ಜಾನುವಾರು ಕುಡಿಯುವ ನೀರಿನ ವ್ಯವಸ್ಥೆಗೆಶಾಸಕ ಡಾ ಶೈಲೇಂದ್ರ ಬೆಲ್ದಾಳೆ ಸೂಚನೆ

ಬೀದರ,ಡಿ 10: ಜಿಲ್ಲೆಯಲ್ಲಿ ಈಗಾಗಲೇ ಬರ ಘೋಷಣೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ನಗರದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ಕೃಷಿ ಹಾಗೂ ತೋಟಗಾರಿಕೆ, ಪಶು ಇಲಾಖೆ, ಕಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಯಾವ ಶಾಲಾ ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್ ನಲ್ಲಿ ನೀರಿನ ಕೊರತೆ ಇದೆ ಅದನ್ನು ಗುರುತಿಸಿ ಕೊಳವೆ ಬಾವಿಗಳನ್ನು ಕೊರೆದು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ, ಮೇವಿನ ಕೊರತೆ ಯಾಗದಂತೆ ಎಚ್ಚರ ವಹಿಸಬೇಕು ಮತ್ತು ಪರಿಸರ ಬೆಳೆಸಿ ಉಳಿಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಗುಳೆ ಓಡಾಡುವ ಜಾನುವಾರುಗಳನ್ನು ಗುರುತಿಸಿ ಗೋಶಾಲೆಗೆ ಒಪ್ಪಿಸಬೇಕು ಅದರಿಂದ ಯಾವುದೇ ಪಶು ಮೇವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುವದಿಲ್ಲ ಖಾಸಗಿಯಾಗಿ ರೈತರು ಮೇವು ಬೆಳೆಯಲು ಉತ್ತೇಜನ ನೀಡುವಂತಹ ಯೋಜನೆ ಜಾರಿಗೆ ತಂದು ಸರ್ಕಾರದಿಂದ ರೈತ ಬೆಳೆದ ಮೇವು ಖರೀದಿಸಿ ಗೋಶಾಲೆಯಲ್ಲಿ ಮೇವು ತಲುಪಿಸುಲ ವ್ಯವಸ್ಥೆ ಮಾಡಿದರೆ ಮೇವಿಲ್ಲದೆ ಜಾನುವಾರುಗಳು ಪರದಾಡ ಸ್ಥಿತಿ ನಿರ್ಮಾಣವಾಗಲ್ಲ ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದರು. ಹಾಗೂ ಪ್ರತಿಯೊಂದು ಗ್ರಾಮದಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಬೇಕು ಅದಕ್ಕೆ ಗ್ರಾಪಂ ವತಿಯಿಂದ ನೀರಿನ ಪೈಪ್‍ಲೈನ್ ವ್ಯವಸ್ಥೆ ಮಾಡಿ ನೀರು ಸಂಗ್ರಹಿಸಬೇಕು ಇದರಿಂದ ಗ್ರಾಮದ ಸುತ್ತಮುತ್ತಲಿನ ಜಾನುವಾರುಗಳಿ ನೀರೊದಗಿಸುವ ಕಾರ್ಯವಾಗುತ್ತದೆ. ಪಶುವೈದ್ಯಕೀಯ ಅಧಿಕಾರಿಗಳು ಗುಳೆ ಜಾನುವಾರ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಸರ್ಕಾರಿ ಗೋಮಾಳೆ ಜಮೀನಿನಲ್ಲಿ ಮೇವಿನ ಬ್ಯಾಂಕ್ ಅಥವ ಮೇವು ಮತ್ತು ನೀರು ಸಂಗ್ರಹ ಘಟಕ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗಾಗಿ ಸರಕಾರದಿಂದ ಬರುವ ಎಲ್ಲ ಸೌಲಭ್ಯ ಸಮರ್ಪಕವಾಗಿ ದೊರೆಯುವಂತೆ ಮಾಡಬೇಕು. ಇದೀಗ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಗಾರು ಬೆಳೆ ಕೈ ಕೊಟ್ಟ ಪರಿಣಾಮ ಹಿಂಗಾರು ಹಂಗಾಮಿನ ಬೆಳೆ ಉತ್ತಮವಾಗಿ ಬೆಳೆಯಲು ಹನಿ ನೀರಾವರಿ ವ್ಯವಸ್ಥೆಗೆ ತುಂತುರು ವ್ಯವಸ್ಥೆಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಬೇಕು ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ ತಕ್ಷಣ ಸಂಪರ್ಕಿಸಿ ನಾನು ಸ್ಪಂದಿಸುವೆ ಎಂದು ಜನರಲ್ಲಿ ಮನವಿ ಮಾಡಿದರು ಹಾಗೂ ಅಧಿಕಾರಿಗಳು ಸಹ ಜನರಿಗೆ ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.