ಜಾನಪದ ಸಾಂಸ್ಕøತಿಕ ಕಾರ್ಯಕ್ರಮ

ಬೀದರ: ನ.12:ನಗರದ ಸಿ.ಎಂ.ಸಿ ಕಾಲೋನಿಯ ಅಂಬೇಡ್ಕರ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬುಧ್ದ ಬಸವ ಅಂಬೇಡ್ಕರ್ ನಗರ ಮತ್ತು ಗ್ರಾಮೀಣ ಸಂಸ್ಥೆ ರಾಜಗೀರಾ ಸಂಯುಕ್ತ ಆಶ್ರಯದಲ್ಲಿ ಪ.ಜಾ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತ್ತು

ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಾತಾ ರಮಾಬಾಯಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉಧ್ಘಾಟಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಪ್ರಮುಖರಾದ ವಿಠಲರಾವ ಮನ್ನಾಖೇಳಿ ವಹಿಸಿದರು

ಮುಖ್ಯ ಅತಿಥಿಗಳಾಗಿ ನಿವೃತ್ತ ಖಜಾನೆ ಅಧಿಕಾರಿ ಸಾಹಿತಿ ಲಕ್ಷ್ಮಣರಾವ ಕಾಂಚೆ, ವಿಶ್ವ ಕನ್ನಡಿಗರ ಸಂಸ್ಥೆ ರಾಜ್ಯಧ್ಯಕ್ಷ ಸುಬ್ಬಣ್ಣ ಕರಕ್ಕನಳ್ಳಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹೇಶ ಗೋರನಾಳಕರ್ ಭಾಗವಹಿಸಿದರು

ಕಾರ್ಯಕ್ರಮದಲ್ಲಿ ಶಿವರಾಜ ತಡಪಳ್ಳಿ ಹಾಗೂ ಸಂಗಡಿಗರು ಜಾನಪದ ಗೀತೆಗಳು ಹಾಡಿ ಎಲ್ಲರ ಮನ ರಂಜಿಸಿದರು

ಪ್ರಮುಖರಾದ ಸುನೀಲ ಕಡ್ಡೆ, ಶಂಕರ ಚೊಂಡಿ, ಸುಧಾಕರ ಎಲ್ಲಾನೋರ್, ಅರುಣ ಪಟೇಲ್ ,ನಾಗಪ್ಪಾ ಕೆಲೋಸ್ಕರ್, ಲಕ್ಷ್ಮಣರಾವ ಮಿಠಾರೆ ಮತ್ತು ಪ್ರಕಾಶ ಜನವಾಡಕರ್ ಇನ್ನಿತರರು ಉಪಸ್ಥಿತರಿದ್ದರು.