ಜಾನುವಾರುಗಳಿಗೆ ನೀರು ಊಣಿಸುವ ಸಮಾಜ ಸೇವಕ

ಕುಕನೂರು ಮೇ 16 : ತಾಲ್ಲೂಕಿನ ತಳಕಲ್ ಗ್ರಾಮದ ಸಮಾಜ ಸೇವಕ ಹಾಗೂ ಕಾಂಗ್ರೆಸ್‍ನ ಮುಖಂಡರಾದ ಶಿವಣ್ಣ ರಾಯರೆಡ್ಡಿ ಅವರು ಈ ವರ್ಷದ ಬಿರು ಬಿಸಿಲಿಗೆ ಜಾನುವಾರುಗಳು ಹಾಗೂ ಪಶು ಪಕ್ಷಿಗಳು ನೀರಿನ ದಾಹ ತೀರಿಸಿಕೊಳ್ಳಲು ಅವುಗಳಿಗೆ ನಿರಂತರ 24 ಗಂಟೆಗಳವರೆಗೆ ದಾಹ ತೀರಿಸಿಕೊಳ್ಳಲು ನೀರಿನ ಅರವಟಿಗೆಯನ್ನು ಪ್ರಾರಂಭಿಸಿದ್ದಾರೆ ಸದಾ ಏನಾದರೊಂದು ಸಮಾಜ ಸೇವೆ ಮಾಡಬೇಕೆಂಬ ಅದಮ್ಯೆ ಆಕಾಂಕ್ಷೆಯಾಗಿ ಚಿಲುಮೆಯ ಚೇತನ ಇವರಲ್ಲಿ ಅಡಗಿರುವುದು ತಾಲೂಕಿನ ಬೀರುಬೀಸಲಿಗೆ ಒಣಗುತ್ತಿರುವ ಬಾಯಾರಿಕೆ ನಿಂಗಿಸಲು ಪಣತೋಟ್ಟಿರುವ ಇವರ ಕಾರ್ಯ ತಾಲೂಕಿನ ಜನರಲ್ಲಿ ಇಲ್ಲಿಲ್ಲದ ಪ್ರತಿ ಮನ್ನಣೆಗಳಿಸಿದೆ
ಪ್ರತಿಸಾರಿ ಏನಾದರೂ ಸೇವೆ ಮಾಡುವ ಉತ್ಸಾಹಿ;
ಅಲ್ಲದೇ ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ತಳಕಲ್ ಗ್ರಾಮದ ಕಡುಬಡವರಿಗೆ ಜೋಳದ ರೊಟ್ಟಿಯ ಸೇವೆ ಮಾಡಿ ಬಡವರ ಹಸಿವನ್ನು ನೀಗಿಸಲು ಮುಂದಾಗಿದ್ದರು ಆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕರ ಕ್ಷೇತ್ರಗಳಲ್ಲಿ ವಿಶೇಷ ಜನಪ್ರಿಯತೆ ಗಳಿಸಿದ್ದರು ಅಲ್ಲಿಂದ ಪ್ರಾರಂಭವಾದ ಇವರ ಸಮಾಜ ಸೇವೆ ಒಂದಲ್ಲ ಒಂದು ರೀತಿಯಲ್ಲಿ ಮುಂದುವರಿದಿದ್ಧು ಸದಾ ರೈತರಾಗಿರುವ ಶಿವಣ್ಣನವರು ತಳಕಲ್ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು ಇದನ್ನು ಅರಿತುಕೊಂಡ ಇವರು ತಮ್ಮ ಸ್ವಂತ ಖರ್ಚಿನ ಜಾಗೆಯಲ್ಲಿ ಬೋರ್ ವೆಲ್ ಕೊರೆಸಿ ಜನರಿಗೆ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ನಿರಂತರ ಉಚಿತ ನೀರನ್ನು ಒದಗಿಸಿ ಜನಪ್ರಿಯತೆ ಮೆರೆದಿದ್ದರು ಅದರ ಭಾಗವಾಗಿ ಸ್ವತಃ ರೈತನಾದ ಶಿವಣ್ಣ ಜಾನುವಾರುಗಳು ಕುಡಿಯುವ ನೀರು ಕುಡಿದು ಬದುಕಲಿ ಎಂದು ಅರಿತುಕೊಂಡು ತಮ್ಮ ಮಿಲ್ಲಿನ ಪಕ್ಕದಲ್ಲಿರುವ ಟ್ಯಾಂಕರ್‍ಗೆ ನೂತನವಾಗಿ ನೀರಿನ ತೋಟ್ಟಿಯನ್ನು ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ ಅಲ್ಲದೆ ರೈತರಿಗೆ ದಿನನಿತ್ಯದ ಉಪಜೀವನಕ್ಕೆ ಉಪಯೋಗಿಸಿಕೊಳ್ಳಲು ಅನುಕುಲವನ್ನು ಮಾಡಿಕೊಟ್ಟಿದ್ದಾರೆ ಇಂತಹ ರೈತ ಮುಖಂಡನನ್ನು ಜನತೆಯು ಪ್ರತಿ ಗ್ರಾಮೀಣ ಮಟ್ಟದಲ್ಲಿ ಪ್ರೇರಣೆ ಮಾರ್ಗದರ್ಶನ ಪಡೆದು ಹೆಚ್ಚು ಹೆಚ್ಚು ದಾನಿಗಳು ಬೆಳೆಯಲಿ ಎಂದು ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಶಿವಣ್ಣ ರಾಯರೆಡ್ಡಿ ಅವರು ನೋಡ್ರಿ ಸ್ವಾಮಿ ಈ ಸಮಾಜ ಸೇವೆ ಎನ್ನುವುದು ನನ್ನಿಂದ ಬಂದಿದ್ದಲ್ಲ ಯಾರಿಂದಲೂ ಕಲಿತುಕೊಂಡಿದಲ್ಲಾ ನಮ್ಮಪ್ಪ ದಿವಂಗತ ಬಸವಲಿಂಗಪ್ಪ ನವರು ತಾಯಿ ಬಸಲಿಂಗಮ್ಮನವರು ಅವರಿಂದ ಕಲಿತ ಪಾಠ ನನಗೆ ಒಲಿದು ಬಂದಿದೆ ಅಲ್ಲದೇ ಅವರ ಆಶೀರ್ವಾದದಿಂದ ತಮ್ಮ ಕುಟುಂಬ ಪರಿವಾರ ಜನಮನ್ನಣೆಯನ್ನು ಗಳಿಸಿತು ತಾಲ್ಲೂಕಿನ ಜನರ ಆಶಯಕ್ಕೆ ಬದ್ಧರಾಗಿದ್ದೇವೆ ನಮ್ಮ ಸಮಾಜ ಸೇವೆ ಇದು ದೊಡ್ಡದಲ್ಲ ನಿತ್ಯ ನಿರಂತರವಾಗಿ ಮುಂದುವರಿಯುತ್ತದೆ ಅದಕ್ಕೆ ಅದೇ ರೀತಿಯಾದಂತ ರಾಜಕೀಯ ಬಣ್ಣ ಹಚ್ಚುವುದು ಲೇಸಲ್ಲ ನಮ್ಮಂತೆಯೇ ಇಂದಿನ ಯುವ ಪೀಳಿಗೆ ಮುಂದೆ ಬಂದು ಸಮಾಜಸೇವೆಗೆ ಪಾತ್ರರಾಗಬೇಕು ಎಂದು ವೈಕ್ತಪಡಿಸಿದ್ದೆನೆ.
ಸಮಾಜ ಸೇವಕ ಶಿವಣ್ಣ ರಾಯರೆಡ್ಡಿ.