ಜಾನಪದ ಸೋಗಡು ಗ್ರಾಮೀಣ ಜನರ ಜೀವಾಳ:ರಾಜಶೇಖರಶ್ರೀ

ಆಳಂದ:ಎ.23:ಇಂದಿನ ಸ್ಪರ್ಧಾ ಯುಗದಲ್ಲಿ ಆಧುನಿಕತೆಯ ಭರಾಟೆಯಲ್ಲಿಯೂ ಜಾನಪದ ಕಲೆ,ಸಾಹಿತ್ಯ,ಹಾಡುಗಳ ಸೋಗಡು ಗ್ರಾಮೀಣ ಜನರ ಜೀವಾಳವಾಗಿವೆ ಎಂದು ಹುಬ್ಬಳ್ಳಿ ನವ ನಗರದ ರಾಜಶೇಖರ ಶಿವಾಚಾರ್ಯರು ನುಡಿದರು.

ತಾಲೂಕಿನ ಝಳಕಿ(ಕೆ) ಗ್ರಾಮದ ಭೀಮಾಶಂಕರ ದೇವಸ್ಥಾನ ಆವರಣದಲ್ಲಿ ಗುರುವಾರ ನಿಂಗದಳ್ಳಿಯ ಧಾನಮ್ಮ ದೇವಿ ಗಾನವೃಂದ ಸೇವಾ ಸಂಸ್ಥೆ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಜಾತ್ರೆ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಳ್ಳಿಗಳಲ್ಲಿ ಜಾನಪದ ಕಲಾವಿದರು ಬಹಳಷ್ಟು ಜನರಿದ್ದು ಇವರ ಕಲೆ,ಸಾಹಿತ್ಯ,ಹಾಡುಗಳು ಜೀವಂತ ಉಳಿಯಬೇಕಾದರೆ ಪುಸ್ತಕರೂಪದಲ್ಲಿ ಪ್ರಕಟಿಸಬೇಕಾಗಿದೆ ಮತ್ತು ಕಲಾವಿದರಿಗೆ ಸರಕಾರ ಮಾಶಾಸನ ನೀಡಬೇಕು ಹಾಗೂ ಸಂಘ ಸಂಸ್ಥೆಗಳು ಪ್ರೋತ್ಸಾಹಿಸುವದು ಅವಶ್ಯಕವಾಗಿದೆ ಎಂದರು.

ಭೀಮಾಶಂಕರ ದೇವಸ್ಥಾನದ ಅರ್ಚಕ ಚಿತ್ತಯ್ಯಾ ಸ್ವಾಮಿ ಅಧ್ಯಕ್ಷತೆವಹಿಸಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಾಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ನಿಂಗದಳ್ಳಿಯ ಧಾನಮ್ಮ ದೇವಿ ಗಾನವೃಂದ ಸೇವಾ ಸಂಸ್ಥೆಯ ಕಾರ್ಯದರ್ಶಿ ಶಿವಶರಣಯ್ಯ ಸ್ವಾಮಿ ಇವರು ಕಾರ್ಯಕ್ರಮದಲ್ಲಿ ಮಾತನಾಡಿ ಜಾನಪದ ಜಾತ್ರೆ ಇದು ಗ್ರಾಮೀಣ ಜನರಿಗೆ ಮನಸಿಗೆ ನೆಮ್ಮದಿ ತರುತ್ತದೆ ಎಂದರು.

ದೇವಸ್ಥಾನ ಕಮಿಟಿ ಅಧ್ಯಕ್ಷ ಶ್ರೀಶೈಲ್ ಪಾಟೀಲ್,ಸದಸ್ಯ ಭೀಮಣ್ಣಾ ಶೇರಿಕಾರ,ಮುಖಂಡ ಶಾಂತಪ್ಪ ನಂದರ್ಗಿ,ಸಿದ್ದರಾಮ ರೇವೂರ,ಪರಮೇಶ್ವರ ಕಂಬಾರ,ಸಿದ್ದರಾಮ ಪ್ಯಾಟಿ ಇದ್ದರು.

ಬಳಿಕ ಹಿತ್ತಲಶಿರೂರಿನ ವೀರಯ್ಯ ಹಿರೇಮಠ ಇವರಿಂದ ಭಕ್ತಿಗೀತೆ,ಷಣ್ಮುಖಯ್ಯ ಹಿರೇಮಠ ,ಗುರುಶಂತಪ್ಪ ಕುಂಬಾರ,ಭೀಮಶಾ ಭಕರೆ ಜಾನಪದಗೀತೆ,ರಮೇಶ ಮಾಡಿಯಾಳ ಭಕ್ತಿ ಸಂಗೀತ,ಶಿವಶರಣಪ್ಪ ಪೂಜಾರಿ ಹಿತ್ತಲಶಿರೂರ ವಚನ ಸಂಗೀತ,ಶಿವರಾಯ ಏಲಿಕೇರಿ ಏಕತಾರಿ ಪದ,ರಾಜಕುಮಾರ ಮಾಡ್ಯಾಳ ತತ್ವಪದ ಗಮನ ಸೆಳೆಯಿತು.ಗುರುಶಾಂತಪ್ಪ ದಿಂಡೂರೆ ಸಂಗೀತ,ಅಶೋಕ ಆಳಂದ,ಸುರೇಶ ಆಳಂದ ಇವರು ತಬಲಾ ಸಾಥ್ ನೀಡಿದರು.ಗ್ರಾಮದ ಹಾಗೂ ಸುತ್ತಲಿನ ಗ್ರಾಮಗಳ ಕಲಾ ಆಸಕ್ತರು ಪಾಲ್ಗೊಂಡಿದರು.