ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡಿ- ರಾಜಾ ವೆಂಕಟಪ್ಪ ನಾಯಕ

ಸಿರವಾರ.ಮಾ೨೩- ರೈತರ ಜೀವ ನಾಡಿ ಜಾನುವಾರುಗಳಿಗೆ ರೋಗ ಬಂದಾಗ ವೈದ್ಯರು ಸಕಾಲಕ್ಕೆ ಚಿಕಿತ್ಸೆ ಕೊಡುವ ಮೂಲಕ ರೈತರಿಗೆ ನೇರವಾಗಬೇಕು ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು. ತಾಲೂಕಿನ ಅತ್ತನೂರು ಗ್ರಾಮದಲ್ಲಿ ಪಶು ವೈದ್ಯಾಲಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮಗೆಲ್ಲರಿಗೂ ಅನ್ನ ನೀಡುವ ರೈತರ ಜೀವನಾಡಿ ಜಾನುವಾರುಗಳಾಗಿವೆ. ಮನುಷ್ಯರಿಗೆ ರೋಗ ಬಂದರೆ, ಹೇಳುತ್ತಾರೆ ಆದರೆ ಜಾನುವಾರುಗಳು ರೋಗ ಬಂದಾಗ ರೈತರು ನಿಮ್ಮಲಿಗೆ ಬಂದಾಗ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವ ಮೂಲಕ ಕಾಪಾಡಿ. ಈ ಗ್ರಾಮದಲ್ಲಿ ಹಿಂದೆ ನನ್ನ ತಂದೆ ಈ ಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದರು. ಈಗ ನಾನು ಅನುದಾನ ನೀಡಿ ಆಸ್ಪತ್ರೆ ನಿರ್ಮಿಸಿರುವುದು ನನ್ನ ಸೌಭಾಗ್ಯವಾಗಿದೆ ಎಂದರು. ಮಹಾಂತೇಶ ಪಾಟೀಲ್ ಅತ್ತನೂರು, ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾದ್ಯಕ್ಷ ಜಂಬುನಾಥ ಯಾದವ. ನಾಗರಾಜ ಭೋಗಾವತಿ, ಆದರ್ಶ ನಾಯಕ,ಪಂಪಾಪತಿ ನಾಯಕ, ವೀರಭದ್ರಯ್ಯ ಸ್ವಾಮಿ, ಜೆಮ್ಸರ ಅಲಿ, ಗ್ರಾ. ಪಂ. ಅಧ್ಯಕ್ಷ ತಿಮ್ಮಯ್ಯ ನಾಯಕ, ಸದಸ್ಯರಾದ ಬ್ರಹ್ಮಾಜಿ, ಮೃತ್ಯುಂಜಯ, ವಿರುಪಾಕ್ಷಿ, ಜೆಡಿಎಸ್ ಮುಖಂಡರಾದ ಸತ್ಯ ಬಾಬು ಮಾರಪ್ಪ ಈರಪ್ಪ ಜಗ್ಲಿ ಮುತ್ತಣ್ಣ ಕಬೀರ್ ಹನುಮಂತರಾಯ ನಾಯಕ್, ಆಲಂಪಾಷ, ಸಿಕ್ಕಿಂದ್ದಾರ್ ದೊಡ್ಮನಿ ವೆಂಕಟರಮಣ ಮಂಜುನಾಥ್ ನಾಯಕ್, ಬಸವರಾಜ ಗಚ್ಚಿನ ಮನೆ, ಅಲ್ಲಿ ಸಾಬ್, ಬಂದೇನವಾಜ್ಪಂ, ಪಾಪತಿ ಅಂಬರೀಷ್ ನಿಲಗಲ್ ಶಿವಪ್ಪ ಮಡಿವಾಳ ಬಸಪ್ಪ ಊರಿನ ಸಮಸ್ತ ಹಿರಿಯರು ಇದರು.