ಜಾನುವಾರು ಲಸಿಕೆ ಅಭಿಯಾನಕ್ಕೆ ಶರಣಗೌಡ ಬಯ್ಯಾಪುರ ಚಾಲನೆ

ಲಿಂಗಸುಗೂರ,ಸೆ.೨೭- ಪಶು ಆಸ್ಪತ್ರೆ ಲಿಂಗಸಗೂರುನಲ್ಲಿ ಜಾನುವಾರು ಕಾಲು ಬಾಯಿ ರೋಗದ ಲಸಿಕಾ ಅಭಿಯಾನಕ್ಕೆ ಮಾನಪ್ಪ ವಜ್ಜಲ್ ಮಾನ್ಯ ಶಾಸಕರು ಲಿಂಗಸಗೂರು ಹಾಗೂ ಶ್ರೀ ಶರಣಗೌಡ ಪಾಟೀಲ ಬಯ್ಯಾಪುರ ಮಾನ್ಯ ವಿಧಾನ ಪರಿಷತ್ ಸದಸ್ಯರು ಇವರು ಚಾಲನೆ ನೀಡಿದರು
೨೦೨೩ . ೨೦೨೪. ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೪ ನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣಕ್ಕೆ ರೈತರು ತಮ್ಮ ಜಾನುವಾರುಗಳಿಗೆ ಪಶು ಸಂಗೋಪನಾ ಇಲಾಖೆ ವತಿಯಿಂದ ಉಚಿತವಾಗಿ ಲಸಿಕೆ ಹಾಕಿಸಿ ರೋಗ ಮುಕ್ತ ಜಾನುವಾರು ಮಾಡಲು ರೈತರು ಮುಂದಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ರವರು ರೈತರಿಗೆ ಸಲಹೆ ನೀಡಿದರು .
ತಾಲ್ಲೂಕಿನ ರೈತಬಾಂದವರು ತಮ್ಮ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಿ ನಿಮ್ಮ ಜಾನುವಾರುಗಳನ್ನು ಆರೋಗ್ಯ ಇಟ್ಟುಕೊಳ್ಳಲು ರೈತ ಬಾಂಧವರು ಲಸಿಕೆ ಕೇಂದ್ರದಲ್ಲಿ ಬಂದು ಅಗತ್ಯವಾಗಿ ಲಸಿಕೆ ಹಾಕಿಸಿ ಹಾಗೂ ಈ ಯೋಜನೆ ಸಪ್ಟೆಂಬರ್ ತಿಂಗಳು ೨೦೨೩ ರಿಂದ ಮುಂದಿನ ಅಕ್ಟೋಬರ್ ೨೫ ವರೆಗೆ ಹಮ್ಮಿಕೊಳ್ಳಲಾಗಿದೆ .
ಶಾಸಕ ಮಾನಪ್ಪ ಡಿ ವಜ್ಜಲ್ ರವರು ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ತಾಲೂಕಿನ ಎಲ್ಲಾ ರೈತರು ತಮ್ಮ ಜಾನುವಾರುಗಳನ್ನು ತಂದು ಜಾನುವಾರುಗಳು ಪರೀಕ್ಷಿಸಿಕೊಳ್ಳಬೇಕು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಲು ರೈತರ ಮೇಲೆ ನಿಂತಿದೆ ಎಂದು ಶಾಸಕ ಮಾನಪ್ಪ ಡಿ ವಜ್ಜಲ್ ರೈತರಿಗೆ ಸಲಹೆ ನೀಡಿದರು.
ರೈತರು ಇಲಾಖೆ ವತಿಯಿಂದ ಉಚಿತವಾಗಿ ಹಾಕುವ ಲಸಿಕೆಯನ್ನು ತಮ್ಮ ತಮ್ಮ ಜಾನುವಾರುಗಳಿಗೆ ಹಾಕಿಸಿಕೊಂಡು ಅವುಗಳ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಮಾನ್ಯ ಶಾಸಕರು ಕರೆನೀಡಿದರೆ ಮಾನ್ಯ ವಿಧಾನ ಪರಿಷತ್ ಸದಸ್ಯರು ಮಾತನಾಡುತ್ತ ರೋಗಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಿಂತ ರೋಗವೇ ಬರದಂತೆ ಮುಂಜಾಗ್ರತಾ ಲಸಿಕೆಯನ್ನು ಹಾಕಿಸಿಕೊಲ್ಳುವುದು ಮುಖ್ಯ.. ಆದ್ದರಿಂದ ಯಾರೂ ನಿರ್ಲಕ್ಷವಹಿಸದೆ ಲಸಿಕೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಲಸಿಕಾ ಅಭಿಯಾನ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಂಶುದ್ದೀನ ಮಾನ್ಯ ತಹಶೀಲ್ದಾರರು ಲಿಂಗಸಗೂರು ಹಾಗೂ ಶ್ರೀ ಅಮರೇಶ ಕಾರ್ಯನಿರ್ವಾಹಕ ಅಧಿಕಾರಿಗಳು ತಾ ಪಂ ಲಿಂಗಸಗೂರು ಇವರು ಲಸಿಕಾ ಕಾರ್ಯಕ್ರಮದ ಪ್ರಚಾರ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು..
ಲಸಿಕಾ ಅಭಿಯಾನದ ಧ್ವನಿ ಮುದ್ರಿತ ಪ್ರಚಾರ ಗೀತೆಗೆ ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು ಆರಂಭ ನೀಡಿ ಶುಭಕೋರಿದರು..
ಡಾ. ರಾಚಪ್ಪ. ಡಾ ದೇವರಾಜ .ಡಾ ಅಮರೇಗೌಡ ಡಾ ಅಭಿಜಿತ . ಪೀರಪ್ಪ ಕಟ್ಟೀಮನಿ .ರವಿ .ರಮೇಶ . ಪಶುಸಖಿಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು..
ಕರಡಕಲ್ ಗ್ರಾಮದ ಬಸಣ್ಣ ಚಿನ್ನೂರು ರೈತರ ಎತ್ತುಗಳಿಗೆ ಪೂಜೆ ಮಾಡಿ ಲಸಿಕಾ ಅಭಿಯಾನದ ರೂಪರೇಷದಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು..
ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮದಿಂದ ಬಂದ ರೈತರು ಹೈನುಗಾರರು ಪಾಲ್ಗೊಂಡಿದ್ದರು.