ಜಾನಪದ ಸಂಸ್ಕøತಿ ರಕ್ಷಿಸಿ ಉಳಿಸಲು ಶ್ರಮಿಸೋಣ : ನಿಂಗಪ್ಪ

ಕಲಬುರಗಿ:ನ.28:ನಮ್ಮ ದೇಶ, ನಾಡಿನ ಮೂಲ ಸಂಸ್ಕøತಿ, ಪರಂಪರೆಯಾದ ಜಾನಪದದಿಂದ ದೇಶ ಹಾಗೂ ನಾಡ ಭಾಷೆ, ಸಂಸ್ಕøತಿ ಉಳಿದು, ಬೆಳೆಯಲು ಸಾದ್ಯವಾಗುತ್ತದೆ. ಜಾನಪದ ನಿಘಂಟುವಿನಲ್ಲಿ ದೊರೆಯದ ಅನುಭಾವದ ಅಮೃತವನ್ನು ಒಳಗೊಂಡ, ಹೃದಯ ಶ್ರೀಮಂತಿಕೆ ಒಳಗೊಂಡಿದೆ. ಇಂತಹ ಸಂಸ್ಕøತಿ, ಪರಂಪರೆಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಒದಗಿಸಿಕೊಡಲು ಶ್ರಮಿಸೋಣ ಎಂದು ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.
ನಗರದ ಜಗತ್ ಬಡಾವಣೆಯಲ್ಲಿ ಭಾನುವಾರ ಜರುಗಿದ ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕದ ಪದಾಧಿಕಾರಿಗಳ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಂಘನೆಯ ಬಲಿಷ್ಠತೆ ದೃಷ್ಟಿಯಿಂದ ಜಿಲ್ಲಾ ಹಾಗೂ ಕೆಲವು ತಾಲೂಕಾಗಳ ಘಟಕಗಳಲ್ಲಿ ಕೆಲವು ಜನ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗಿದೆ. ಡಿ.4, 11 ಮತ್ತು 12ರಂದು ಜಿಲ್ಲಾ ಹಾಗೂ ವಿವಿಧ ತಾಲೂಕಾಗಳಲ್ಲಿ ನೂತನ ಸದಸ್ಯರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಜಾಪ ರಾಜ್ಯಾಧ್ಯಕ್ಷರು ಹೊಸ ಪದಾಧಿಕಾರಿಗಳಿಗೆ ಸತ್ಕರಿಸಿ, ಪರಿಷತ್‍ಗೆ ಸ್ವಾಗತಿಸಲಿದ್ದಾರೆ. ಪರಿಷತ್ ಸಮಾಜಮುಖಿ ಕಾರ್ಯಕ್ಕೆ ಎಲ್ಲಾ ಪದಾಧಿಕಾರಿಗಳ ಸಲಹೆ-ಸಹಕಾರ ಅಗತ್ಯವಾಗಿದೆ ಎಂದರು.
ಜಿಲ್ಲಾ ಘಟಕಕ್ಕೆ ನೂತನ ಸದಸ್ಯರಾಗಿ ಸಿದ್ದಣ್ಣ ಗುಡ್ಡಾ, ಸಾಯಬಣ್ಣ ಹೋಳ್ಕರ್, ವಿಜಯಲಕ್ಷ್ಮೀ ಗುತ್ತೇದಾರ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಂಘಟನಾ ಕಾರ್ಯದರ್ಶಿ ಧರ್ಮಣ್ಣ ಧನ್ನಿ, ಸದಸ್ಯರಾದ ಹಿರಗಪ್ಪ ಎಸ್.ಬರಗಲಿ, ಶಿವಶಂಕರ ಬಿ., ಸೇಡಂ ತಾಲೂಕಾಧ್ಯಕ್ಷ ಶಿವರಾವ ಭೋವಿ, ಕಲಬುರಗಿ ದಕ್ಷಿಣ ನಿಯೋಜಿತ ಅಧ್ಯಕ್ಷ ಸಿದ್ದಲಿಂಗಪ್ಪ ಬಾಗಲಕೋಟ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ್ಯ ಬಸವರಾಜ ತೋಟದ್ ಭಾಗವಹಿಸಿದ್ದರು.