ಜಾನಪದ ಸಾಂಸ್ಕೃತಿಕ ಬೆಳಕು ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.1:  ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ (ರಿ) ಇವರು ನಗರದ ಗುಗ್ಗರಹಟ್ಟಿ ಪ್ರದೇಶಧ ಶ್ರೀ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಶಿವದೀಕ್ಷಾ ಮಂದಿರದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಜಾನಪದ ಸಾಂಸ್ಕೃತಿಕ ಬೆಳಕು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಾನಿಧ್ಯವನ್ನು ಹರಗಿನಡೋಣಿ ಪಂಚವಟಗಿ ಮಠದ ಷ.ಬ್ರ. ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಸೀದಿಪುರದ ಶಾಸ್ತ್ರಿ ಸಿದ್ದರಾಮಗೌಡ ಅವರು ನೆರವೇರಿಸಿ ಮಾತನಾಡುತ್ತಾ, ಇಂದಿನ ಜಗತ್ತಿನಲ್ಲಿ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಕಲಾವಿದರ ಮೇಲಿದೆ ಎಂದರು. ಈಗಿನ ಸಂದರ್ಭದಲ್ಲಿ ಇಂತಹ ಜಾನಪದ ಕಲೆಗಳನ್ನು ಜನರಿಗೆ ಪರಿಚಯಿಸಿಕೊಡುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಢಿದ, ಶಿವದೀಕ್ಷಾ ಮಂದಿರದ ಧರ್ಮಾಧಿಕಾರಿಗಳಾದ ಕೆ.ರಾಜಶೇಖರಗೌಢ ಅವರು, ಇಂದಿನ ಕಾರ್ಯಕ್ರಮವು ನೆರದ ಜನರ ಮನರಂಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ, ಇಂತಹ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಂಡಿರುವುದು ತುಂಬಾ ಸಂತಸದ ವಿಷಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಪಿಎಂಸಿ ತರಕಾರಿ ವ್ಯಾಪಾರಿ ಜಿ.ರವಿ ಕಾಕರ್ಲತೋಟ, ಸಂಗೀತ ಶಿಕ್ಷಕ ದೊಡ್ಡಬಸವ ಗವಾಯಿಗಳು, ಸಂಸ್ಥೆಯ ಸದಸ್ಯರಾದ ವೈ.ಪ್ರಭು ಉಪಸ್ಥಿರಿದ್ದರು. ಈ ಸಂದರ್ಭದಲ್ಲಿ ತೊಗಲುಗೊಂಬೆ ಕಲೆಯ ಬಗ್ಗೆ ಕುರಿತು ವಿಚಾರ ಸಂಕಿರಣವನ್ನು ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ದಸ್ತಗಿರಿಸಾಬ್ ದಿನ್ನಿ ರವರು ಮಂಡಿಸಿದರು. ನಂತರ ಸೂರ್ಯಕಲಾ ಟ್ರಸ್ಟ್ ಇವರಿಂದ ಸಮೂಹ ನೃತ್ಯ, ಸಂತೋಷ್‍ಕುಮಾರ್ ಇವರಿಂದ ಸುಗಮ ಸಂಗೀತ, ರಾಜಾಭಕ್ಷಿ ಇವರಿಂದ ವಚನ ಗಾಯನ ನಡೆಯಿತು. ಈ ಸಂದರ್ಭದಲ್ಲಿ ಲೇಖಕ ಡಾ. ದಸ್ತಗಿರಿಸಾಬ್ ದಿನ್ನಿ, ನೃತ್ಯ ಶಿಕ್ಷಕ ಅಭಿಷೇಕ್ (ಕೆ.ಸಿ.ಸುಂಕಣ್ಣ), ತಬಲಾ ವಾದಕ ಡಿ.ವಿರುಪಾಕ್ಷಪ್ಪ ದೇವಲಾಪುರ ಇವರನ್ನು ಸನ್ಮಾನಿಸಿದರು. ಸಂಸ್ಥೆಯ ಸಂಚಾಲಕ ಕೆ.ಹೊನ್ನೂರಸ್ವಾಮಿ ಪ್ರಾಸ್ತಾವಿಕ ನುಡಿ ಮಾತನಾಡಿದರೆ, ಕುಮಾರಿ ನೇಹಾ.ಕೆ ಪ್ರಾರ್ಥಿಸಿದರು. ಎಂ.ಎನ್.ಕೊಟ್ರಯ್ಯಸ್ವಾಮಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಶ್ರೀಮತಿ ಲಕ್ಷ್ಮಿದೇವಿ ಹೊನ್ನೂರಸ್ವಾಮಿ ವಂದಿಸಿದರು.