ಜಾನಾಪೂರ ಗೋಕುಳ ಹದೆಗೆಟ್ಟ ರಸ್ತೆ ಸಾರ್ವಜನಿಕರ ಗೊಳಾಟ

ಬಸವಕಲ್ಯಾಣ: ಎ.25:ತಾಲ್ಲೂಕಿನ ಜಾನಾಪೂರ ಕ್ರಾಸ್ ದಿಂದ ಗೋಕುಳ ಮತ್ತು ಘಾಟಬೋರಳ ಕಡೆಗೆ ಹೋಗುವ ರಸ್ತೆ ಸುಮಾರು ವರ್ಷಗಳಿಂದ ಬಹಳಷ್ಟು ಹದೆಗೆಟ್ಟಿದ್ದು, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಕಡೆ ಗಮನ ಹರಿಸಿಲ್ಲ. ನಾರಾಯಣಪೂರ ಜಿಲ್ಲಾ ಪಂಚಾಯತ ಕ್ಷೇತ್ರ, ಧನ್ನೂರಾ (ಕೆ) ತಾಲ್ಲೂಕಾ ಪಂಚಾಯತ ಕ್ಷೇತ್ರ, ಪಿಡಬ್ಲ್ಯೂಡಿ ಇಲಾಖೆ ಬಸವಕಲ್ಯಾಣ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ಇದೆಯಾದರು ಯಾಕೋ ಇವರಿಗೆ ಕಾಣುತಿಲ್ಲದ್ದಂತಾಗಿದೆ.
ಜಿ. ಪಂ. ಸದಸ್ಯೆ ಬೇಲೂರು ಗ್ರಾಮದವರು. ಕೆಲವು ದಿನಗಳಲ್ಲಿ ಅವರ ಅವಧಿ ಮುಗಿದು ಮತ್ತೆ ಚುನಾವಣೆ ಸಮಿಪಿಸುತ್ತಿವೆ. ಇವರ ಐದು ವರ್ಷದ ಅವಧಿಯಲ್ಲಿ ಅಂತದೇನು ಹೇಳಿಕೊಳ್ಳುವಂತಹ ಜನಪರ ಕೆಲಸ ಕಾರ್ಯಕ್ರಮಗಳು ನಡೆದಿಲ್ಲ. ಅವರ್ಯಾಕೆ ರಸ್ತೆ ದುರಸ್ಥಿ ಗೋಜಿಗೆ ಹೋಗುತ್ತಾರೆ ಹೇಳಿ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಅದೆ ರೀತಿ ತಾ. ಪಂ. ಸದಸ್ಯ ರಾಜೋಳಾ ಗ್ರಾಮದವರು ಇವರಂತು ಬಹಳಷ್ಟು ಜನರಿಗೆ ಪರಿಚಯವೇ ಇಲ್ಲ. ಇವರ ಐದು ವರ್ಷದ ಅವಧಿಯ ಕೆಲಸಗಳು ತಾಲೂಕು ಪಂಚಾಯತ ಕಚೇರಿಯ ಕಂಪೌಂಡ ವಳಗೆ ಸಮೀತ. ಅಂದ ಮೇಲೆ ಜನರ ಸಮಸ್ಯೆ ಪಾಪ ಅವರಿಗೇನು ಗೊತ್ತು ಹೇಳಿ ಎಂದು ಮತ ನೀಡಿ ಗೆಲ್ಲಿಸಿದವರು ಆಡುವ ಮಾತುಗಳು.
ಜನ ಪ್ರತಿನಿಧಿಗಳ ಬೇಜಬ್ದಾರಿಯಂತು ಎಲ್ಲರಿಗೂ ಗೊತ್ತೆಯಾಗಿದೆ. ಸಾರ್ವಜನಿಕರ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕೆ ವಿವಿಧ ಇಲಾಖೆಗಳು ಬರುತ್ತಾವೆ. ಇದಕ್ಕೆ ಸಂಬಂಧ ಪಟ್ಟಂತೆ ಪಿಡಬ್ಲ್ಯೂಡಿ ಇಲಾಖೆ ಬರುತ್ತದೆ. ಆಯೋ ಇವರಿಗೇನು ಗೊತ್ತು ಅಂತ್ತಿರಾ ? ಇವರಿಗಂತ್ತು ಹೇಳರು ಕೇಳರು ಯಾರು ಇಲ್ಲ. ಇವರು ಮನ್‍ಕಾ ರಾಜಾ. ಹಾಗಾದ ಮೇಲೆ ಜನರ ಸಮಸ್ಯೆ ಆಲಿಸುವರು ಯಾರು ?
ಕೆಲವು ದಿನಗಳಲ್ಲಿ ಬಸವಕಲ್ಯಾಣ ವಿಧಾನ ಸಭೆ ಉಪ ಚುನಾವಣೆ ನಡೆಯಲಿದೆ. ಒಂದೊಂದು ಪಕ್ಷದಲ್ಲಿ ಮೂವತ್ತು ನಲವತ್ತು ಜನರು ಟೀಕೆಟ ಆಕಾಂಕ್ಷಿಗಳಾಗಿ ಭರಾಟೆಯಿಂದ ಪ್ರಚಾರದಲ್ಲಿ ತೋಡಗಿದ್ದಾರೆ. ಪಕ್ಷದ ಮುಖಂಡರಿಗೆ ಕರೆಸುವುದು ಬಾಜಾ ಭಜಂತ್ರಿ ನಗರ ತುಂಬೆಲ್ಲಾ ಬ್ಯಾನರು ಕಟೌಟು ಸಾವಿರಾರೂ ಕಾರ್ಯಕರ್ತರನ್ನು ಜಮಾಯಿಸುವುದು ಮಾಡುತ್ತಿದ್ದಾರೆ. ಆದರೆ ಜನರ ಸಮಸ್ಯೆ ಆಲಿಸಲು ಯಾರು ಪ್ರಯತ್ನ ಮಾಡುತ್ತಿಲ್ಲ ವೆಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.
ಹೀಗೆ ಹತ್ತು ಹಲವಾರು ಗ್ರಾಮಗಳ ರಸ್ತೆ ಕೆಟ್ಟು ಹೋಗಿ ವಾಹನ ಸವಾರರಿಗೆ ಇನ್ನಿಲ್ಲದ ತೊಂದರೆ ಆಗುತ್ತಿರುವ ಬಗ್ಗೆ ಅನೇಕ ಸಲ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರು ಯಾರು ಗಮನ ಹರಿಸದಿರುವುದಕ್ಕೆ ಜನರ ಗೋಳಾಡಿಕೊಂಡು ಹಿಡಿಶಾಪ ಹಾಕುತ್ತಿದ್ದಾರೆ.