ಜಾನಪದ ಸಂಸ್ಕøತಿ ನಮ್ಮ ನಾಡಿನ ಪರಂಪರೆ:ಹಾಸಿಂಪೀರ ವಾಲೀಕಾರ

ವಿಜಯಪುರ, ಡಿ.20:ಜಾನಪದ ಸಂಸ್ಕೃತಿ ನಮ್ಮ ನಾಡಿನ ಪರಂಪರೆ ಆಗಿರುವದರಿಂದ ಅದನ್ನು ಉಳಿಸಿ ಬೆಳಸುವ ಕಾರ್ಯ ಸಾಹಿತ್ಯ ಪರಿಷತ್ತು ಸದಾ ಜವಾಬ್ದಾರಿ ಹೊಂದಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮವಾರ ಸಂಜೆ ಕನ್ನೂರು ಗ್ರಾಮದ ಶ್ರೀ ಮದ್ ರಂಭಾಪುರಿ ಶಾಖಾ ಗುರುಮಠದಲ್ಲಿ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ 18 ನೇ ಪುಣ್ಯ ಸ್ಮರಣೋತ್ಸದ ಅಂಗವಾಗಿ ಜಾನಪದ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದರು.

ಗ್ರಾಮೀಣ ಜನರು ಜನಪದ ಸಾಹಿತ್ಯದ ಮಾಲೀಕರು, ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಯುವಕರು ಜಾನಪದ ಸಾಹಿತ್ಯದಿಂದ ದೂರ ಉಳಿಯುತ್ತಿರುವದು ನೋವಿನ ಸಂಗತಿ, ಜಾನಪದ ಸಾಹಿತ್ಯ ನಮ್ಮೆಲ್ಲರ ಉಸಿರು, ನಮಗೆ ಬದುಕನ್ನು ಕಟ್ಟಿಕೊಟ್ಟ ಜಾನಪದ ಸಾಹಿತ್ಯ ಸರ್ವಕಾಲಿ ಎಂದರು.

ಕನ್ನೂರ ಶಾಂತಿಕುಟೀರದ ಆಚಾರ್ಯ ಶ್ರೀಕೃಷ್ಣ ಸಂಪಗಾಂವಕರ ಮುಖ್ಯ ಅತಿಥಿಗಳಾಗಿ ಮಾತಾನಾಡಿ, ಗ್ರಾಮೀಣ ಜೀವನ ಜನಪದ ಸಾಹಿತ್ಯದಿಂದ ಆವರಿಸಿಕೊಂಡಿದೆ. ನಮ್ಮೆಲ್ಲರ ಹಿರಿಯರು ಜಾನಪದವನ್ನು ಅರ್ಥ ಮಾಡಿಕೊಂಡು ಬದುಕಿದವರು. ಗ್ರಾಮೀಣ ಜೀವನದಲ್ಲಿ ಇರುವ ಸಾಮಾಜಿಕ ಮೌಲ್ಯಗಳು ನಗರಗಳಲ್ಲಿ ಕಾಣುವದಿಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ಬದುಕು ಮತ್ತು ಗ್ರಾಮೀಣ ಸಂಸ್ಕೃತಿಯ ಅರಿವು ಮೂಡಿಸುವದು ಅವಶ್ಯಕತೆಯಿದೆ ಎಂದು ತಿಳಿಸಿದರು.

ರವೀಂದ್ರ ಮೆಡೆಗಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವೇದಿಕೆ ಮೇಲೆ ಗುರುಮಠದ ಪೀಠಾಧ್ಯಕ್ಷರಾದ ಸೋಮನಾಥ ಶಿವಾಚಾರ್ಯರು ಹಾಗೂ ಗುಡ್ಡಾಪುರದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ರಮೇಶ ಬೋಗಾರ, ಮುರಗೆಪ್ಪ ಬೆಳ್ಳುಂಡಗಿ, ಶ್ರೀಕಾಂತ ಬಂಡಿ, ಅಮರಯ್ಯಾ ಸ್ವಾಮಿ, ದಿವ್ಯಾ ಭಿಶೆ, ಪ್ರಣತಿ ರಾವ, ದಿಕ್ಷಾ ಬಿಶೆ ವೇದಿಕೆ ಮೇಲಿದ್ದರು.