, ಏ. ೩- ಬಾಲಿವುಡ್ ನಟಿ ಜಾನ್ವಿ ಕಪೂರ್ ಡೇಟಿಂಗ್ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ.
ಹೌದು ಜಾನ್ವಿ ಕಪೂರ್ ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಇದೀಗ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.
ಜಾನ್ವಿ ಕಪೂರ್ ಮತ್ತೊಮ್ಮೆ ತನ್ನ ಬಾಯ್ ಫ್ರೆಂಡ್ ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದ ಫೋಟೋಸ್ ವೈರಲ್ ಆಗಿವೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಜಾನ್ವಿ ಕಪೂರ್ ತನ್ನ ಗೆಳೆಯನೊಂದಿಗೆ ಕಾಣಿಸಿಕೊಂಡಿದ್ದಾರೆ. ಏರ್‌ಪೋರ್ಟ್‌ನಿಂದ ಹೊರಬಂದಾಗ ಇವರಿಬ್ಬರು ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ಮಾರ್ಚ್ ೩೧ ರಂದು ಜಾನ್ವಿ ತನ್ನ ಗೆಳೆಯನೊಂದಿಗೆ ನೀತಾ ಅಂಬಾನಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ವಿಮಾನ ನಿಲ್ದಾಣದಿಂದ ಹೊರಬಂದಾಗ ಇಬ್ಬರೂ ಬೇರೆ ಬೇರೆ ಕಾರುಗಳಲ್ಲಿ ಹೊರಟ ಫೋಟೋಗಳು ಇದೀಗ ವೈರಲ್ ಆಗಿವೆ.
ಜಾನ್ವಿ ಕಪೂರ್ ಈಗಾಗಲೇ ಶಿಖರ್ ಪಹಾರಿಯಾ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಇವರಿಬ್ಬರ ಡೇಟಿಂಗ್ ವೈರಲ್ ಆಗಿದೆ.. ಆದರೆ ಈ ಬಗ್ಗೆ ಯಾರೂ ಸ್ಪಷ್ಟನೆ ನೀಡಿಲ್ಲ. ಈ ಮಧ್ಯೆ ಜಾನ್ವಿ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಎನ್ ಟಿಆರ್ ಜೊತೆ ನಟಿಸುವ ಮೂಲಕ ತೆಲುಗು ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಎನ್‌ಟಿಆರ್ ೩೦ ಯುನಿಟ್ ಬಿಡುಗಡೆ ಮಾಡಿದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ. ನನ್ನ ನೆಚ್ಚಿನ ಎನ್‌ಟಿಆರ್ ಜೊತೆ ಜೋಡಿಯಾಗಿ ಸೆಟ್‌ಗೆ ಬರಲು ಉತ್ಸುಕಳಾಗಿದ್ದೇನೆ ಎಂದು ಜಾನ್ವಿ ಪೋಸ್ಟ್ ಮಾಡಿದ್ದಾರೆ.