ಜಾನಪದ ಸಾಹಿತ್ಯ ನಮ್ಮೆಲ್ಲರ ಉಸಿರು: ಶಿವಾನಂದ ಮಂಗಾನವರ

ವಿಜಯಪುರ: ಜು.30:ಜಾನಪದ ಸಾಹಿತ್ಯ ನಮ್ಮೆಲ್ಲರ ಉಸಿರು. ಜನಸಾಮಾನ್ಯರ ಜೀವನ ಪೂರ್ಣ ಮಾನವೀಯ ಮೌಲ್ಯ ಕಾಪಾಡುವ ಜಾನಪದ ಸಾಹಿತ್ಯವಾಗಿದೆ ಎಂದು ಜಾನಪದ ವಿದ್ವಾಂಸ ಶಿವಾನಂದ ಮಂಗಾನವರ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ ,ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಆಶ್ರಯದಲ್ಲಿ ಶ್ರೀ ಮಡಿವಾಳಪ್ಪ ತುಳಜಪ್ಪ ಸಾಸನೂರ ದತ್ತಿ .ದತ್ತಿ ದಾನಿಗಳು ಡಾ: ಅಶೋಕ ಸಾಸನೂರ. ವಿಷಯ : ಜಾನಪದ ಸಾಹಿತ್ಯ ಕುರಿತು ಹಾಗು ಜ ಚ ನಿ ಕೃತಿಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಗರದ ಸಾಯಿ ಪಾಕ9ದಲ್ಲಿರುವ ಸರಕಾರಿ ಮೆಟ್ರೀಕ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿನಿಲಯದಲ್ಲಿ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದತ್ತಿನಿಧಿ ಗೋಷ್ಠಿಗಳು ವಿದ್ಯಾರ್ಥಿಗಳಿಗೆ ಅನೇಕ ವಿಷಯಗಳನ್ನು ಚಚಿ9ಸುವದರಿಂದ ಹೆಚ್ಚಿನ ಜ್ಞಾನ ಮಾಡಿಕೊಳ್ಳಲು ಸಾಧ್ಯವಿದೆ. ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರ ನಡೆಯುತ್ತಿರುವುದು ಸಂತಸದ ವಿಚಾರ ಎಂದರು
ಉಪನ್ಯಾಸಕರಾದ ಅಮರೇಶ ಸಾಲಕ್ಕಿ ಜಾನಪದ ಸಾಹಿತ್ಯ ಕುರಿತು ಮಾತನಾಡಿ ಜಾನಪದ ಕಲೆ, ಸಾಹಿತ್ಯ, ಸಾಂಸ್ಕøತಿಕ ಪರಂಪರೆ ನಮ್ಮ ಗ್ರಾಮೀಣ ಪ್ರದೇಶದ ಸಂಸ್ಕೃತಿಯ ಪ್ರತೀಕವಾಗಿವೆ. ಜಾನಪದ ಕಲೆಯ ಮಹತ್ವ ತಿಳಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು ವೀರಗಾಸೆ, ನಂದಿಕೋಲು ಕುಣಿತ ಹಲಗೆ ವಾದನ. ಇಂದಿಗೂ ತಮ್ಮ ಮೌಲ್ಯ ಕಾಪಾಡಿಕೊಂಡಿವೆ ಎಂದರು
ನಿಲಯ ಮೇಲ್ವಿಚಾರಕ ಸದಾನಂದ ಬಡಿಗೇರ ಮಾತನಾಡಿ ಆಧುನಿಕ ಭರಾಟೆಯಲ್ಲಿ ಜಾನಪದ ಕಲೆಗಳು
ಕುಂಟಿತಗೊಂಡಿದ್ದರು ಮೌಲ್ಯಯುತ ಜಾನಪದ ಕಲೆಗಳು ಇಂದಿಗೂ ಪ್ರಾಧ್ಯಾನತೆ ಪಡೆದುಕೊಂಡಿವೆ .ಎಲ್ಲ ಹಂತದ ತರಗತಿಗಳಿಗೆ ಜಾನಪದ ಸಾಹಿತ್ಯ ಪರಿಚಯಿಸುವ ಪಠ್ಯಕ್ರಮದ ಅವಶ್ಯಕತೆಯಿದೆ ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕಿ ಇಂದಿರಾ ಬಿದರಿ ಮಾತನಾಡಿ ಜ ಚ ನಿ ಅವರು ವೇದ,ಆಗಮ,ಶಾಸ್ತ್ರ, ಯೋಗ, ವ್ಯಾಕರಣ, ಉಪನಿಷತ್ತು, ವಚನಶಾಸ್ತ್ರ, ಭಗವದ್ಗೀತೆ,ರಾಮಾಯಣ, ಮಹಾಭಾರತ, ಮುಂತಾದ ಮಹಾಕಾವ್ಯಗಳು ಅಧ್ಯಯನ ಮಾಡಿ ಬರೆದರು .ಅಲ್ಲದೆ ಭಾರತೀಯ ಸಂಸ್ಕೃತಿ, ಮಾನವ ಶಾಸ್ತ್ರ ಜನಾಂಗೀಯ ಅಧ್ಯಯನ ಮಾಡಿ ನೂರಾರು ಅಮೂಲ್ಯವಾದ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆಂದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಜಿಲ್ಲಾ ದತ್ತಿ ಕಸಾಪ ಸಂಚಾಲಕ ರಾಜೇಸಾಬ ಶಿವನಗುತ್ತಿ ಮುಖ್ಯ ಅತಿಥಿಗಳಾದ ಜಿ ಬಿ ಅಂಗಡಿ ಜಿ ಎಸ್ ಬಳ್ಳೂರ ಎಸ್ ಎಲ್ ನಾಟಿಕಾರ ವೇದಿಕೆಯ ಮೇಲಿದ್ದರು
ಸಾಯಿಬಣ್ಣಾ ಮಾದರ ನಿರೂಪಿಸಿದರು ಕುಮಾರ ಕಾಂಬಳೆ ವಂದಿಸಿದರು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.