ಜಾನೆಕುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ  ವಿಶ್ವಮಾನವ ದಿನಾಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.31: ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕ, ಸನ್ಮಾರ್ಗ ಗೆಳೆಯರ ಬಳಗ, ಶ್ರೀಮಂಜುನಾಥ ಲಲಿತ ಕಲಾ ಬಳಗ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಕನ್ನಡ ಭಾಷಾ ಸಂಘ ಸಹಯೋಗದಲ್ಲಿ ಜಾನೆಕುಂಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ
“ವಿಶ್ವಮಾನವ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸನ್ಮಾರ್ಗ ಗೆಳೆಯರ ಬಳಗದ ಉಪಾಧ್ಯಕ್ಷ ಸಲ್ಲಾ ಹನುಮಂತರೆಡ್ಡಿ , ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರಲ್ಲದೆ, ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ
ಗುರಿ ಸಾಧಿಸಬೇಕೆಂಂಂಂದರುದರದ
ಕುವೆಂಪು ಜೀವನ ಮತ್ತು ಸಾಹಿತ್ಯ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದ ಕಪ್ಪಗಲ್ಲು ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಎಚ್.ಎಂ.ನೇತ್ರಾ ಅವರು, ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಯಿಂದ ಪ್ರಾರಂಭಿಸಿ, ನಂತರ ಕನ್ನಡಕ್ಕೆ ಬದಲಾದ ಕುವೆಂಪು ಅವರು ಮಾತೃಭಾಷೆಯಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರವಾದ ಸಾಧನೆಗೈದ ಮಹನೀಯ ಎನಿಸಿದರು.
ಕವನ, ಗದ್ಯ, ಮಕ್ಕಳ ಸಾಹಿತ್ಯ, ನಾಟಕ, ಕಾದಂಬರಿ ಹೀಗೆ ಸಾಹಿತ್ಯ ವಲಯದ ವಿವಿಧ ಆಯಾಮಗಳಲ್ಲಿ ಕೃತಿಗಳನ್ನು ರಚಿಸಿದ ಕುವೆಂಪು ಅವರ ಶ್ರೀಮಂತ ಸೃಜನಶೀಲ ಮತ್ತು ಅತ್ಯುತ್ತಮ ಸಾಹಿತ್ಯ ಕಾರ್ಯಕ್ಕೆ ಅವರನ್ನು ರಾಷ್ಟ್ರಕವಿ ಎಂದು ಗೌರವಿಸಲಾಯಿತು ಎಂದು ಹೇಳಿದರು.
ಜನಕಲ್ಯಾಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜೆ.ಎಂ.ಬಸವರಾಜ ಸ್ವಾಮಿ ಅವರು ಪ್ರೌಢಶಾಲೆಗೆ ಸುಸಜ್ಜಿತ ಗ್ರಂಥಾಲಯ ಅಗತ್ಯವಿದ್ದು, ಅದನ್ನು ಪೂರೈಸುವ ಕೆಲಸವಾಗಬೇಕಿದೆ ಎಂದರಲ್ಲದೆ, ಜಾನೆಕುಂಟೆ ಶಾಲೆಯ ಪ್ರಗತಿಗೆ ಸದಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಾಲೆಯ ಮುಖ್ಯಗುರು ಬಿ.ಆರ್.ಮಾಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಭೂದಾನಿಗಳಾದ ಸಿದ್ಧಲಿಂಗಪ್ಪ, ಎಸ್‌ಎಂಡಿಸಿ ಅಧ್ಯಕ್ಷ ರೇವಪ್ಪ, ಶರಭೇಶ್ವರ ಬಿಎಡ್
ಕಾಲೇಜಿನ ಉಪನ್ಯಾಸಕ ಕೆ.ಎಂ.ಶಿವಾನಂದ, ಕಪ್ಪಗಲ್ ನಿವೃತ್ತ ಬಡ್ತಿ ಗುರು ಮೆಹತಾಬ್, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಹನುಮಂತಪ್ಪ, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಜಾನೆಕುಂಟೆ ಡಿ.ದೊಡ್ಡಬಸಪ್ಪ, ದತ್ತಿದಾನಿಗಳಾಾದ ಜಿ.ಆರ್. ವೆಂಕಟೇಶಲು, ರವಿಕಿರಣ್, ಕಸಾಪ ಗ್ರಾಮೀಣ ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಟಿ.ಮಲ್ಲಿಕಾರ್ಜುನ, ಟಿ.ಪ್ರಕಾಶ್, ಗೌರವ ಕಾರ್ಯದರ್ಶಿಗಳಾದ ಜೆ.ಹುಸೇನ್ ಬಾಷಾ, ಕಪ್ಪಗಲ್ ಚಂದ್ರಶೇಖರ ಆಚಾರ್, ಶಿಕ್ಷಣ ಪ್ರೇಮಿ ಜಾನೆಕುಂಟೆ ಮಂಜುನಾಥಸ್ವಾಮಿ ಹಾಗೂ ಶ್ರೀಮಂಜುನಾಥ ಲಲಿತ ಕಲಾ ಬಳಗದ ಅಧ್ಯಕ್ಷ  ಮಂಜುನಾಥ ಗೋವಿಂದವಾಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಸಾಪ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಎ.ಎರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ಕನ್ನಡ ಶಿಕ್ಷಕರಾದ
ಎಸ್.ಸತ್ಯನಾರಾಯಣ, ಎಚ್.ರಾಜಶೇಖರ ಗೌಡ ಕಾರ್ಯಕ್ರಮ ನಿರ್ವಹಿಸಿದರು.
ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ ಹಾಗೂ ಬಿ.ಕುಮಾರಗೌಡ ಅಮರಾಪುರ ಅವರು ಕುವೆಂಪುಗೀತೆ ಗಾಯನ ಮಾಡಿದರು. ಇದೇ ವೇಳೆ ರಾಜ್ಯಮಟ್ಟದ ಪತ್ರಕರ್ತ ಕೆ.ಎಂ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಆವರಣದಲ್ಲಿ  ಮಂಜುನಾಥ ಗೋವಿಂದವಾಡ ಅವರು ಕುವೆಂಪು ಕುರಿತು ರಚಿಸಿದ ಛಾಯಾಚಿತ್ರ ಪ್ರದರ್ಶನವಿತ್ತು.

One attachment • Scanned by Gmail