ನವಲಗುಂದ,ಸೆ.26: ನಗರದ ಪಶು ಆಸ್ಪತ್ರೆಯಲ್ಲಿ ಪಶು ಸಂಗೋಪನೆ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಪ್ರಾರಂಭವಾಗುವ ನಾಲ್ಕನೇ ಸುತ್ತಿನ “ಕಾಲುಬಾಯಿ ರೋಗ ಲಸಿಕಾ” ಕಾರ್ಯಕ್ರಮವನ್ನು ಶಾಸಕ ಎನ್ ಎಚ್ ಕೋನರಡ್ಡಿ ಜಾನುವಾರುಗಳಿಗೆ ಉಚಿತ ಲಸಿಕೆ ಹಾಕಿಸುವ ಮೂಲಕ ಚಾಲನೆ ನೀಡಿದರು.
ಇದೆ ವೇಳೆ ಶಾಸಕ ಎನ್ ಎಚ್ ಕೋನರಡ್ಡಿಯವರನ್ನು ಆಸ್ಪತ್ರೆ ವೈದ್ಯಾಧಿಕಾರಿಗಳು ಸಿಬ್ಬಂದಿಗಳಿಂದ ಸೇರಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರುದ್ರೇಶ ಕೋಟೂರ್ ಹಾಗೂ ಪಶು ಆಸ್ಪತ್ರೆಯ ಆಡಳಿತ ಮಂಡಳಿಯವರು, ಪುರಸಭೆ ಸದಸ್ಯರು ಹಾಗೂ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.