ಜಾನಪದ ಸಾಹಿತ್ಯ ಎಲ್ಲ ಪ್ರಕಾರದ ಸಾಹಿತ್ಯಕ್ಕೂ ಮೂಲ


ಧಾರವಾಡ,ಏ.9: ಜಾನಪದ ಬದುಕು ನಮ್ಮ ಪಿತ್ರಾರ್ಜಿತರ ಬಹುದೊಡ್ಡ ಆಸ್ತಿ. ಅದು ಶಿಷ್ಟಪದ ಸಾಹಿತ್ಯದತಾಯಿಬೇರು. ಹಳ್ಳಿಯ ಜನಪದರಜೀವನಾನುಭವದ ಸುಂದರರಸಘಟ್ಟಎಂದುಜಾನಪದತಜ್ಞರಾದಡಾ. ರಾಮು ಮೂಲಗಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ದೇವೇಂದ್ರಕುಮಾರ ಹಕಾರಿ ಸಂಸ್ಮರಣೆದತ್ತಿ' ಅಂಗವಾಗಿ ಆಯೋಜಿಸಿದ್ದಶಿಷ್ಟ ಸಾಹಿತ್ಯ ವೃಕ್ಷಕ್ಕೆಜನಪದದ ಬೇರುಗಳು’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಜಾನಪದದಲ್ಲಿರುವುದೆಲ್ಲವೂ ನಮ್ಮಜೀವನದಲ್ಲಿದೆ. ನಮ್ಮಜೀವನವೇಒಂದುಜಾನಪದವಾಗಿದೆ.ಜಾನಪದ ಸಾಹಿತ್ಯಎಲ್ಲಾ ಪ್ರಕಾರದ ಸಾಹಿತ್ಯಕ್ಕೂ ಮೂಲ.ಹೀಗಾಗಿ ಬಿ.ಎಂ. ಶ್ರೀಕಂಠಯ್ಯನವರು `ಜನವಾಣಿ ಬೇರು, ಕವಿವಾಣಿ ಹೂವು’ ಎಂದು ಹೇಳಿದ್ದು ಅರ್ಥಪೂರ್ಣವಾಗಿದೆ. ವಿದ್ಯೆಯಗಂಧವನ್ನರಿಯದ ನಮ್ಮಜನಪದರು ನಿರಕ್ಷರಿಗಳಾದರೂ ಕಾವ್ಯಕಟ್ಟಿ ಹಾಡುವಕಲೆಯನ್ನುಕರಗತ ಮಾಡಿಕೊಂಡಿದ್ದಾರೆ. ತಮ್ಮ ಬದುಕಿನ ಸಿಹಿ-ಕಹಿ, ನೋವು-ನಲಿವುಗಳ ಹೊರೆಯನ್ನು ಹಾಡಿನ ಮೂಲಕ ಹೊರಹಾಕಿ ಹೃದಯ ಹಗುರಾಗಿಸಿಕೊಳ್ಳುವುದರ ಜೊತೆಜನಪದ ಸಾಹಿತ್ಯ ಭಂಡಾರ ಶ್ರೀಮಂತಗೊಳಿಸಿದ್ದಾರೆ.
ಜೀವನಾನುಭವದ ಶಾಲೆಯೇಜನಪದ. ಈ ಹಾಡುಗಳು ಜನರ ಬಾಯಿಂದ ಬಾಯಿಗೆ ಹೋಗಿ ಉಳಿದು ಬಂದ ಸಾಹಿತ್ಯವಾಗಿದೆ.ಕಾಲಾನುಕಾಲಕ್ಕೆ ಜಾನಪದ ಹಾಡುಗಳು ಬದಲಾವಣೆಯಾಗುತ್ತಲೇ ಬಂದಿವೆ. ಜನಪದ ಸಂಸ್ಕøತಿಜೇನುಗೂಡಿನ ಸಂಸ್ಕøತಿಇದ್ದಂತೆ.ಜನ ಸಾಮಾನ್ಯರನ್ನುಆಕರ್ಷಿಸಬಲ್ಲ ಅದಮ್ಯ ಶಕ್ತಿ ಅದರಲ್ಲಿದೆ. ಜಾನಪದ ಸಾಹಿತ್ಯದಲ್ಲಿಕೃತಕತೆಇಲ್ಲ ಅವು ನೇರವಾಗಿ ನಮ್ಮಜನಪದದ ಹೃದಯದಿಂದ ಹೊರಹೊಮ್ಮಿ ರಸಾನಂದಗೊಳಿಸಿವೆ. ನಮ್ಮ ಬದುಕಿನಜೀವಂತಚಿತ್ರಣವೇಅದರಲ್ಲಿರುವುದು. ಜಾನಪದದಲ್ಲಿ ನಮ್ಮಕೌಟುಂಬಿಕ ಸಂಬಂಧಗಳ ಅಭಿವ್ಯಕ್ತಿಯೂಇದೆ. ನಮ್ಮಜನಪದರು ಬಿಟ್ಟು ಹೋದ ಈ ಮೋಹಕ ಸಾಹಿತ್ಯವನ್ನು ನಾವಿಂದು ಉಳಿಸಿ ಬೆಳೆಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಡಾ.ದೇವೇಂದ್ರಕುಮಾರ ಹಕಾರಿಯವರುಜಾನಪದಕ್ಷೇತ್ರದಒಬ್ಬ ಮಹಾನ್ ಸಾಧಕರು.ಈ ನಾಡುಕಂಡ ಶ್ರೇಷ್ಠ ಜಾನಪದ ವಿದ್ವಾಂಸರು.ಅವರ ಸಾಧನೆ ನಮಗೆಲ್ಲಾಚೇತೋಹಾರಿಯಾಗಿದೆಎಂದರು.
ವೇದಿಕೆಯಲ್ಲಿ ದತ್ತಿದಾನಿಗಳಾದ ರವಿಶಂಕರ್ ಹಕಾರಿ ಉಪಸ್ಥಿತರಿದ್ದು ದತ್ತಿಆಶಯಕುರಿತು ಮಾತನಾಡಿದರು. ದಿ. ಡಾ. ದೇವೆಂದ್ರಕುಮಾರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿಗೌರವಿಸಲಾಯಿತು.
ಕ.ವಿ.ವ. ಸಂಘದಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಸಹ ಕಾರ್ಯದರ್ಶಿ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಏಪ್ರಿಲ್ ತಿಂಗಳ ದತ್ತಿ ಸಂಯೋಜಕ ವೀರಣ್ಣಒಡ್ಡೀನ ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಉದಯಶಂಕರ ಹಕಾರಿ, ಪ್ರೊ.ಶಿವಾನಂದ ಕಣವಿ, ಡಾ.ಬಾಳಣ್ಣಾ ಶೀಗೀಹಳ್ಳಿ, ವ್ಹಿ. ಜಿ. ಪಾಟೀಲ, ಎಂ.ಎಂ.ಚಿಕ್ಕಮಠ, ಸುರೇಶಗುದುಗನವರ, ರಾಜೇಂದ್ರ ಸಾವಳಗಿ, ನಿಂಗಪ್ಪ ಮಾಯಕೊಂಡ ಸೇರಿದಂತೆ ಮುಂತಾದವರಿದ್ದರು.