ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸನ್ಮಾನ


ಗುಳೇದಗುಡ್ಡ,ಮಾ.4: ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಇದೇ ದಿ. 19 ರಂದು ಜರುಗಲಿರುವ ತಾಲೂಕು ಕನ್ನಡ ಜಾನಪದ ಪರಿಷತ್ತಿನ ಗುಳೇದಗುಡ್ಡ ತಾಲೂಕು ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ಹಿರಿಯ ಕಲಾವಿದ, ನಾಟಕಕಾರ ಶಿವಪ್ಪ ಕಲ್ಬುರ್ಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಪಟ್ಟಣದ ಮರಡಿಮಠದಲ್ಲಿ ಕನ್ನಡ ಜಾನಪದ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಕಲಾವಿದ ಶಿವಪ್ಪ ಕಲ್ಬುರ್ಗಿ ಅವರನ್ನು ಆಯ್ಕೆಗೊಳಿಸಿ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದ ಶಿವಪ್ಪ ಕಲ್ಬುರ್ಗಿ ಅವರು ಕಳೆದ ಮೂರು ದಶಕಗಳಿಂದ ಜಾನಪದ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆಗಿರುವ ವಿಶೇಷ ಸೇವೆಯನ್ನು ಸಲ್ಲಿಸಿದ್ದಾರೆ.
ಕಲಾವಿದ ಶಿವಪ್ಪ ಕಲಬುರ್ಗಿ ಅವರು ಭಜನೆ, ಕರಡಿ ಮಜಲು, ನಾಟಕ ಹೀಗೆ ಹಲವು ಬಹುಮುಖ ಕ್ಷೇತ್ರಗಳಲ್ಲಿ ತಮ್ಮ ಹಿರಿಮೆಯನ್ನು ಸಾಧಿಸಿದ್ದಾರೆ. ಕಲಾವಿದ ಶಿವಪ್ಪ ಕಲಬುರ್ಗಿ ಅವರು ಕೋಟೆಕಲ್ಲದಲ್ಲಿ ಜರುಗುವ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರನ್ನು ಈಗ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕನ್ನಡ ಜಾನಪದ ಪರಿಷತ್ತಿನ ಸರ್ವ ಪದಾಧಿಕಾರಿಗಳು ಹಾಗೂ ಸಾಹಿತಿಗಳು, ಕಲಾವಿದರು ಶಿವಪ್ಪ ಕಲ್ಬುರ್ಗಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಅಧಿಕೃತ ಆಹ್ವಾನವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷರ ಈ ಸನ್ಮಾನ ಸಂದರ್ಭದಲ್ಲಿ ಜಾನಪದ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ರಾಜನಾಳ, ಕಾರ್ಯದರ್ಶಿ ಬಸವರಾಜ ಸಿಂದಗಿಮಠ, ಸಾಹಿತಿಗಳಾದ ಚಂದ್ರಶೇಖರ್ ಹೆಗಡೆ, ಮಹಾದೇವ ಜಗತಾಪ, ಸಂಗಮೇಶ ಚಿಕ್ಕಾಡಿ, ಮೋಹನ ಕರನಂದಿ, ಈರಣ್ಣ ದೊಡ್ಡಮನಿ, ಶಶಿಕಲಾ ಭಾವಿ, ಚಿದಾನಂದ ಕಾಟವಾ, ಪವಿತ್ರಾ ಜಕ್ಕಪ್ಪನ್ನವರ, ಶಂಕರ ಮುಂದಿನಮನಿ, ಯಲ್ಲಪ್ಪ ಮನ್ನಿಕಟ್ಟಿ, ಶಿವು ಉದ್ನೂರ, ಮಹಮದ್‍ರಫೀ ಖಾಜಿ, ಸುರೇಶ ಸಾರಂಗಿ, ಸಿದ್ದಾರೂಢ ಪರಗಿ, ಬಸವರಾಜ ಕಲಬುರ್ಗಿ, ಹುಚ್ಚೇಶ ಯಂಡಿಗೇರಿ, ಸುರೇಶ ವಗ್ಗಾ, ಕಿರಣ ಬಾಪ್ರಿ, ಚೆನ್ನಮ್ಮ ಜವಳಿ, ಮಲ್ಲಿಕಾರ್ಜುನ ಕಲಿಕೇರಿ, ಕೆ.ಎಸ್.ರಂಜನೆಗಿ, ಅಮರೇಶ ಮುಳಗುಂದ, ಈಶ್ವರ ಕಂಠಿ ಸೇರಿದಂತೆ ಇನ್ನೂ ಅನೇಕರು ಇದ್ದರು.