ಜಾನಪದ ಸಾಹಿತ್ಯದಿಂದ ಆತ್ಮಶಾಂತಿ ಸಾಧ್ಯ: ಡಾ.ಉಮಾಕಾಂತ ಪಾಟೀಲ

ಬೀದರ:ಸೆ.25: ಜಾನಪದ ಸಾಹಿತ್ಯದಿಂದ ಆತ್ಮಶಾಂತಿ ಸಧ್ಯವಿದೆ ಎಂದು ಆಂಗ್ಲ ಸಾಹಿತಿ ಡಾ.ಉಮಾಕಾಂತ ಪಾಟೀಲ ಹೇಳಿದರು.

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಶನಿವಾರ ಬೆಳಿಗ್ಗೆ ದೆಹಲಿಯ ಸಂಸ್ಕøತಿ ಸಚಿವಾಲಯ, ನಾಗಪುರದ ದಕ್ಷಿಣ ವಲಯ ಕೇಂದ್ರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಆಶ್ರಯದಲ್ಲಿ ಮೂರು ದಿವಸದ ರಾಷ್ಟ್ರೀಯ ಜನಪದ ನೃತ್ಯೋತ್ಸವ ಕಾರ್ಯಕ್ರಮದ ನಿಮಿತ್ಯ ಪ್ರಬಂಧ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಯ ಸಿಕ್ಕಾಗ ಪ್ರತಿಯೊಬ್ಬರೂ ಜನಪದ ಸಾಹಿತ್ಯ, ಹಾಡುಗಳನ್ನು ಆಲಿಸಬೇಕೆಂದು ಸಲಹೆ ನೀಡಿದ ಅವರು, ಇಂದು ವ್ಯಕ್ತಿ ಎಷ್ಟೇ ಆಧುನಿಕತೆಗೆ ಒಗ್ಗಿಕೊಂಡರೂ ಜನಪದ ಬೇಕೇ ಬೇಕು.ಎಂದರು..

ಡಾ. ಜಗನ್ನಾಥ ಹೆಬ್ಬಾಳೆಯವರು ಜನಪದ ಮತ್ತು ಜನಪರ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ತ್ರಿಪುರಾದಿಂದ ತೆಲಂಗಾಣ ವರೆಗಿನ ಕಲಾವಿದರನ್ನು ಕರೆಸಿ, ದೇಶದ ಸಂಸ್ಕøತಿ ಬೀದರ ಜನತೆಗೆ ತಿಳಿಸುವ ಕಾರ್ಯ ಡಾ. ರಾಜಕುಮಾರ ಹೆಬ್ಬಾಳೆ ಮಾಡುತ್ತಿದ್ದಾರೆ. ಇದು ಮಾದರಿ ಹಾಗೂ ಸ್ಪೂರ್ತಿದಾಯಕ ಕಾರ್ಯ ಎಂದು ಪಾಟೀಲ ಬಣ್ಣಿಸಿದರು.

ಕರ್ನಾಟಕ ಬರಹಗಾರರ ಮತ್ತು ಕಲಾವಿದ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಆಶಯ ನುಡಿ ನುಡಿಯುತ್ತ, ಇಂದು ವ್ಯಕ್ತಿ ಮನುಷ್ಯತ್ವ ಕಳೆದುಕೊಳ್ಳುತಿದ್ದಾನೆ. ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಮನಸ್ತಾಪಗಳು ಬೆಳೆಯುತ್ತಿವೆ. ಹೀಗಾಗಿ ಉತ್ತಮ ಮನುಷ್ಯತ್ವ ಬೆಳೆಸಿಕೊಳ್ಳಲು, ಸದ್ವರ್ತನೆ ರೂಢಿಸಿಕೊಳ್ಳಲು ಜನಪದ ಅತ್ಯವಶ್ಯಕವಾಗಿದೆ. ಜನಪದ ಪರಿಷತ್ತು ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಜನಪದ ಹಾಡುಗಳು ಯಾವುದೇ ಇರಲಿ. ಅವುಗಳ ಅಂತೀಮ ದಾರಿ ಮಾನವೀಯತೆಯ ಕಡೆಗೆ ಸಾಗುತ್ತದೆ. ಆತ್ಮಾವಲೋಕನ ಮಾಡಿಕೊಳ್ಳಲು ಜನಪದ ಹಾಡುಗಳು ಬೇಕು ಎಂದು ನುಡಿದರು.

ಜನಪದ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಮುಂದಿನ ಪೀಳಿಗೆಗೆ ನಮ್ಮ ನೆಲಮೂಲದ ಸಂಸ್ಕøತಿ ತಿಳಿಸಿಕೊಡುವ ಕಾರ್ಯ ಕರ್ನಾಟಕ ಜನಪದ ಪರಿಷತ್ತು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕರರಾವ ಹೊನ್ನಾ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ವಿನೋದ್ ಮೂಲಗೆ, ಪ್ರೊ.ವೈಜಿನಾಥ ಚಿಕಬಸೆ, ಮಹಿಳಾ ಸಾಹಿತಿ ಸಾಧನಾ ರಂಜೋಳಕರ್ ಹಾಗೂ ಪುಷ್ಪಾ ಕ£ಕ, ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ ಕುಚಬಾಳ ಹಾಗೂ ಇತರರು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಪ್ರಬಂಧಕಾರರಾದ ಡಾ.ವಿಶ್ವನಥ ಕವಿಡೆ, ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಡಾ.ಮಹಾನಂದಾ ಮಡಕಿ, ಡಾ.ಸುನಿತಾ ಕೂಡ್ಲಿಕರ್, ಮಹಾರುದ್ರ ಡಾಕುಳಗಿ, ಡಾ.ಮಹಾದೇವಿ ಭಾಗ್ಯನಗರ, ರೇಣುಕಾ ಮಳ್ಳಿ, ಡಾ.ಸಿದ್ದಣ್ಣ ಕೊಳ್ಳಿ, ಶೈಲಜಾ ಸಿದ್ದವೀರ, ಡಾ.ಜಗದೇವಿ ತಿಪ್ಪಶೆಟ್ಟಿ, ಸಂಗಪ್ಪ ತೌಡಿ, ಸ್ವರೂಪಾ ಕಣಜೆ, ಸಂಗೀತಾ ಮಾನಾ, ಮಹಾದೇವ, ಕೀರಣ ಹಾಗೂ ಇತರರು ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಡಾ.ಸೂನಿತಾ ಕೂಡ್ಲಿಕರ್ ಸ್ವಾಗತಿಸಿ, ಮಹಾರುದ್ರ ಡಾಕುಳಗಿ ಕಾರ್ಯಕ್ರಮ ನಿರೂಪಿಸಿ, ಪ್ರಕಶ ಕನ್ನಾಳೆ ವಂದಿಸಿದರು.