ಜಾನಪದ ಸಂಸ್ಕøತಿ ನಮ್ಮ ಬದುಕು ಜಗದ್ಗುರುಃ ಡಾ: ಮಹಾದೇವ ಶಿವಾಚಾರ್ಯ

ವಿಜಯಪುರ, ಸೆ.5-ಜಾನಪದ ಕಲೆ ಸಂಸ್ಕøತಿ ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದು ಜಗದ್ಗುರು ಡಾ ಮಹಾದೇವ ಶಿವಾಚಾರ್ಯ ಆಲಗೂರ ಹಾಗು ಬಬಲೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಟ್ಟಿನಹಳ್ಳಿ ಗ್ರಾಮದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಿಜಯಪುರ. 50 ನೇ ಗಜಾನನ ಉತ್ಸವದ ಸುವರ್ಣ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ ಜಾನಪದ ವೈವಿಧ್ಯಮಯ ಸಂಗೀತ ಉತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಭಾರತೀಯ ಪರಂಪರೆ ಜಾನಪದ ಸಂಸ್ಕøತಿ ಆಧಾರಿತವಾಗಿದೆ. ಹಿರಿಯರು ಕಟ್ಟಿದ ಗ್ರಾಮೀಣ ಜೀವನದ ಮೌಲ್ಯಗಳನ್ನು ಉಳಿಸಿಕೊಳ್ಳುವ ಅವಶ್ಯಕತೆಯಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈಗ ಶ್ರೀಗಳು ಹಾಗು ಸಾಹಿತಿಗಳು ಅರ್ಥಪೂರ್ಣವಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ಉತ್ತಮ ಕಾರ್ಯಕ್ರಮಗಳು ಜರುಗುತ್ತಿರುವದು ಅತ್ಯಂತ ಶ್ಲಾಘನೀಯ ಎಂದರು
ಮನಗೂಳಿ ಹಿರೇಮಠ ಅಭಿನವ ಸಂಗನಬಸವ ಸ್ವಾಮಿಜಿ ಆಶಿರ್ವಚನ ನೀಡಿ ಬಾಲ ಗಂಗಾಧರ ತಿಲಕರು ಯವಕರಲ್ಲಿ ದೇಶಾಭಿಮಾನ ಮೂಢಿಸಿದರು
ಹಿಟ್ಟಿನಹಳ್ಳಿ ಗ್ರಾಮ ಮಾದರಿಯಾಗಿದೆ. ಸಂಗೀತ, ಕಲೆ, ನಾಟಕ, ಗ್ರಾಮೀಣ ಪ್ರದೇಶದ ಮನರಂಜನೆಗಳು ಇಂತಹ ಕಲೆಯನ್ನು ರೂಢಿಸಿಕೊಂಡ ಕಲಾವಿದರನ್ನು ಗುರುತಿಸುವ ಕಾರ್ಯ ಜರುಗಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ ಉತ್ತಮ ಚಟುವಟಿಕೆ ಮಾಡುತ್ತಿರುವದು ಶ್ಲಾಘನೀಯ ಎಂದುರು.ನಾಗಠಾಣ ಮತಕ್ಷೇತ್ರ ಶಾಸಕ ದೇವಾನಂದ್ ಚವ್ವಾಣ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಕಾಂತ ಗೊಂಗಡಿ ವಿಜಯಕುಮಾರ ಘಾಟಗೆ, ರಾಜೇಂದ್ರ ಬಿರಾದಾರ, ಅಶೋಕ ಬಗಲಿ, .ಸಾಹೇಬಗೌಡ ಶಿವನಗೌಡ ಬಿರಾದಾರ, ಮಹಿಬೂಬ ಕೋಲಾರ, ಬಸವರಾಜ ಬಿರಾದಾರ, ಅಬ್ದುಲ್ ವಾಲಿಕಾರ, ಮಲ್ಲಪ್ಪ ಬಾವಿಕಟ್ಟಿ, ಸಿದ್ದಣ್ಣ ಹೊಸಳ್ಳಿ ಜಗನ್ನಾಥ, ಶಿರಬೂರ ಸಾಹೇಬಗೌಡ ದ್ಯಾ ಬಿರಾದಾರ,ಮಹಾಂತೇಶ ಹೊಸೂರು, ಡಾ: ಸುನೀಲ ಕುಸಗಲ್, ಡಾ : ಸಂಗಮೇಶ ಮೇತ್ರಿ, ಕೆ ಸುನಂದಾ, ಆಶಾ ಬಿರಾದಾರ ವೇದಿಕೆಯ ಮೇಲಿದ್ದರು
ಅಶೋಕ ಸಾಲಿ ಶಿವಾನಂದ ಚಿತ್ತಾಪೂರ ಶಂಕರಗೌಡ ಬಿರಾದಾರ ಮುದಸ್ಸರ ವಾಲಿಕಾರ ಕುಮಾರಗೌಡ ಬಿರಾದಾರ ಸಂಗಪ್ಪ ಬಿರಾದಾರ ಸುಭಾಷ್ ಯಂಭತ್ತನಾಳ ಬಿ ಎಚ್ ಬಿರಾದಾರ ಪ್ರಕಾಶ ಚಿಕ್ಕಲಕಿ ಬೀಮಣ್ಣ ಹಳಬರ ಅಪ್ಪು ನಾಟಿಕಾರ ಮಹಾಂತೇಶ ಪಡನಾಡ ಬಸವರಾಜ ಬಿಳೂರ ಗೌಸ ಹವಾಲ್ದಾರ ಮುಂತಾದವರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಹಿಟ್ಟಿನಹಳ್ಳಿ ಗ್ರಾಮದ ಹಿರಿಯರನ್ನು ಗೌರವಿಸಲಾಯಿತು.