ಜಾನುವಾರುಗಳಿಗೆ ಕಾಲು ಬಾಯಿ ರೋಗಕ್ಕೆ ಕಡ್ಡಾಯವಾಗಿ ಲಸಿಕೆ ಹಾಕಿಸಿ

ಹುಮನಾಬಾದ :ನ.12: ಕಾಲು ಬಾಯಿ ರೋಗವು ಒಂದು ವೈರಾಣು ರೋಗವಾಗಿದ್ದು ಲಸಿಕೆ ಹಾಕುವುದರಿಂದ ಇದನ್ನು ತಡೆಯಬಹುದು ಎಂದು ಬೀದರ ಪಶು ಉಪನಿರ್ದೇಶಕ ಡಾ. ಮಲ್ಲಿಕಾರ್ಜುನ ಹಂಚನಾಳ ಹೇಳಿದರು.ಚಿಟಗುಪ್ಪ ತಾಲೂಕಿನ ಉಡಮನಳ್ಳಿ ಗ್ರಾಮದಲ್ಲಿ ಬೀದರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮೊದಲ ಸುತ್ತಿನ ಕಾಲು ಮತ್ತು ಬಾಯಿ ರೋಗದ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಹುಮನಾಬಾದ ಪಶು ಪಾಲನಾ ಸಹಾಯಕ ನಿರ್ದೇಶಕ ಡಾ. ಗೋವಿಂದ ಮಾತನಾಡಿ, ಕಾಲು ಬಾಯಿ ರೋಗ ಪೂರ್ಣ ಪ್ರಮಾಣದಲ್ಲಿ ವಾಸಿಯಾಗಬೇಕಾದರೆ ಸತತವಾಗಿ ಕನಿಷ್ಠ ಎರಡು ಬಾರಿ ಲಸಿಕೆ ಹಾಕುವುದು ಅಗತ್ಯವಾಗಿದೆ. ರೈತಾಪಿ ಜನರು ತಮ್ಮ ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದರು.ಕರಕನಳ್ಳಿ ಪಶು ಚಿಕಿತ್ಸಾಲಯದ ಡಾ. ಬಸವರಾಜ ಹಳ್ಳಿಖೇಡ ಮಾತನಾಡಿ, ಕಾಲು ಬಾಯಿ ರೋಗವು ಎತ್ತು, ಹೋರಿ, ಹಸುಗಳಿಗೆ ಮತ್ತು ಎಮ್ಮೆಗಳಿಗೆ ತಗುಲುವ ರೋಗವಾಗಿದ್ದು, ಜಾನುವಾರುಗಳಲ್ಲಿ ರೋಗ ಗುಣಮುಖವಾದರೂ ಸಹ ಮುಂದೆ ಗರ್ಭ ಕಟ್ಟುವಿಕೆಯಲ್ಲಿ ವಿಳಂಬ ಮತ್ತು ಸಾಮಥ್ರ್ಯ ಹಾಗೂ ಇಳುವರಿಯಲ್ಲಿ ಇಳಿಮುಖವಾಗುವದರಿಂದ ರೈತರಿಗೆ ಆರ್ಥಿಕ ನಷ್ಟ ಆಗುವುದು. ಆದರಿಂದ ಜಾನುವಾರು ಮಾಲೀಕರು ತಮ್ಮ ಎಲ್ಲಾ ದನ ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ ಜಾನುವಾರು ಸಂಪತ್ತು ಸಂರಕ್ಷಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.ಇದೆ ಸಮಯದಲ್ಲಿ ಸುಮಾರು ಜಾನುವಾರುಗಳಿಗೆ ಚಿಕಿತ್ಸೆ, ಗರ್ಭ ತಪಾಸಣೆ, ಕರುಗಳಿಗೆ ಜಂತು ನಾಶಕ ಔಷಯನ್ನು ಕುಡಿಸಿ ಮತ್ತು ಕಾಲು ಬಾಯಿ ಲಸಿಕೆ ಹಾಕಲಾಯಿತು.ಡಾ. ಶಿವಶರಣಪ್ಪ, ಡಾ. ಗಣಾೀಶ್ವರ ಹಿರೇಮಠ, ಪಶು ವೈದ್ಯ ಡಾ. ಸಂತೋಷರೆಡ್ಡಿ, ಪಶು ಇಲಾಖೆಯ ಸೈಯದ್ ಶಾ ಖಾದ್ರಿ, ಕಾಶಪ್ಪ ಚಟ್ನಳ್ಳಿ, ರಾಮದಾಸ ರಾಠೋಡ, ಸಂತೋಷ, ಸಂಜೀವಕುಮಾರ, ವೀರಶೆಟ್ಟಿ ಸೇರಿ ಗ್ರಾಮದ ರೈತಾಪಿ ವರ್ಗದವರು ಹಾಜರಿದ್ದರು.