ಜಾನುವಾರಗಳ ಆರೋಗ್ಯ ತಪಾಸಣೆ ಶಿಬಿರ

ಜೇವರ್ಗಿ:ಎ.4: ತಾಲೂಕಿನ ಗ್ರಾಮದಲ್ಲಿ ತ್ರಿವಿಕ್ರಮಾನಂದ ಮಠದಲ್ಲಿ ಆವರಣದಲ್ಲಿ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಬೇಸಾಯ ಶಾಸ್ತ್ರ ವಿಭಾಗದ ಸಹಾಯಕರಾದ ಡಾ. ಮೋಹನ್ ಚವ್ಹಾಣ್ ಅವರ ನೇತೃತ್ವದಲ್ಲಿ ಹಾಗೂ ಡಾ. ಸೂರ್ಯಕಾಂತ್ ಹಿರಿಯ ಪಶುವೈದ್ಯಾಧಿಕಾರಿಗಳು ಪಶು ಆಸ್ಪತ್ರೆಗಳು ಇವರ ಸಹಯೋಗದೊಂದಿಗೆ ಊರಿನ ಹಾಗೂ ಮಠದ ಸುಮಾರು 150ಕ್ಕೂ ಹೆಚ್ಚು ಜಾನುವಾರುಗಳಿಗೆ ಜಂತುನಾಶಕ ಲಸಿಕೆಯನ್ನು ಹಾಕಲಾಯಿತು .

ಪಶುವೈದ್ಯಾಧಿಕಾರಿಗಳು ಮಾತನಾಡಿ ದೇಶಿಯ ಜಾನುವಾರು ತಳಿಗಳ ಪ್ರಾಮುಖ್ಯತೆ ವಿದೇಶಿ ತಳಿಗಳಾದ ಹೆಚ್ಚ್. ಎಫ್,ಜಸ್ರಿ ಮತ್ತು ಇವುಗಳ ಬಗ್ಗೆ ಮಾಹಿತಿಯನ್ನು ಹಾಗೂ ಅವುಗಳಿಗೆ ಅವಶ್ಯಕವಿರುವ ಆಹಾರ ಹಾಗೂ ವಾತಾವರಣ ವಿಧಗಳು ಜಂತುನಾಶಕ ಮಹತ್ವದ ಕುರಿತು ವಿದ್ಯಾರ್ಥಿಗಳು ಹಾಗೂ ನೆರೆದಿರುವ ಗ್ರಾಮಸ್ಥರಲ್ಲಿ ಅರಿವು ಮಾಡಿಸಿದರು . ನಂತರ ವಿದ್ಯಾರ್ಥಿಗಳು ವೈದ್ಯಾಧಿಕಾರಿಗಳು ಹಾಗೂ ಅವರ ಸಹಾಯಕ ಸಹಾಯದೊಂದಿಗೆ ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಅನುಭವ ಪಡೆದುಕೊಂಡರು .

ಈ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದ ಡಾ. ಮೋಹನ್ ಚೌವ್ಹಾಣ್ ವಿದ್ಯಾರ್ಥಿಗಳಾದ ಅಕ್ಷಯ್ ಕುಮಾರ್ , ಅರ್ಜುನ್, ಗ್ರೀಷ್ಮಂತ್, ಅಜಯ್ ರಾಥೋಡ್, ಮಂಜುನಾಥ್ ಕಟ್ಟೆಹೊಳೆ , ಕಾರ್ತಿಕ್ ಗುತ್ತೇದಾರ್, ಜಗದೀಶ್ ಹೆಚ್ ಎಮ್, ಚೈತ್ರಾ ಡಿ ಎಸ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು