“ಜಾನಿವಾಕರ್” ಹಿಂದೆ ರಾಗಿಣಿ

ಕೆಲ ದಿನಗಳ ಹಿಂದೆ ನಟಿ ರಾಗಿಣಿ ದ್ವಿವೇದಿ ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿದ್ದರು. ನಾಲ್ಕು ಗೋಡೆಗಳ ಮಧ್ಯೆ ಅಗ್ನಿ ಪರೀಕ್ಷೆ ಎದುರಿಸಿ ಹೊರಗೆ ಬಂದಿರುವ ರಾಗಿಣಿ ಈಗ “ಜಾನಿವಾಕರ್” ಹಿಂದೆ ಬಿದ್ದಿದ್ದಾರೆ.

ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಜೊತೆಗೆ ಪೊಲೀಸ್  ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಭಯ್ ವೀರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ “ಜಾನಿವಾಕರ್ ‘ಚಿತ್ರಕ್ಕೆ ವೇದಿಕ್ ವೀರ ಆಕ್ಷನ್ ಕಟ್ ಹೇಳುತ್ತಿದ್ದಾರೆ .ರಂಜನ್ ಹಾಸನ್ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಡ ಟೈಟಲ್ ಬಿಡುಗಡೆಯ ಬಳಿಕ  ಮಾತಿಗಿಳಿದ ನಿರ್ಮಾಪಕ ರಂಜನ್, ಬಹಳ ದಿನದಿಂದ ಸಿನಿಮಾ ಮಾಡಬೇಕು ಎಂದು ಭಾವಿಸಿದ್ದೆವು. ಅದಕ್ಕೆ ಈಗ ಅವಕಾಶ ಕೂಡಿ ಬಂದಿದ. ಇದೊಂದು ಸಸ್ಪೆನ್ಸ್,ಥ್ರಿಲ್ಲರ್ ಅಂಶಗಳಿರುವ ಕಥೆ.ಚಿತ್ರದಲ್ಲಿ ಕೊಲೆ ನಡೆಯುತ್ತದೆ ಅದನ್ನು ಮಾಡಿದರು ಯಾರು ಎನ್ನುವುದು ಕುತೂಹಲ ಎಂದರು.

ನಿರ್ದೇಶಕ ವೇದಿಕ್,ಐದು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಕಥೆ ಇದು ಜಾನಿವಾಕರ್ ಹೆಸರಿನ ವ್ಯಕ್ತಿ ಚಿತ್ರದಲ್ಲಿ ಇರುತ್ತಾನೆ ಆತ ಯಾರು ಎನ್ನುವುದು ಕುತೂಹಲ ಎಂದರು.

ನಟಿ ರಾಗಿಣಿ ಮಾತನಾಡಿ, ಬಹಳ ದಿನಗಳ ನಂತರ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ಕಥೆಯೇ ನಾಯಕ ನಾಯಕಿ, ಇದೊಂದು ವಿಶೇಷವಾದ ಪಾತ್ರ ಸಿಕ್ಕಿದೆ ಎಂದರು.

ಚಿತ್ರಕ್ಕೆ ವಿನು ಮನಸು ಸಂಗೀತವಿದ್ದು ಐದು ಹಾಡುಗಳು ಇರಲಿವೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕನಾದ ಹಾಡುಗಳು ಇರಲಿವೆ ಎಂದು ಹೇಳಿಕೊಂಡರು.