ಜಾನಪದ ಸಂಸ್ಕøತಿ ಬದುಕಿಗೆ ದಾರಿದೀಪ :ಡಾ.ಬಾಲಾಜಿ

ವಿಜಯಪುರ, ಸೆ.11-ಗ್ರಾಮೀಣ ಜನರ ಆಚಾರ ವಿಚಾರ ಸಾಂಪ್ರದಾಯಗಳು ನಮ್ಮ ಬದುಕಿಗೆ ದಾರಿದೀಪಗಳಾಗಿವೆ, ನಮ್ಮನ್ನು ಕಾಪಾಡುತ್ತವೆ ಆದ್ದರಿಂದ ಜನಪದ ವಿಚಾರಗಳನ್ನು ಮೈಗೂಡಿಸಿಕೊಂಡು ವದುಕಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಹೇಳಿದರು.
ಕನ್ನಡ ಜಾನಪದ ಪರಿಷತ್ ವಿಜಯಪುರ ವತಿಯಿಂದ ಕೃಷ್ಣಾ ನದಿಗೆ ಬಾಗಿನ ಅರ್ಪಣೆ ಹಾಗೂ ಜನಪದ ತಿಂತನ ಕಾರ್ಯಕ್ರಮವನ್ನು ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯ ಲಿಂ ಶೃದ್ಧಾನಂದ ಶಿವಯೊಗಿಗಳ ಆಶ್ರಮದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷ್ಣಾ ನದಿಯೂ ಉತ್ತರ ಕರ್ನಾಟಕದ ಜೀವನದಿಯಾಗಿದೆ. ಅದರ ಸಮಸ್ಯೆ ಸರ್ಕಾರ ಪರಿಹರಿಸಬೇಕು ಎಂದು ಹೇಳಿದರು.
ಸಾನಿಧ್ಯವಹಿಸಿ ಮಾತನಾಡಿದ ಕಕಮರಿ ರಾಯಲಿಂಗೇಶ್ವರ ಮಠದ ಪೂಜ್ಯ ಅಭಿನಯ ಗುರುಲಿಂದ ಜಂಗಮ ಸ್ವಾಮಿಗಳು ಮನುಷ್ಯ ಪರಿಸರ ಜೀವಿಯಾಗಿ ಬದುಕಬೇಕು. ಭೂಮಿ, ನೀರು, ಗಾಳಿ, ಸರ್ವಶ್ರೇಷ್ಠ ವಸ್ತುಗಳು, ಸಕಲ ಜೀವಿಗಳಲ್ಲಿ ಒಳಿತನ್ನು ಬಯಸುವ ನದಿಗಳು ನಮಗೆ ಪೂಜ್ಯನಿಯವಾಗಿವೆ. ಜಾನಪದ ಈ ಕಾರ್ಯ ಶ್ರೇಷ್ಠವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಅವರು ಜಾನಪದ ಸಂಸೃತಿಯು ಮಾನವನಿಗೆ ಸಾಮಾಜಿಕ ಸಂವಿಧಾನವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅವರಾಧಿಯ ಮಲ್ಲಿಕಾರ್ಜುನ ಸ್ವಾಮಿಗಳು, ಮನಗೂಳಿ ಪೂಜ್ಯ ಡಾ.ಪೈರೋಜ್ ಸೇಠ, ಜಂಬಲದಿನ್ನಿಯ ಸಿದ್ದರಾಮ ಸ್ವಾಮಿಗಳು, ಮುಂಡಗನೂರಿನ ಬಬಲಾಣ ಸ್ವಾಮಿಗಳು, ಚಿಕ್ಕಗಲಗಲಿಯ ಜನಾರ್ಧನ ಸ್ವಾಮಿಗಳು ಮಾತನಾಡಿದರು.
ವೇದಿಕೆಯಲ್ಲಿ ಕಜಾಪ ಕಾರ್ಯಾಧ್ಯಕ್ಷ ಗೊಳಪ್ಪ ಯರನಾಳ, ಕಜಾಪ ಮಹಿಳಾ ಘಟಕ ಅಧ್ಯಕ್ಷೆ ನೀಲಕಮಲ ಪಾಟೀಲ, ಹಣಮಂತ ಮಂಟೂರ, ಕಜಾಪ ಸದಸ್ಯ ಮೌಲಾಸಾಬ ಜಮಾದಾರ ಉಪಸ್ಥಿತರಿದ್ದರು.
ಕಜಾಪ ಬಬಲೇಶ್ವರ ಅಧ್ಯಕ್ಷ ನಾಗೇಶ ಭೂವಿ ಪ್ರಾಸ್ಥಾವಿಕವಾಗಿ ಮಾತನಾಡಿದರು, ರಮೇಶ ಬಡಿಗೇರ ಸ್ವಾಗತಿಸಿದರು, ಈರಣ್ಣ ಶಿಂತ್ರೆ ನಿರುಪಿಸಿದರು.